ನಂಜನಗೂಡು: ಮಾಜಿ ತಾ.ಪಂ ಸದಸ್ಯ ಹಾಗೂ ಹಾರೋಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್ ಸುರೇಶ್ ಕುಮಾರ್ ಅವರ 47ನೇ ವರ್ಷದ ಹುಟ್ಟುಹಬ್ಬವನ್ನು ನಂಜನಗೂಡಿನಲ್ಲಿ ಹೆಚ್.ಆರ್ ಸುರೇಶ್ ಕುಮಾರ್ ಸ್ನೇಹ ಬಳಗದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂಜನಗೂಡು ನಗರದ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಆರ್ ಸುರೇಶ್ ಕುಮಾರ್, ನಾನು ನಂಜನಗೂಡಿನಲ್ಲಿ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮಾಡಿದ್ದೇನೆ. ಎಲ್ಲರ ಪ್ರೀತಿಯನ್ನು ನೋಡಿ ನನಗೆ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಸ್ನೇಹ ಪ್ರೀತಿಗೆ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.
ನನ್ನ ಸ್ನೇಹಿತರು ಒಳ್ಳೆಯ ಕೆಲಸ ಮಾಡಿದ ಎಂದು ಹೇಳುವ ರೀತಿಯಲ್ಲಿ ನಾನು ಇರುತ್ತೇನೆ. ಹುಟ್ಟುಹಬ್ಬಕ್ಕೆ ಯಾವುದೇ ಹಾರ, ಶಾಲು, ಪೇಟ ಹಾಕಬೇಡಿ. ಬದಲಾಗಿ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಕಲಿಕೆ ಸಾಮಗ್ರಿಗಳನ್ನು ನೀಡಿ ಎಂದು ಮನವಿ ಮಾಡಿದ್ದೆ. ಅದರಂತೆ ಎಲ್ಲರೂ ಅರ್ಥಪೂರ್ಣವಾಗಿ ಆಚರಿಸಿರುವುದು ನನಗೆ ಸಂತಸ ತಂದಿದೆ. ನನ್ನಿಂದಾದಷ್ಟು ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವ ಮುಖಂಡ ದೇವರಸನಹಳ್ಳಿ ರಘು, ಮಾಜಿ ನಗರಸಭಾ ನಾಮನಿರ್ದೇಶಿತ ಸದಸ್ಯ ರಂಗಸ್ವಾಮಿ, ದೇವರಾಜು, ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ಉಪ್ಪನಹಳ್ಳಿ ಶಿವಣ್ಣ, ಕಾಂಗ್ರೆಸ್ ಯುವ ಮುಖಂಡ ಕಳಲೆ ರಾಜೇಶ್, ಸಣ್ಣಯ್ಯ, ಬಾಬು, ನಂಜಪ್ಪ, ನಾಗೇಶ್, ಕ್ಯಾಂಟೀನ್ ರಾಜು, ಕುಮಾರ್ ಕಟ್ಟೆ, ಕೇಬಲ್ ಸೂರಿ, ಜಯಕುಮಾರ್, ಜೀವನ್, ಗುರುಪ್ರಸಾದ್, ಸಿದ್ದು ಫೋಟೋ, ರಾಘವೇಂದ್ರ, ಉಮೇಶ್ ಪಾಲಿ, ಮೂರ್ತಿ ಕಾಟ್ಲೆ ಸೇರಿದಂತೆ ಹಲವರು ಭಾಗವಹಿಸಿದ್ದರು.

