ಮೈಸೂರು: ಮನೆ ಬೀಗ ಮೀಟಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಹುಣಸೂರಿನ ಎನ್ ಇ ಎಸ್ ಕಾಲೋನಿಯಲ್ಲಿ ನಡೆದಿದೆ.ಫ್ರಿಡ್ಜ್ ನಲ್ಲಿದ್ದ ಚಿಲ್ಡ್ ಬಿಯರ್ ಕುಡಿದು ಖದೀಮ ಕೃತ್ಯವೆಸಗಿದ್ದಾನೆ.
149 ಗ್ರಾಂ ಚಿನ್ನಾಭರಣ ಹಾಗೂ ಬೀರುವಿನಲ್ಲಿಟ್ಟಿದ್ದ 5.35 ಲಕ್ಷರೂ ಕಳ್ಳತನವಾಗಿದೆ. ಸಚ್ಚಿನ್ ಪ್ರಕಾಶ್ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ.ಶನಿವಾರ ಸಂಜೆ ಸಚಿನ್ ಕುಶಾಲನಗರದಲ್ಲಿರುವ ಸಂಬಂದಿಕರ ಮದುವೆಗೆ ತೆರಳಿದ್ದರು. ಮದ್ಯ ರಾತ್ರಿ 2 ಗಂಟೆ ವೇಳೆಗೆ ಘಟನೆ ಸಚ್ಚಿನ್ ಪ್ರಕಾಶ್ ಪುತ್ರ ಆರ್ಯನ್ ತನ್ನ ಸ್ನೇಹಿತನೊಂದಿಗೆ ಮನೆಗೆ ಬಂದಿದ್ದಾರೆ.
ಮನೆ ಎದುರಿನ ಪಾರ್ಕ್ ನಲ್ಲಿ ವ್ಯಕ್ತಿಯೊಬ್ಬರು ಬಿಯರ್ ಕುಡಿಯುತ್ತಿದ್ದುದ್ದನ್ನು ಗಮನಿಸಿದ್ದಾರೆ.ನಂತರ ಮನೆಗೆ ಬಾಗಿಲು ತೆರೆದಿರುವುದನ್ನು ಕಂಡು ಅನುಮಾನದಿಂದಲೇ ಒಳ ಪ್ರವೇಶಿಸಿದಾಗ ಮನೆಯ ಫ್ರಿಡ್ಜ್ ಓಪನ್ ಆಗಿದೆ.ಬೆಡ್ ರೂಂನ ಕಬೋಡ್೯ ಸಹ ಓಪನ್ ಆಗಿದೆ.ಕೂಡಲೇ ತಂದೆಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ.ಅಷ್ಟರಲ್ಲಿ ಪಾಕ್೯ನಲ್ಲಿ ಕುಳಿತಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸ್ಥಳಕ್ಕೆ ಶ್ವಾನದಳ. ಬೆರಳಚ್ಚು ತಜ್ಞರು ಭೇಟಿ ನೀಡಿದ್ದರು. ಮನೆಯ ಬೀರುವಿನಲ್ಲಿ 149 ಗ್ರಾಂ. ಚಿನ್ನಾಭರಣ ಹಾಗೂ 5.35 ಲಕ್ಷರೂ ನಗದು ಕಳ್ಳತನವಾಗಿರುವ ಬಗ್ಗೆ ಸಚ್ಚಿನ್ ಪ್ರಕಾಶ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕಳ್ಳನ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

