ನಂಜನಗೂಡು: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ಕದ್ಯೋಯ್ದ ಘಟನೆ ನಂಜನಗೂಡು ನಗರದಲ್ಲಿ ನಡೆದಿದೆ.

ನಂಜನಗೂಡು ನಗರದ ಚಾಮುಂಡೇಶ್ವರಿ ಲೇಔಟ್ ನ ಮೋಹನ್ ಎಂಬುವವರ ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ತೆರಳಿದ ಕದೀಮರು ಅಡುಗೆಮನೆಯ ಕಿಟಕಿಯನ್ನು ಕುಯ್ದು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ಕದ್ದು ಪರಾರಿಯಾಗಿದ್ದಾರೆ.

47 ಗ್ರಾಂ ಚಿನ್ನದ ಲಾಂಗ್ ಸರ, 19 ಗ್ರಾಂ ಚಿನ್ನದ ನೆಕ್ಲೆಸ್ ಓಲೆ ಸೆಟ್, 20 ಗ್ರಾಂ ಕುತ್ತಿಗೆ ಚೈನ್, ಚಿನ್ನದ ಬ್ರಾಸ್ ಲೈಟ್ 20 ಗ್ರಾಂ, ಬಿಳಿ ಹರಳಿನ ಚಿನ್ನದ ಉಂಗುರ 15 ಗ್ರಾಂ ಮತ್ತು 17 ಗ್ರಾಂ ಚಿನ್ನದ ಉಂಗುರ, ಡೈಮಂಡ್ ಉಂಗುರ 5 ಗ್ರಾಂ, ಚಿನ್ನದ 12 ಜೊತೆ ಓಲೆ 60 ಗ್ರಾಂ, ಒಂದು ಜೊತೆ ಚಿನ್ನದ ಜುಮುಕಿ 10 ಗ್ರಾಂ, ಚಿನ್ನದ ಬಿಳಿಯಲಿನ ಉಂಗುರ 6 ಗ್ರಾಂ, ಬೆಳ್ಳಿಯ ಒಂದು ಜೊತೆ ದೀಪಾಳೆ ಕಂಬ 1.12 ಕೆಜಿ, ಎರಡು ಬೆಳ್ಳಿ ತಟ್ಟೆ 1/2 ಕೆಜಿ, ಬೆಳ್ಳಿ ಹೂಬುಟ್ಟಿ 1/2 ಕೆಜಿ, ಮೂರು ಜೊತೆ ಬೆಳ್ಳಿ ಚಿಕ್ಕ ದೀಪ 1 ಕೆಜಿ, ಹಾಗೂ 1.10 ಲಕ್ಷ ನಗದು ಹಾಗೂ ಸುಮಾರು 25 ಲಕ್ಷ ರೂ. ಬೆಲೆ ಬಾಳುವ ಚಿನ್ನ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲು ಮಾಡಿಕೊಂಡು ಕಳ್ಳರಿಗೆ ಬಲೆ ಬೀಸಿದ್ದಾರೆ. ಮಾಜಿ ಶಾಸಕ ಬಿ ಹರ್ಷವರ್ಧನ್ ಕಳ್ಳತನ ನಡೆದಿರುವ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಮೈಸೂರು ನಗರಕ್ಕಿಂತ ನಂಜನಗೂಡಿನಲ್ಲಿ ಹೆಚ್ಚು ಕಳ್ಳತನ ಪ್ರಕರಣಗಳು ನಡೆಯುತ್ತಿವೆ, ಪೊಲೀಸರು ಹೇಳಿದರು ಎಂದು ಸಿಸಿ ಕ್ಯಾಮೆರಾ ಗಳನ್ನು ಹಾಕಿಸಿಕೊಂಡಿದ್ದಾರೆ ಈಗ ಮನೆ ಮನೆಗೆ ನಾಯಿಯನ್ನು ನಾವು ಸಾಕಬೇಕಾ ಎಂದು ಪೊಲೀಸ್ ಇಲಾಖೆಯ ವಿರುದ್ಧ ಮಾಜಿ ಶಾಸಕ ಬಿ. ಹರ್ಷವರ್ಧನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ಕಳ್ಳರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.