ಮದ್ದೂರು: ಈಗ ಎಡಿಜಿಪಿ ಅವರ ಬಳಿ ಮನವಿ ಮಾಡಿದ್ದೇವೆ. ಮಸೀದಿ ಬಳಿ ನಿತ್ಯ ಹಿಂದೂಗಳ ಮೇಲೆ ಕಿರುಕುಳ ಆಗ್ತಿದೆ. ನಿನ್ನೆ ಮಸೀದಿಯಲ್ಲಿ ಇದ್ದವರ ಮೇಲೆ ಕ್ರಮ ಆಗಬೇಕು. ಈಗಾಗಲೇ 26 ಮಂದಿಯನ್ನ ಬಂಧಿಸಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ನಾಳಿನ ಪ್ರತಿಭಟನೆ ಬಗ್ಗೆ ಸ್ಥಳೀಯ ನಾಯಕರು ನಿರ್ಧಾರ ಮಾಡ್ತಾರೆ. ನಾಳಿದ್ದು ಸಮೂಹಿಕ ಗಣೇಶ ವಿಸರ್ಜನೆಗೆ ವಿಜಯೇಂದ್ರ ,ಆರ್.ಅಶೋಕ್ ಭಾಗಿಯಾಗ್ತಾರೆ. ಜೆಡಿಎಸ್ ನ ಹಲವು ನಾಯಕರು ನಾಳಿದ್ದು ಸಾಥ್ ನೀಡಲಿದ್ದಾರೆ. ಚನ್ನಪಟ್ಟಣದಿಂದಲೂ ಇಬ್ಬರು ಬಂದು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಅವರ ಮೇಲೆ ಕಠಿಣ ಕ್ರಮ ಆಗಬೇಕು.
ಘಟನೆಯಲ್ಲಿ ಬಿಜೆಪಿ ರಾಜಕಾರಣ ಮಾಡ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ ಮೊನ್ನೆ ಸಿದ್ದರಾಮಯ್ಯರವರು ಟೋಪಿ ಹಾಕೊಂಡು ಅವರನ್ನ ಶಾಂತಿಪ್ರಿಯರು ಅಂದ್ರು. ನೋಡಿ ಸ್ವಾಮಿ ನಿಮ್ಮ ಶಾಂತಿ ಪ್ರಿಯರ ಕೆಲಸ. ಶಾಂತಿ ಪ್ರಿಯರು ಯಾಕೆ ಕಲ್ಲು ತೂರಾಟ ಮಾಡ್ತಾರೆ. ಯಾವ ಮುಸ್ಲಿಂ ರಾಷ್ಟ್ರದಲ್ಲೂ ಶಾಂತಿ ಇಲ್ಲ. ಇವರನ್ನ ಯಾಕೆ ಅಷ್ಟೊಂದು ಓಲೈಕೆ ಮಾಡ್ತೀರಾ. ನಾಗಮಂಗಲದಲ್ಲೂ ಇಂತಹ ಘಟನೆ ಆಯ್ತು ಎಂದರು.
ಮೈಸೂರಿನ ಉದಯಗಿರಿಯಲ್ಲೂ ಡಿಸಿಪಿ ಕಾರಿನ ಮೇಲೆ ಕಲ್ಲು ತೂರಿದ್ರು. ಇದಕ್ಕೆಲ್ಲ ಏನು ಕಾರಣ ಸರ್.? ಅವರ ಮೇಲಿನ ಕೇಸ್ ವಾಪಸ್ಸ್ ತೆಗೆದುಕೊಂಡ ಪರಿಣಾಮ ಇದು. ಸಿಎಂ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

