ಮೈಸೂರು: ಎರಡು ದಿನಗಳಿಂದ ಭಾರಿ ಮಳೆ ಹಿನ್ನಲೆ ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಹೊಸೂರು ಗ್ರಾಮದಲ್ಲಿ ಮನೆ ಗೋಡೆ ಕುಸಿದಿದೆ.

ಗೋಡೆ ಕುಸಿತಕ್ಕೆ ಮನೆಯಲ್ಲಿದ್ದ ವಸ್ತುಗಳು ನುಜ್ಜುಗುಜ್ಜಾಗಿದ್ದು, ಹೊಸೂರು ಗ್ರಾಮದ ಚಂದ್ರೇಗೌಡ ಎಂಬುವವರಿಗೆ ಸೇರಿದ ಮನೆಯಾಗಿದೆ. ವಾಸವಿರಲು ಮನೆಯಿಲ್ಲ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಚಂದ್ರೇಗೌಡ ಮನವಿ ಮಾಡಿದ್ದಾರೆ.