ಮೈಸೂರು: ಕೋಟೆಹುಂಡಿಯಲ್ಲಿ ಹಿರಿಯರಿಗೆ ಪ್ರೀತಿಯ ಆಶ್ರಯ ತಾಣವೊಂದು ಕಾರ್ಯನಿರ್ವಹಿಸುತ್ತಿದೆ. HEART ಸಂಸ್ಥೆಯ ಅಡಿಯಲ್ಲಿ “ಹೃದಯ ಸ್ಪಂದನ ಹಿರಿಯರ ಆರೈಕೆ ಕೇಂದ್ರ” ಆಸರೆಯಿಲ್ಲದ ಹಿರಿಯರಿಗೆ ಆಸರೆಯಾಗಿದೆ ಎಂದು ಸಂಸ್ಥಾಪಕ ಶಿವಕುಮಾರ್ ತಿಳಿಸಿದರು.

ಸುರಕ್ಷಿತ ವಸತಿ, ಪೌಷ್ಠಿಕ ಆಹಾರ, ಮೂಲಭೂತ ಆರೋಗ್ಯ ಸೇವೆ ಜೊತೆಗೆ ಭಾವನಾತ್ಮಕ ಬೆಂಬಲವನ್ನು ಇಲ್ಲಿ ನೀಡಲಾಗುತ್ತಿದೆ. ಬೆಳಗ್ಗಿನಿಂದ ರಾತ್ರಿಯವರೆಗೆ ಊಟದ ವ್ಯವಸ್ಥೆ, ಟಿವಿ, ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಿರಿಯರನ್ನು ಸದಾ ಚಟುವಟಿಕೆಯಿಂದ ಇಡಲಾಗುತ್ತದೆ.
ತಂದೆ-ತಾಯಿಯನ್ನು ನೋಡಿಕೊಳ್ಳಲು ಆಗದವರಿಗೆ ಇಲ್ಲಿ ಉಚಿತ ದಾಖಲಾತಿ ಇದೆ. ಹಾಗೂ ವಾರ, ತಿಂಗಳುಗಟ್ಟಲೆ ಅಲ್ಪಾವಧಿ ವಸತಿ ಸೌಲಭ್ಯವೂ ಲಭ್ಯವಿದೆ. ಈ ಸಂಸ್ಥೆಯು ಸಂಪೂರ್ಣವಾಗಿ ಸಹೃದಯ ದಾನಿಗಳ ನೆರವಿನಿಂದ ನಡೆಯುತ್ತಿದೆ. ದವಸ-ಧಾನ್ಯ, ಔಷಧಿ, ಧನಸಹಾಯ ನೀಡಲು ಇಚ್ಛಿಸುವವರು ಸಂಪರ್ಕಿಸಬಹುದು.
ನಮ್ಮಲ್ಲಿ ಜಾತಿ, ಬಡವ-ಶ್ರೀಮಂತ ಭೇದವಿಲ್ಲ. ಹಿರಿಯರ ಕೊನೆಯ ಕ್ಷಣಗಳನ್ನು ಗೌರವ ಮತ್ತು ಸಂತೋಷದಿಂದ ಕಳೆಯುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ಸಂಸ್ಥಾಪಕ ಶಿವಕುಮಾರ್ ಅವರು ತಿಳಿಸಿದ್ದಾರೆ.

