ಮೈಸೂರು: ಪುಟ್ ಪಾತ್ ನಿಂದ ತೆರುವಾದ ಪದಾರ್ಥಗಳು ಸಾರ್ವಜನಿಕ ಶೌಚಾಲಯವನ್ನ ಸ್ವಾಹ ಮಾಡಿದೆ. ಆಶ್ಚರ್ಯ ಅನಿಸಿದ್ರೂ ಇದು ನಿಜ. ಮೈಸೂರಿನ ಕೆ.ಆರ್.ಎಸ್ ಮುಖ್ಯ ರಸ್ತೆಯಲ್ಲಿ ಇಂತಹ ಒಂದು ದೃಶ್ಯ ಕಂಡುಬಂದಿದೆ. ಸಾರ್ವಜನಿಕ ಶೌಚಾಲಯ ಪ್ರವೇಶ ಧ್ವಾರದಲ್ಲಿ ರಾಶಿ ರಾಶಿ ಪದಾರ್ಥಗಳನ್ನ ಇಡಲಾಗಿದೆ.ಶೌಚಾಲಯವನ್ನೇ ಬಳಕೆಗೆ ಬಾರದಂತೆ ಮಾಡಲಾಗಿದೆ.
ಮೈಸೂರು ಮಹಾನಗರಪಾಲಿಕೆ ವತಿಯಿಂದ ವಲಯ ಕಚೇರಿ 5 ರಿಂದ ಕೆ.ಆರ್.ಎಸ್.ಮುಖ್ಯ ರಸ್ತೆಯಲ್ಲಿ ಫುಟ್ ಪಾತ್ ತೆರುವು ಕಾರ್ಯಾಚರಣೆ ನಡೆಸಿತು. 30 ಕ್ಕೂ ಹೆಚ್ಚು ಪೆಟ್ಟಿಗೆ ಅಂಗಡಿ ತೆರುವುಗೊಳಿಸಲಾಯಿತು. ತೆರುವಾದ ಪದಾರ್ಥಗಳನ್ನ ಸಾಗಿಸದ ಅಂಗಡಿ ಮಾಲೀಕರೊಬ್ಬರು ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯದ ಮುಂದೆ ಸಂಗ್ರಹಿಸಿ ಇಟ್ಟಿದ್ದಾರೆ.
ಇದರಿಂದಾಗಿ ಶೌಚಾಲಯ ಬಂದ್ ಆಗಿದೆ.ಸಾರ್ವಜನಿಕರಿಗೆ ಪ್ರವೇಶಿಸಲು ಸಾಧ್ಯವಾಗದಂತೆ ಪದಾರ್ಥಗಳನ್ನ ಇಟ್ಟಿದ್ದಾರೆ. ಸದರಿ ಶೌಚಾಲಯ ನಿರ್ವಹಣೆ ವಾಣಿ ವಿಲಾಸ ನೀರು ಸರಬರಾಜು ಕಚೇರಿಯ ಜವಾಬ್ದಾರಿ ಆಗಿದೆ. ಮುಖ್ಯ ರಸ್ತೆಯಲ್ಲೇ ಇಂತಹ ದೃಶ್ಯ ಕಂಡು ಬಂದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಫುಟ್ ಪಾತ್ ನಿಂದ ಮುಕ್ತಿ ಪಡೆದ ಪದಾರ್ಥಗಳು ಮತ್ತೆ ಫುಟ್ ಪಾತ್ ಅನ್ನೇ ಆಕ್ರಮಿಸಿರುವುದಲ್ಲದೆ ಸಾರ್ವಜನಿಕ ಶೌಚಾಲಯವನ್ನೂ ಸಹ ಬಂದ್ ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ.

