News Karnataka Kannada
Saturday, May 11 2024
ಹಾಸನ

ಜೂ.21 ವಿಶ್ವ ಯೋಗ ದಿನಾಚರಣೆ : ಜಾಥಾಕ್ಕೆ ಚಾಲನೆ

Yoga day
Photo Credit : News Kannada

ಹಾಸನ: ಪ್ರತಿನಿತ್ಯ ಯೋಗಕ್ಕಾಗಿ ಕೆಲ ಸಮಯ ಮೀಸಲಿಟ್ಟರೆ ಜೀವನಪೂರ್ತಿ ಆರೋಗ್ಯಯುತವಾಗಿರಬಹುದು ಎಂದು ನಗರಸಭೆ ಆಯುಕ್ತ ಸತೀಶ್ ಕುಮಾರ್ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಯುವಜನ ಸಬಲೀಕರಣ ಕ್ರೀಡಾ ಇಲಾಖೆ ನೆಹರು ಯುವ ಕೇಂದ್ರ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ರಾಜೀವ್ ಆಯುರ್ವೇದ ಮಹಾವಿದ್ಯಾಲಯ, ಪತಂಜಲಿ ಯೋಗಾ ಸಮಿತಿ ಪರಿವಾರ ಮತ್ತು ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜೂನ್ 21 ರಂದು ನಡೆಯುವ ವಿಶ್ವ ಯೋಗಾ ದಿನದ ಅಂಗವಾಗಿ ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಯೋಗ ಜಾಥಾವನ್ನು ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಉದ್ಘಾಟಿಸಿದರು.

ಮಾತನಾಡಿದ ಬಳಿಕ ಮಾತನಾಡಿದ ಅವರು,   ಅವದ, ಪ್ರತಿನಿತ್ಯ ಬೆಳಿಗ್ಗೆ ಜಿಮ್‌ಗೆ ಹೋಗುತ್ತೇವೆ. ಆದರೆ ಅದನ್ನು ಕ್ರಮ ಬದ್ಧವಾಗಿ ಮಾಡಿದರೆ ಜೀವನ ಉತ್ತಮವಾಗಿರುತ್ತದೆ. ಪ್ರತಿದಿನ ಕೆಲ ಸಮಯಗಳ ಕಾಲ ಯೋಗಕ್ಕಾಗಿ ಮೀಸಲಿಟ್ಟು ನಂತರದಲ್ಲಿ ನಿತ್ಯ ಚಟುವಟಿಕೆ ಮಾಡಿಕೊಂಡರೆ ಸಂತೋಷಮಯ ಜೀವನ ನಿಮ್ಮದಾಗುತ್ತದೆ ಎಂದು ಸಲಹೆ ನೀಡಿದರು.
ಪತಾಂಜಲಿ ಯೋಗಾ ಸಮಿತಿ ಪರಿವಾರದ ಶೇಷಪ್ಪ ಮಾತನಾಡಿ, ವಿಶ್ವ ಯೋಗ ದಿವಸದ ಅಂಗವಾಗಿ ಯೋಗಾ ಜಾಥವನ್ನು ಹಮ್ಮಿಕೊಂಡಿದ್ದು, ವಿಶ್ವಶಾಂತಿಗಾಗಿ ಮತ್ತು ಆರೋಗ್ಯಕ್ಕಾಗಿ ನೂರಾರು ಸಂಖ್ಯೆಯಲ್ಲಿ ಜಾಥ ಮಾಡಲಾಗುತ್ತಿದೆ ಎಂದರು.

ಭಾರತದ ದೇಶ ಎಂದರೇ ಇಡೀ ವಿಶ್ವದಲ್ಲಿ ಯೋಗವನ್ನು ಹಾಗೂ ಜ್ಞಾನವನ್ನು ಕೊಟ್ಟಂತಹ ದೇಶವಾಗಿದೆ. ಕೇವಲ ಒಂದು ದಿನದ ಯೋಗವಾಗದೇ ವರ್ಷವಿಡಿ ಯೋಗವನ್ನು ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವಸುದೈವ ಕುಟುಂಬಕಂ ಪ್ರತಿ ಮನೆಯ ಅಂಗಳದಲ್ಲೂ ಯೋಗ ಎನ್ನುವ ವೇದಬಾಕ್ಯದೊಂದಿಗೆ ಯೋಗಾ ಜಾಥವು ಜಿಲ್ಲಾಧಿಕಾರಿ ಕಛೇರಿ ಆವರಣದಿಂದ ಹೊರಟು ಬಿ.ಎಂ. ರಸ್ತೆ ಮೂಲಲಕ ಎನ್.ಆರ್. ವೃತ್ತಕ್ಕೆ ಬಂದು ಕೆಲ ಸಮಯ ಮಾನವ ಸರಪಳಿ ಮಾಡಿ ಯೋಗದ ಬಗ್ಗೆ ಜನರಿಗೆ ಅರಿವು ಮೂಡಿಸಿದರು. ನಂತರ ಹೇಮಾವತಿ ಪ್ರತಿಮೆ ಮೂಲಲಕ ಮಹಾವೀರ ವೃತ್ತಕ್ಕೆ ಬಂದು ಕೊನೆಗೊಳಿಸಲಾಯಿತು.

ಯೋಗಾ ಜಾಥ ಕಾರ್ಯಕ್ರಮದಲ್ಲಿ ಆಯುರ್ವೇದ ಆಸ್ಪತ್ರೆಯ ವೀಣಾಲತಾ, ಪತಂಜಲಿ ಯೋಗಾ ಪರಿವಾರದ ರಾಧ ತಿವಾರಿ, ಗಿರೀಶ್, ಆರೋಗ್ಯ ಇಲಾಖೆಯ ಮಂಜುನಾಥ್, ಭಾರತ್ ಸೇವಾದಳದ ಸಂಘಟಕರಾದ ವಿ.ಎಸ್. ರಾಣಿ, ಹಿರಿಯ ಕಲಾವಿದ ಮತ್ತು ಪ್ರಶಸ್ತಿ ವಿಜೇತ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು