Categories: ಹಾಸನ

ಜ್ಯಾತಿ ವ್ಯಾಮೋಹ ಬಿಟ್ಟು ಜೆಡಿಎಸ್‌ ಬೆಂಬಲಿಸಿ- ಎಚ್‌.ಡಿ.ಕುಮಾರಸ್ವಾಮಿ

ಚಡಚಣ: ನಾಗಠಾಣ ಮತಕ್ಷೇತ್ರ ಎಲ್ಲಾ ನೀರಾವರಿ ಯೋಜನೆಗಳನ್ನುಅನುಷ್ಠಾನಗೊಳಿಸಿ, ರೈತರನ್ನು ಸ್ವಾವಲಂಬಿಗಳನ್ನಾಗಿಸಿ ಅವರ ಬದುಕು ಹಸನಾಗಿಸಲು ಜ್ಯಾತಿ ವ್ಯಾಮೋಹ ಬಿಟ್ಟು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಲಾದ ನಾಗಠಾಣ ಮತಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿ ದೇವಾನಂದ ಚವ್ಹಾಣ ಪರ ಆಯೋಜಿಸಲಾದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ಪಂಚರತ್ನ ಯೋಜನೆಯ ಉದ್ದೇಶ ಬಡವರಿಗೆ,ರೈತರ ಮಕ್ಕಳು ,ಹಾಗೂ ಕೂಲಿ ಕಾರ್ಮಿಕ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದು,ಭೂ ರಹಿತ ಕೂಲಿ ಕಾರ್ಮಿಕರಿಗೆ ಮಾಸಿಕ 2 ಸಾವಿರ ಸಹಾಯ ಧನ, ಬಿತ್ತನೆ ಸಮಯದಲ್ಲಿ ರೈತರಿಗೆ ಪ್ರತಿ ಏಕರೆ ಪ್ರದೇಶಕ್ಕೆ 10 ಸಾವಿರ ಸಹಾಯಧನ, ಬಾಣಂತಿಯರಿಗೆ ಉತ್ತಮ ಗುಣಮಟ್ಟದ ಆಹಾರಕ್ಕಾಗಿ ಆರು ತಿಂಗಳುಗಳ ವರೆಗೆ ಪ್ರತಿ ತಿಂಗಳು 6 ಸಾವಿರ ಸಹಾಯಧನ, ಅಂಗವಿಕಲರು, ವಿಧವೆಯರಿಗೆ ಪ್ರತಿ ತಿಂಗಳು 2 ಸಾವಿರ, ವೃದ್ಧಾಪ್ಯ ವೇತನದಾರರಿಗೆ ಮಾಸಿಕ 5 ಸಾವಿರ ಗೌರವಧನ ಹೆಚ್ಚಿಸುವದು, ಬಡವರಿಗೆ ವಾರ್ಷಿಕ 5 ಸಿಲಿಂಡರ ಉಚಿತವಾಗಿ ನೀಡುವದಲ್ಲದೆ , ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಹಾಗೂ ಸ್ವ ಸಹಾಯ ಗುಂಪುಗಳ ಸಾಲ ಮನ್ನಾ ಮಾಡುವದು, ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ನೀಡುವದು, ಸಮಾಜದ ಅಭೀವೃದ್ಧಿ, ಮಹದಾಯಿ ಯೋಜನೆಯ ಅನುಷ್ಠಾನಗಳಂತಹ ಯೋಜನೆಗಳನ್ನು ಹಮ್ಮಿಕೊಂಡು, ಸಮಾಜದ ಪ್ರತಿಯೊಬ್ಬರ ಬದುಕು ಹಸನಾಗಿಸಲು ನಮ್ಮ ಪಕ್ಷ ಬದ್ಧವಾಗಿದೆ, ಅದಕ್ಕಾಗಿ ಒಂದು ಬಾರಿ ಜೆಡಿಎಸ್‌ ಪಕ್ಷ ಸ್ವತಂತ್ರವಾಗಿ ಸರ್ಕಾರ ರಚಿಸಲು ನಾಗಠಾಣ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಾ.ದೇವಾನಂದ ಚವ್ಹಾಣ ಅವರನ್ನು ಬೆಂಬಲಿಸಿ, ಎಂದು ಮನವಿ ಮಾಡಿದರು.

ಪ್ರಸ್ತಾವಿಕವಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ ಮಾತನಾಡಿ,ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ರೈತರಿಗೆ, ಬಡವರಿಗೆ ಹಾಗೂ ಹಿಂದುಳಿದವರಿಗೆ ಸುಳ್ಳು ಭರವಸೆ ನೀಡುತ್ತ ಮೋಸಮಾಡುತ್ತಿವೆ, ರೈತರ ಹಿತ ಹಾಗೂ ನಿರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜೆಡಿಎಸ್‌ ಅಭ್ಯರ್ಥಿ ದೇವಾನಂದ ಚವ್ಹಾಣ ಅವರನ್ನು ಬೆಂಬಲಿಸಿ ಎಂದರು.

ಅಭ್ಯರ್ಥಿ ಡಾ.ದೇವಾನಂದ ಚವ್ಹಾಣ ಮಾತನಾಡಿ,ಸಮಾಜ ಸೇವೆಗಾಗಿ ಇನ್ನೊಂದು ಬಾರಿ ತಮಗೆ ಬೆಂಬಲಿಸುವಂತೆ ಮತದಾರರಲ್ಲಿ ಶಿರಬಾಗಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತೊರೆದ ಪಂಚಪ್ಪ ಕಲಬುರ್ಗಿ, ಜಟ್ಟೆಪ್ಪ ಜಿತ್ತಿ, ಶಾಂತಗೌಡ ಬಿರಾದಾರ, ಬೀರಪ್ಪ ಸಲಗರ, ಶ್ರೀಶೈಲಾಗೌಡ ಸಾಲುಟಗಿ, ಜಕರಾಯ ಮಣಿಯಾರ, ಪಿರಸಾಬ ಗಚ್ಚಿನಮಳ, ಎಂ ಸಿ ಮುಲ್ಲಾ, ಅಜಿತ ತೇಲಿ, ಅಪ್ಪುಗೌಡ ಬಂಡಿ, ಬಸವರಾಜ ನಿಂಬರಗಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಜೆಡಿಎಸ್ ಪಕ್ಷದ ತತ್ವ ಸಿದ್ದಂತ ಮೆಚ್ಚಿ ಸೇರ್ಪಡೆಗೊಂಡರು.

ವೇದಿಕೆಯ ಮೇಲೆ ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ಜಿ.ಪಾಟೀಲ ಹಲಸಂಗಿ,ಮುಖಂಡರಾದ ಬಾಬುಗೌಡ ಪಾಟೀಲ, ವಿಠ್ಠಲ ವಡಗಾಂವ, ಸುನೀತಾ ಚವ್ಹಾಣ,ರವಿ ಚವ್ಹಾಣ,ಯೂನೂಸ್‌ ಅಲಿ ಮಕಾನದಾರ,ಚಂದ್ರಶೇಖರ ನಿರಾಳೆ, ಭಿಮಾಶಂಕರ ವಾಳಿಖಿಂಡಿ,ಬಾಬು ಚವ್ಹಾಣ,ಇಮಾಮ ಪಟೇಲ,ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಅಮಸಿದ್ದ ಬಳಗಾನೂರ. ಮಂಡಲ ಅಧ್ಯಕ್ಷ ಭೀಮಾಶಂಕರ ವಾಳಿಕಿಂಡಿ ಧೂಳೇಶ ಚವ್ಹಾಣ,ನಿಂಗನಗೌಡ ಸೋಲಾಪೂರ, ರಾಮ ಮಾಲಾಪೂರ,ಪ್ರವೀಣ ಕಲ್ಯಾಣಶೆಟ್ಟಿ, ಸತೀಶ ಬಂಡಿ, ಮುರ್ತುಜಾ ನದಾಫ, ಸಿಕಂದರ ಸಾವಳಸಂಗ, ಸಿದ್ದು ಸೋಲಾಪೂರ, ಸಚಿನ್‌ ವಾಲಿ, ಮಹಾದೇವ ಬನಸೋಡೆ, ಪ್ರವೀಣ ಪಾಟೀಲ, ದೀಪಕ್‌ ಕದಂ , ವಿನೋದ, ಮಹಾದೇವ ಶಿಂಧೆ, ರವಿ ಶಿಂಧೆ, ಗುರುಬಾಳ ಗಿಡವೀರ, ರಾಜಶೇಖರ ಡೋಣಗಾಂವ ಸೇರಿದಂತೆ ಪಟ್ಟಣದ ಸುತ್ತಲಿನ ವಿವಿಧ ಗ್ರಾಮಗಳ ಸಹಸ್ರಾರು ಸಂಖ್ಯೆಯ ಜೆಡಿಎಸ್‌ ಬೆಂಬಲಿಗರು, ಮಹಿಳೆಯರು, ಕಾರ್ಯಕರ್ತರು ಇದ್ದರು.

Sneha Gowda

Recent Posts

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲ್ಲುತ್ತಾರೆ : ಹೆಚ್‌ಡಿಕೆ

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಒಂದು ಲಕ್ಷದ ಮತ ದಿಂದ ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಮಜಿಮುಖ್ಯಮಂತ್ರಿ ಕುಮಾರ ಸ್ವಾಮಿ…

36 mins ago

ಪ್ರಜ್ವಲ್ ರೇವಣ್ಣ ಉಚ್ಚಾಟನೆ : ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ

ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ ಈ ಬಗ್ಗೆ ನಮ್ಮ…

46 mins ago

ಬಿಜೆಪಿ ಅಭ್ಯರ್ಥಿ ಜೈಲಿಗೆ ಹೋಗುವ ದಿನಕ್ಕೆ ಕ್ಷಣಗಣನೆ : ಪ್ರಿಯಾಂಕಾ ಗಾಂಧಿ

ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಪ್ರಧಾನಿ ಮೋದಿ‌ ಸುಮ್ಮನೆ ಇದ್ದರಲ್ಲದೆ ಇಂದು ಕರ್ನಾಟಕದಲ್ಲಿ ಸಾವಿರಾರು…

59 mins ago

ಕಾಂಗ್ರೆಸ್ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದ ಕಾರ್ಯಕರ್ತರು

ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲವು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವರಾಧ್ಯ ದಳವಾಯಿ ಸುಂಬಡ ಅವರು…

1 hour ago

ದೇಶ ಭಕ್ತಿಯನ್ನು ಮೋದಿಯವರಿಗೆ ಗುತ್ತಿಗೆ ಕೊಟ್ಟಿಲ್ಲ: ಲಕ್ಷ್ಮಣ ಸವದಿ

ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಮಾಜಿ ಮುಖ್ಯಮಂತ್ರಿ…

1 hour ago

ಶನಿವಾರಸಂತೆ ಹಲ್ಲೆ ಪ್ರಕರಣ : ನಿಷ್ಪಕ್ಷಪಾತ ತನಿಖೆಗೆ ಹನೀಫ್ ಒತ್ತಾಯ

ಕಳೆದ ಚುನಾವಣಾ ದಿನದಂದು ಕ್ಷುಲ್ಲಕ ವಿಚಾರವಾಗಿ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತವಾದ…

1 hour ago