Categories: ಮಂಗಳೂರು

ಕಾಂಗ್ರೆಸ್‌ಗೆ ಮನೆಮನೆ ತೆರಳಿ ಗ್ಯಾರಂಟಿ ಕಾರ್ಡ್ ಕೊಡುವ ದೌರ್ಬಾಗ್ಯ ಬಂದಿದೆ: ಶ್ರೀನಿವಾಸ ಪೂಜಾರಿ

ಬೆಳ್ತಂಗಡಿ: ಉತ್ತರ ಕನ್ನಡ, ಉಡುಪಿ, ದ.ಕ. ಜಿಲ್ಲೆಯ ೧೯ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳ್ತಂಗಡಿ ಕ್ಷೇತ್ರದ ಜನತೆ ಮಾತ್ರ ಬದುಕು ಕಟ್ಟಿಕೊಂಡಿರುವುದನ್ನು ನಾನು ಗಮನಿಸಿದ್ದೇನೆ. ಹರೀಶ್ ಪೂಂಜರು ರಾಜ್ಯದ ಮುಖ್ಯಮಂತ್ರಿ, ಸಚಿವರುಗಳನ್ನು ಕಾಡಿ ಬೇಡಿ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ಮೊತ್ತದ ಅನುದಾನ ಹರೀಶ್ ಪೂಂಜರು ತಂದಿದ್ದಾರೆ.

ರಾಜ್ಯದ ೨೨೪ ಕ್ಷೇತ್ರದಲ್ಲಿ ನಿರ್ಮಾಣ ಆಗದಷ್ಟು ರಸ್ತೆ, ಶಾಲೆ, ಅಂಗನವಾಡಿ, ಆಸ್ಪತ್ರೆಗಳು ಇಲ್ಲಿ ಅಭಿವೃದ್ಧಿಯಾಗಿದ್ದಲ್ಲದೆ ಇಷ್ಟೊಂದು ಮೂಭೂತ ಸೌಲಭ್ಯವನ್ನು ಕಲ್ಪಿಸಿ ಮಾದರಿಯಾಗಿರುವ ಹರೀಶ್ ಪೂಂಜರನ್ನು ಮತ್ತೊಮ್ಮೆ ಬಹುಮತದಿಂದ ಆಯ್ಕೆ ಮಾಡಿ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿನಂತಿಸಿದರು.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ ೧ರಂಸು ಸಂಜೆ ಪಡಂಗಡಿ, ವೇಣೂರು ಹಾಗೂ ನಾರಾವಿಯಲ್ಲಿ ಜರಗಿದ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರ ಪ್ರಚಾರಸಭೆಯಲ್ಲಿ ಅವರು ಮಾತನಾಡಿದರು.

ಕೋಟಿ ಚೆನ್ನಯರ ಹೆಸರಿನಲ್ಲಿ ಸೈನಿಕ ಶಾಲೆಯನ್ನು ಪ್ರಥಮವಾಗಿ ಆರಂಭಿಸಿದ್ದು ಬಿಜೆಪಿ. ಹರೀಶ್ ಪೂಂಜರವರ ಒತ್ತಡದಂತೆ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ಬಿಜೆಪಿ. ಕಾಶ್ಮೀರದಲ್ಲಿ ತ್ರಿವರ್ಣಧ್ವಜ ಹಾರುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಸಮೃದ್ಧಶಕ್ತಿಶಾಲಿ ಭಾರತ ನಿರ್ಮಾಣವಾಗುತ್ತಿದೆ. ಮುಂದಿನ ವಿಶ್ವನಾಯಕ ಪ್ರಧಾನಿ ಮೋದಿಯನ್ನು ಎಲ್ಲಾ ದೇಶಗಳು ಒಪ್ಪಿಕೊಂಡಿವೆ. ಒಳಮೀಸಲಾತಿ ಹೆಚ್ಚಿಸಿದ ಬಿಜೆಪಿ ಬಡವರಿಗೂ ಸಮಾಜಮುಖ್ಯವಾಹಿನಿಗೆ ಬರಲು ಅನುಕೂಲವಾಗಿದೆ. ರಾಜ್ಯದಲ್ಲಿ ಬಿಎಸ್‌ವೈ ಸರಕಾರ ಬರುವವರೆಗೆ ಸರಕಾರಿ ನೌಕರರಿಗೆ ಬಿಟ್ಟರೆ ಬೇರೆ ಯಾರಿಗೂ ಪೆಂಕ್ಷನ್ ಯೋಜನೆ ಇರಲಿಲ್ಲ ಎಂದರು.

ತಾಕತ್ತಿದ್ದರೆ ಕಾಯ್ದೆಯನ್ನು ಒಪ್ಪಿಕೊಳ್ಳಿ ಕಾಂಗ್ರೆಸ್ ನಾಯಕರಿಗೆ ಹಿಂದುಗಳ ಬಗ್ಗೆ ಗೌರವ, ವಿಶ್ವಾಸ ಇದ್ದರೆ ಬಿಜೆಪಿ ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಒಪ್ಪಿಕೊಂಡು ಬಹಿರಂಗವಾಗಿ ಸಾರ್ವಜನಿಕ ಸಭೆಗಳಲ್ಲಿ ಹೇಳಿ ಎಂದು ಕೋಟ ಸವಾಲು ಹಾಕಿದರು.

೭೦ ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ಗೆ ಇಂದು ಗ್ಯಾರಂಟಿ ಕಾರ್ಡ್ ನೀಡುವ ದೌರ್ಭಾಗ್ಯ ಬಂದಿದೆ
೭೦ ವರ್ಷಗಳಲ್ಲಿ ದೇಶದಲ್ಲಿ ಆಡಳಿತ ನಡೆಸಿ ದೇಶಕ್ಕೆ ಪ್ರಧಾನಿ, ರಾಜ್ಯಕ್ಕೆ ಅದೆಷ್ಟೋ ಮುಖ್ಯಮಂತ್ರಿಗಳನ್ನು ನೀಡಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ಇಂದು ಮನೆಮನೆ ತೆರಳಿ ಗ್ಯಾರಂಟಿ ಕಾರ್ಡ್ ಕೊಡುವ ದೌರ್ಬಾಗ್ಯ ಬಂದಿದೆ. ಪಕ್ಷದ ಮೇಲೆ ಜನತೆ ವಿಶ್ವಾಸ ಕಳೆದುಕೊಂಡಿರುವುದು ಅವರಿಗೆ ಖಾತ್ರಿಯಾಗಿದೆ. ಚೈನಾ ಸೆಟ್‌ಗೆ ಗ್ಯಾರಂಟಿ ಇಲ್ಲ, ವಾರಂಟಿಯೂ ಇಲ್ಲ. ಅದೇ ರೀತಿ ಕಾಂಗ್ರೆಸ್ ನೀಡುವ ಗ್ಯಾರಂಟಿಗೆ ವಾರಂಟಿ ಇಲ್ಲ ಎಂದು ಕೋಟ ಲೇವಡಿ ಮಾಡಿದರು.

ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಮಾತನಾಡಿ, ೨೦೧೮ರಲ್ಲಿ ಶಾಸಕನಾಗಿ ಆಯ್ಕೆಯಾದಾಗ ಮೂಲಸೌಲಭ್ಯಗಳ ಬೇಡಿಕೆ ಸಾಕಷ್ಟಿತ್ತು. ಅದನ್ನು ಕಳೆದೈದು ವರ್ಷದಲ್ಲಿ ಗರಿಷ್ಠ ಪ್ರಮಾಣದಲ್ಲಿ ಈಡೇರಿಸಿದ ತೃಪ್ತಿ ಇದೆ. ದೊಡ್ಡ ದೊಡ್ಡ ಯೋಜನೆಗಳನ್ನು ಕ್ಷೇತ್ರದಲ್ಲಿ ಕಾರ್ಯರೂಪಕ್ಕೆ ತಂದಿದ್ದೇನೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಲ ಕಾರ್ಯದರ್ಶಿ ಶ್ರೀನಿವಾಸ ರಾವ್, ಹಿರಿಯರಾದ ಕುಶಾಲಪ್ಪ ಗೌಡ, ದೇವೇಂದ್ರ ಗೌಡ, ಚುನಾವಣಾ ಪ್ರಭಾರಿ ಯತೀಶ್, ಭೂಅಭಿವೃದ್ಧಿ ಬ್ಯಾಂಕ್‌ನ ಸೋಮನಾಥ ಬಂಗೇರ, ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ಆರಂಬೋಡಿ ಗ್ರಾ.ಪಂ. ಅಧ್ಯಕ್ಷೆ ವಿಜಯ ರಮೇಶ್, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಅರುಣ್ ಕ್ರಾಸ್ತ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ಕಾಮಿಡಿ ಕಿಲಾಡಿ ಖ್ಯಾತೀಯ ಹಿತೇಶ್ ಕಾಪಿನಡ್ಕ ಮತ್ತಿತರರು ನಾಯಕರು ಇದ್ದರು. ಹಲವು ಕಾರ್ಯಕರ್ತರು ಮಾತೃಪಕ್ಷಕ್ಕೆ ಸೇರ್ಪಡೆಗೊಂಡರು.

ನಾರಾವಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಮೋಹನ ಅಂಡಿಂಜೆ ಸ್ವಾಗತಿಸಿ, ಉಮೇಶ್ ನಡ್ತಿಕಲ್ಲು ನಿರ್ವಹಿಸಿದರು.

Sneha Gowda

Recent Posts

ಲೋಕಸಭಾ ಚುನಾವಣೆ: ಹುಬ್ಬಳ್ಳಿ, ಧಾರವಾಡದಲ್ಲಿ ಬಿರುಸಿನ ಮತದಾನ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮತದಾನ ಪ್ರಕ್ರಿಯೆ ನಡೆದಿದ್ದು ಹುಬ್ಬಳ್ಳಿಯಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಪ್ರಲ್ಲಾದ ಜೋಶಿ ಅವರು ಕುಟುಂಬ…

4 mins ago

ನಾನು ಇಸ್ಲಾಂ ಹಾಗೂ ಮುಸ್ಲಿಮರ ವಿರೋಧಿಯಲ್ಲ: ಪ್ರಧಾನಿ ಮೋದಿ

ನಾನು ಎಂದಿಗೂ ಇಸ್ಲಾಂ ಧರ್ಮ ಮತ್ತು ಮುಸ್ಲಿಂರನ್ನು ವಿರೋಧಿಸುವುದಿಲ್ಲ ಹೀಗಾಗಿ ಆ ಸಮುದಾಯದವರು ತಮ್ಮ ಹಕ್ಕು ಚಲಾಯಿಸುವಾಗ ತಮ ಭವಿಷ್ಯದ…

18 mins ago

ಮಂಗಳೂರು: ಹಿರಿಯ ನಿವಾಸಿಗಳಿಗೆ ಶ್ರವಣ ದೋಷ ನಿವಾರಕ ಯಂತ್ರೋಪಕರಣ ವಿತರಣೆ

ಲಿಟ್ಸ್ ಸಿಸ್ಟರ್ಸ್ ಆಫ್ ದಿ ಪೂವರ್ ಹಾಗೂ ಹೋಮ್ ಫಾರ್ ದಿ ಏಜೆಡ್ ಸಂಸ್ಥೆಯ ಸಭಾಂಗಣದಲ್ಲಿ ಸಂಸ್ಥೆಯ ನಿವಾಸಿಗಳಿಗಾಗಿ “ಶ್ರವಣ…

39 mins ago

ಐದನೇ ಬಾರಿ ರಷ್ಯಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಪುಟಿನ್

ವ್ಲಾಡಿಮಿರ್ ಪುಟಿನ್ 5 ನೇ ಬಾರಿಗೆ ರಷ್ಯಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದಿಂದಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು…

45 mins ago

ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾಲ್ಕಿಯಲ್ಲಿ ಮತ ಚಲಾಯಿಸಿದರು.

50 mins ago

ಬಂಟ್ವಾಳ: ಹೋಟೆಲ್ ನಲ್ಲಿ ನೇಣು ಬಿಗಿದು ಅವಿವಾಹಿತ ಯುವಕ ಆತ್ಮಹತ್ಯೆ

ಬಿಸಿರೋಡಿನ ಹೆಸರಾಂತ ಹೋಟೆಲ್ ಒಂದರಲ್ಲಿ ತಂಗಿದ್ದ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ‌ಘಟನೆ ಇಂದು ನಡೆದಿದೆ.

60 mins ago