News Karnataka Kannada
Monday, April 29 2024
ಹಾಸನ

ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಮರ ಕಡಗಣನೆ-ಪ್ರಜ್ವಲ್ ಖಂಡನೆ

Prajwal Condemns Muslim Persecution In Congress Party
Photo Credit : News Kannada

ಬೇಲೂರು: ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಕೇವಲ ಓಟು ಬ್ಯಾಂಕ್ ಮಾಡಿಕೊಂಡು ರಾಜಕೀಯ ನಡೆಸುತ್ತಾ ಬಂದಿದೆ. ಯಾವುದೇ ಮುಸ್ಲಿಂ ನಾಯಕರಿಗೆ ಪ್ರಮುಖ ಸ್ಥಾನ-ಮಾನ ನೀಡುವಲ್ಲಿ ಸಂಪೂರ್ಣ ವಿಫಲ ವಾದ ಹಿನ್ನಲೆಯಲ್ಲಿ ಬಹುತೇಕ ಮುಸ್ಲಿಮರು ಜೆಡಿಎಸ್ ಪಕ್ಷಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ ಎಂದು ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್‌ರೇವಣ್ಣ ವಿಶ್ವಾಸವನ್ನು ವ್ಯಕ್ತ ಪಡಿಸಿದರು.

ಪಟ್ಟಣದ ಸಮೀಪದ ಬಂಟೇನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ಕೆ.ಎಸ್.ಲಿಂಗೇಶ್ ಪರ ಚುನಾವಣೆ ಪ್ರಚಾರ ನಡೆಸಿದ ಬಳಿಕ ಕಾರ್ಯಕರ್ತರನ್ನು ಉದ್ದೇ ಶಿಸಿ ಮಾತನಾಡಿದ ಅವರು ಮುಸ್ಲಿಂ ಜನಾಂಗಕ್ಕೆ ಶೇ ೪ ರಷ್ಟು ಮೀಸಲಾತಿಯನ್ನು ದೇವೇಗೌಡರು ನೀಡಿದರೆ ಹೊರತು ಕಾಂಗ್ರೆಸ್ ಪಕ್ಷವಲ್ಲ, ಕಾಂಗ್ರೆಸ್ ಮುಸ್ಲಿಂರಿಗೆ ರಕ್ಷಣೆ ನೀಡದ ಸಂದರ್ಭದಲ್ಲಿ ಕುಮಾರಣ್ಣನವರು ರಕ್ಷಣೆ ನೀಡಿದ ಬಗ್ಗೆ ಇಂದಿಗೂ ಸಾಕ್ಷಿಯಾಗಿದೆ.

ಆದರೆ ಬಿಜೆಪಿ ಇಂತಹ ಮೀಸಲಾತಿಯನ್ನು ಕಿತ್ತು ಇನ್ನೊಂದು ವರ್ಗಕ್ಕೆ ಮೀಸಲಾತಿ ನೀಡುವ ಕ್ರಮವನ್ನು ಜೆಡಿಎಸ್ ಕಟುವಾಗಿ ಖಂಡಿಸಿದೆ. ಆದರೆ ಕಾಂಗ್ರೆಸ್ ಪಕ್ಷ ಜಾಣ ಮೌನಕ್ಕೆ ಜಾರಿದ್ದು ನಿಜಕ್ಕೂ ಶೋಚನೀಯವಾಗಿದೆ ಎಂದು ಕೈ ಪಕ್ಷದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಅವರು ಹಾಸನದಲ್ಲಿ ನಮ್ಮ ಸಣ್ಣ ತಪ್ಪಿನಿಂದ ಕಳೆದ ಭಾರಿ ಕ್ಷೇತ್ರ ಕೈಬಿಟ್ಟಿತ್ತು. ಆದರೆ ೨೦೨೩ ರಲ್ಲಿ ಜೆಡಿಎಸ್ ಭಾವುಟ ಹಾಸ ನದಲ್ಲಿ ಹಾರುವುದು ಶತಸಿದ್ದವಾಗಿದೆ. ಅಂತಯೇ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಸ್.ಲಿಂಗೇಶ್ ನಮ್ಮದೆ ಸರ್ಕಾರವಿಲ್ಲದ ಸಂದರ್ಭದಲ್ಲಿ ರೂ ೧೮೦೦ ಕೋಟಿ ಹಣವನ್ನು ಕ್ಷೇತ್ರಕ್ಕೆ ತರುವ ಮೂಲಕ ಬೇಲೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಗಮನ ನೀಡಿದ್ದಾರೆ.

ವಿಶೇಷವಾಗಿ ಇಂದು ಬೇಲೂರಿನಲ್ಲಿ ಮೊದಲ ಚುನಾ ವಣೆ ಪ್ರಚಾರವನ್ನು ನಾಗೇನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಕೈಗೊಂಡಿದ್ದು ಅತೀವ ಸಂತೋ ಷವಾಗಿದೆ ಲಿಂಗೇಶ್ ಗೆಲವು ಖಚಿತವೆಂದರು.

ಮಲೆನಾಡು ಭಾಗದ ಜೆಡಿಎಸ್ ಮುಖಂಡ ಎಂ.ಎ.ನಾಗ ರಾಜು ಮಾತನಾಡಿ. ಬೇಲೂರಿನಲ್ಲಿ ಈಗಾಗಲೇ ಕಾಂಗ್ರೆಸ್ ಹತ್ತು ವರ್ಷಗಳ ಕಾಲ ಆಳಿದೆ. ಆದರೆ ಅಭಿವೃದ್ಧಿ ಮಾತ್ರ ಜೆಡಿಎಸ್ ಪಕ್ಷದಿಂದ ಎಂಬ ಬಗ್ಗೆ ಇಲ್ಲಿನ ಜನತೆಗೆ ತಿಳಿದ ವಿಷಯವಾಗಿದೆ. ಜೆಡಿಎಸ್ ಪಕ್ಷ ಮಲೆನಾಡು ಪ್ರದೇಶವನ್ನು ನಿರ್ಲಕ್ಷ?ಯ ವಹಿಸಿದೆ ಎಂದು ವಿಪಕ್ಷಗಳ ದೂರಿದ್ದಾರೆ. ಮಲೆನಾಡು ಪ್ರದೇಶದಲ್ಲಿ ಜೆಡಿಎಸ್ ಪಕ್ಷ ಯಾವ ರೀತಿಯಲ್ಲಿ ಕೆಲಸ ಮಾಡಿದೆ ಎಂಬ ಖುದ್ದು ಭೇಟಿ ನೀಡಲಿ ಎಂದು ತೀರುಗೇಟು ನೀಡಿದರು.

ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಲಿಂಗೇಶ್ ಮಾತನಾಡಿ, ಕ್ಷೇತ್ರದ ಬಯಲುಸೀಮೆಗೆ ಈಗಾ ಗಲೇ ರಣಘಟ್ಟ, ಯಗಚಿ ಏತನೀರಾವರಿ ಮತ್ತು ಎತ್ತಿಹೊ ಳೆಯಿಂದ ನೀರಾವರಿ ಸೌಲಭ್ಯ ಒದಗಿಸಿದೆ. ಆದರೆ ಬಂಟೇ ನಹಳ್ಳಿ,ಹೆಬ್ಬಾಳು ಸೇರಿದಂತೆ ಆರು ಪಂಚಾಯಿತಿ ವ್ಯಾಪ್ತಿಗೆ ನೀರಾವರಿ ಸೌಲಭ್ಯ ಒದಗಿಸಲು ಹೆಬ್ಬಾಳು ಏತನೀರಾವರಿ ಕ್ರೀಯಾಯೋಜನೆ ನಡೆಸಿದ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಕಾರ್ಯದರ್ಶಿ ಸಿ.ಹೆಚ್. ಮಹೇಶ್, ಮುಖಂಡರಾದ ಬಾಣಸವಳ್ಳಿ ಆಶ್ವಥ್ ಕನಾಯಕನಹಳ್ಳಿ ಮಹಾದೇವ್, ಬಿ.ಎಂ.ರವಿಕುಮಾರ್. ನಾಗೇಶ್, ರಫಿಕ್, ಹಗರೆ ದಿಲೀಪ್,ಎಂ ಕೆಆರ್ ನಾಗೇಶ್, ಅಬ್ದುಲ್ ಸುಭಾನ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು