News Karnataka Kannada
Tuesday, April 30 2024
ಹಾಸನ

ಹಂಗರಹಳ್ಳಿ : ರೈಲ್ವೆ ಲೆವೆಲ್ ಕ್ರಾಸಿಂಗ್ ಸಂಚಾರಕ್ಕೆ ಮುಕ್ತ

ಮೈಸೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾರ್ಯ ಸದ್ಯಕ್ಕೆ ಮುಕ್ತಾಯ ವಾಗುವ ಲಕ್ಷಣ ಕಾಣದ ಹಿನ್ನೆಲೆ ಯಲ್ಲಿ ರೈಲ್ವೆ ಇಲಾಖೆ ಲೆವೆಲ್ ಕ್ರಾಸಿಂಗ್ ವ್ಯವಸ್ಥೆ ಮರು ಸ್ಥಾಪಿಸಿದೆ. ಇದರಿಂದ ಸುತ್ತುಬಳಸಿನ ಹಾದಿ ಸವೆಸಿ ಸುಸ್ತಾಗಿದ್ದ ಸಾರ್ವಜನಿಕರು ನಿಟ್ಟುಸಿಬಿಟ್ಟಿದ್ದಾರೆ.
Photo Credit : NewsKarnataka

ಹಾಸನ: ಮೈಸೂರು-ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾರ್ಯ ಸದ್ಯಕ್ಕೆ ಮುಕ್ತಾಯ ವಾಗುವ ಲಕ್ಷಣ ಕಾಣದ ಹಿನ್ನೆಲೆ ಯಲ್ಲಿ ರೈಲ್ವೆ ಇಲಾಖೆ ಲೆವೆಲ್ ಕ್ರಾಸಿಂಗ್ ವ್ಯವಸ್ಥೆ ಮರು ಸ್ಥಾಪಿಸಿದೆ. ಇದರಿಂದ ಸುತ್ತುಬಳಸಿನ ಹಾದಿ ಸವೆಸಿ ಸುಸ್ತಾಗಿದ್ದ ಸಾರ್ವಜನಿಕರು ನಿಟ್ಟುಸಿಬಿಟ್ಟಿದ್ದಾರೆ.

ನಿರ್ಮಾಣವಾದ ಮೂರು ವರ್ಷಗಳಲ್ಲಿ ಐದಾರು ಬಾರಿ ಕುಸಿತವಾಗಿದ್ದ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ದುರಸ್ತಿಗಾಗಿ ಕಳೆದ ಡಿಸೆಂಬರ್ ನಲ್ಲಿ ಮಾರ್ಗವನ್ನು ಬಂದ್ ಮಾಡಲಾಗಿತ್ತು. ಎಲ್ಲ ವಾಹನಗಳೂ ಪಡುವಲಹಿಪ್ಪೆ ಬದಲಿ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿತ್ತು. ಕಿರಿದಾದ ಸುತ್ತು ಬಳಸಿನ ಹಾದಿಯಲ್ಲಿ ಸಂಚರಿಸಿ ಪ್ರಯಾಣಿಕರು ಬೇಸತ್ತಿದ್ದರು. ವಿದ್ಯಾರ್ಥಿಗಳು, ನೌಕರರು ನಿತ್ಯ ಹಾಸನ-ಹೊಳೆನರಸೀಪುರ ನಡುವೆ ಇಪ್ಪತ್ತು ನಿಮಿಷದ ಹೆಚ್ಚುವರಿ ಪ್ರಯಾಣದ ಅವಧಿಯಿಂದ ಹೈರಾಣಾಗಿದ್ದರು.

ಡಿಸೆಂಬರ್ ನಲ್ಲಿ ನಾಲ್ಕು ತಿಂಗಳ ಕಾಲ ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಿ ಜಿಲ್ಲಾ ಧಿಕಾರಿ ಆದೇಶ ಹೊರಡಿಸಿದ್ದರು. ಆ ಅವಧಿ ಮುಗಿದರೂ ದುರಸ್ತಿ ಕೆಲಸ ಮುಕ್ತಾಯ ಆಗಿರಲಿಲ್ಲ.
ಹೀಗಾಗಿ ರೈಲ್ವೆ ಇಲಾಖೆ ಸಾರ್ವಜನಿಕ ವಲಯದ ಆಕ್ರೋ ಶದಿಂದ ಬಚಾವಾಗಲು ಈ ಹಿಂದೆ ಇದ್ದ ರೈಲ್ವೆ ಲೆವೆಲ್ ಕ್ರಾಸಿಂಗ್ ವ್ಯವಸ್ಥೆ ಮರು ಸ್ಥಾಪಿಸಿದೆ. ಹೀಗಾಗಿ ರೈಲು ಸಂಚಾರದ ಅವಧಿಯಲ್ಲಿ ರೈಲ್ವೆ ಗೇಟ್ ಕಾಯುವುದರ ಹೊರತುಪಡಿಸಿ ಸುಗಮ ಸಂಚಾರ ಸಾಧ್ಯವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು