ಹಾಸನ

ಚನ್ನಕೇಶವ ದೇಗುಲದಲ್ಲಿ ರಾತ್ರಿ ದಾಸೋಹಕ್ಕೆ ಚಾಲನೆ

ಬೇಲೂರು: ವಿಶ್ವ-ವಿಖ್ಯಾತ ಬೇಲೂರು ಚನ್ನಕೇಶವ ದೇಗುಲದಲ್ಲಿ ಹಗಲು ನಡೆಯುತ್ತಿರುವ ದಾಸೋಹದ ವ್ಯವಸ್ಥೆಯನ್ನು ರಾತ್ರಿ ಕೂಡ ನಡೆಸಲು ನಿರ್ಧರಿಸಿದ ಹಿನ್ನಲೆಯಲ್ಲಿ ಶಾಸಕ ಹೆಚ್.ಕೆ.ಸುರೇಶ್ ಹಾಗೂ ಚನ್ನಕೇಶವ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಇನ್ನಿತರ ಗಣ್ಯರು ಭಕ್ತರಿಗೆ ಊಟ ಬಡಿಸುವ ಮೂಲಕ ರಾತ್ರಿ ದಾಸೋಹಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಶಿಲ್ಪಕಲೆಗಳ ತವರು ಹಾಗೂ ಪ್ರವಾಸಿ ತಾಣ ಬೇಲೂರಿನ ಚನ್ನಕೇಶವ ದೇಗುಲಕ್ಕೆ ನಿತ್ಯ ಬರುವ ಸಾವಿರಾರು ಪ್ರವಾಸಿಗರು ಮತ್ತು ಭಕ್ತರಿಗೆ ಅನುಕೂಲ ವಾಗಲಿ ಎಂದೇ ಈ ಹಿಂದೆ ದೇಗುಲ ಸಮಿತಿ ಅಧ್ಯಕ್ಷರಾದ ಬಿ.ಶಿವರುದ್ರಪ್ಪನವರ ತಂಡ ಆರಂಭಿಸಿದ ದಾಸೋಹದ ವ್ಯವಸ್ಥೆ ಮಧ್ಯಾಹ್ನ ಮಾತ್ರ ನಡೆಯುತ್ತಿತ್ತು. ಆದರೆ ಭಕ್ತರ ಮತ್ತು ಪ್ರವಾಸಿಗಳ ಕೊರಿಕೆ ಮೇರೆಗೆ ಇಲ್ಲಿನ ಶಾಸಕರಾದ ಹೆಚ್.ಕೆ.ಸುರೇಶ್ ರಾತ್ರಿ ಕೂಡ ದಾಸೋಹ ನಡೆಸಬೇಕು ಎಂಬ ಸಲಹೆಯನ್ನು ವ್ಯವಸ್ಥಾಪನಾ ಸಮಿತಿ ನೀಡಿದ ನಿಟ್ಟಿನಲ್ಲಿ ಸೋಮುವಾರದಿಂದ ಅಧಿಕೃತವಾಗಿ ಚಾಲನೆ ನೀಡಲಾಯಿತ್ತು. ಈ ಸಂದರ್ಭದಲ್ಲಿ ದೇಗುಲ ಸಮಿತಿ ಸದಸ್ಯರು ಸೇರಿದಂತೆ ಮುಖಂಡರಾದ ಹೆಚ್.ಎಂ. ದಯಾನಂದ, ಪ್ರೋ.ಜಯಣ್ಣಗೌಡ,ಯೋಗೀಶ್ ಹೆಬ್ಬಾಳು, ಜೆ.ಕೆ.ಕುಮಾರ್, ತೆಂಡೇಕೆರೆ ರಮೇಶ್ ಇನ್ನು ಮುಂತಾದ ಗಣ್ಯರು ಈ ಸುಕೃತ ಕಾರ್ಯಕ್ಕೆ ಸಾಕ್ಷಿಯಾಗಿ ರಾತ್ರಿ ದಾಸೋಹದ ಸಂಪನ್ನಕ್ಕೆ ಕಾರಣವಾದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹೆಚ್.ಕೆ.ಸುರೇಶ್. ಬೇಲೂರಿಗೆ ಬರುವ ಪ್ರವಾಸಿಗರು ಮತ್ತು ಭಕ್ತರು ರಾತ್ರಿ ಕೂಡ ಉಳಿಯುವ ವ್ಯವಸ್ಥೆ ನಿರ್ಮಾಣವಾಗಬೇಕು ಎಂಬ ಹಂಬಲದಿಂದ ರಾತ್ರಿ ದಾಸೋಹ ನಡೆಸಲು ಸಮಿತಿ ನಿರ್ಧರಿಸಿದೆ. ಈಗಾಗಲೇ ದೇಗುಲ ಸಮಿತಿಯ ಸಭೆಯಲ್ಲಿ ಹತ್ತಾರು ವಿಷಯಗಳನ್ನು ಚರ್ಚೆ ನಡೆಸಿದ್ದು, ರಾತ್ರಿ ದಾಸೋಹ, ಬರುವ ಪ್ರವಾಸಿಗರಿಗೆ ಹೈಟಕ್ ವಿಶ್ರಾಂತಿ ಮತ್ತು ಶೌಚಾಲಯಗಳ ಕುರಿತು ಮಾತನಾಡಿದ್ದು, ಪ್ರವಾ ಸಿಗರು ಇಲ್ಲಿಯೇ ತುಂ ಗುವ ವ್ಯವಸ್ಥೆ ನಿರ್ಮಾಣವಾದರೆ ಖಂಡಿತ ಬೇಲೂರಿನ ವ್ಯಾಪಾರ-ವಹಿವಾಟು ಹೆಚ್ಚಲಿದೆ.

ವಿಶೇಷವಾಗಿ ದೇಗುಲಕ್ಕೆ ಸಂಬಂಧ ಪಟ್ಟ ಆಸ್ತಿಗಳನ್ನು ಸಂರಕ್ಷಣೆಗೆ ಒತ್ತು ನೀಡುವ ಜೊತೆಗೆ ಅಗತ್ಯ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತದೆ. ಪ್ರತಿ ವರ್ಷ ನಡೆಯುವ ಚನ್ನಕೇಶವಸ್ವಾಮಿ ದಿವ್ಯ ರಥೋತ್ಸವ ಜಾತ್ರೆ ಇಡೀ ನಾಡಿನಲ್ಲಿ ಪ್ರಸಿದ್ದಿ ಪಡೆದ ಕಾರಣದಿಂದ ಮುಂದಿನ ವರ್ಷ ಅರ್ಥಪೂರ್ಣ ಜಾತ್ರೆಗೆ ಒತ್ತು ನೀಡಲಾಗುತ್ತದೆ. ದೇಗುಲ ಸಮಿತಿಯಿಂದ ನಡೆಯುವ ದಾಸೋಗ ಶುಚಿ ಮತ್ತು ರುಚಿಯಿಂದ ನೀಡುವ ಕಡೆ ಹೆಚ್ಚು ಗಮ ನೀಡಬೇಕಿದೆ ಎಂದರು.

ದೇಗುಲ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮಾತನಾಡಿ ಶಾಸಕರಾದ ಹೆಚ್.ಕೆ.ಸುರೇಶ್ ಅವರ ಅಭಿಲಾಷೆಯಂತೆ ರಾತ್ರಿ ದಾಸೋಹಕ್ಕೆ ಇಂದು ಚಾಲನೆ ನೀಡಲಾಗಿದೆ. ಗುಣಮಟ್ಟಯುಕ್ತ ಊಟವನ್ನು ನೀಡಲು ಸಮಿತಿ ಬದ್ಧವಾಗಿದ್ದು, ಮುಂದಿನ ದಿನದಲ್ಲಿ ಶಾಸಕರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ ತಮ್ಮ ಇಂಗಿತವನ್ನು ವ್ಯಕ್ತ ಪಡಿಸಿದರು.

Ashitha S

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

6 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

7 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

7 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

8 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

8 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

8 hours ago