Categories: ಹಾಸನ

ಹಾಸನ: ಕಗ್ಗಂಟಾದ ಫಲಿತಾಂಶ, ಬೆಟ್ಟಿಂಗ್‌ಗೂ ನಿಲುಕದ ಲೆಕ್ಕಾಚಾರ

ಹಾಸನ: ಮಹತ್ವದ ೨೦೨೩ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಕಾರ್ಯ ಮುಕ್ತಾಯ ಗೊಂಡಿದ್ದು, ಇದೀಗ ರಾಜಕೀಯ ಪಕ್ಷಗಳಲ್ಲಿ ಹಾಗೂ ಜನರಲ್ಲಿ ಯಾರು ಗೆಲುವು ಪಡೆಯಲಿದ್ದಾರೆ ಎಂಬ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.

ಹಾಸನ ಜಿಲ್ಲೆಯ ಮಟ್ಟಿಗೆ ಈ ಬಾರಿಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಪ್ರತಿ ಕ್ಷೇತ್ರದಲ್ಲಿ ಯಾರ ಗೆಲುವಾಗಲಿದೆ.! ಯಾರೂ ಸೋಲನ್ನು ಅನುಭವಿ ಸಲಿದ್ದಾರೆ ಎಂಬ ಲೆಕ್ಕಾಚಾರ ಕಗ್ಗಂಟಾಗಿ ಮುಂದುವರೆದಿರುವ ನಡುವೆ ಚುನಾ ವಣೆ ಮುಗಿದ ಬಳಿಕ ಕೆಲ ಸಮೀಕ್ಷೆ ಹೊರಬಂದಿದ್ದರು ಮತಪೆಟ್ಟಿಗೆಯಲ್ಲಿ ಮತದಾರ ಯಾರಿಗೆ ಕೃಪೆ ತೋರಿ ದ್ದಾರೆ ಎಂಬ ಗೊಂದಲವಿದೆ. ಈಗಾ ಗಲೇ ಮತಯಂತ್ರದಲ್ಲಿ ಎಲ್ಲರ ಭವಿಷ್ಯ ಭದ್ರವಾಗಿದ್ದು ಜನರಿಗೂ, ಅಭ್ಯರ್ಥಿ, ಕಾರ್ಯಕರ್ತರು, ಮುಖಂಡ ರಿಗೂ ಯಾರು ಗೆಲುವು ಪಡೆಯುವರು ಎಂಬ ಲೆಕ್ಕಾಚಾರ ಕಾಡಿದೆ.

ನಗರದ ಯಾವುದೇ ಹೋಟೆಲ್ ,ಅಂಗಡಿ, ಟೀಸ್ಟಾಲ್, ಕಚೇರಿ ,ಗ್ರಾಮಗಳಿಗೆ ಹೋದರು ಚುನಾವಣೆ ಫಲಿತಾಂಶದ ಬಗೆಗಿನ ಮಾತುಗಳು ಹರಿದಾಡುತ್ತಿದೆ.

ಬೇಲೂರು ಹಾಗೂ ಸಕಲೇ ಶಪುರ ಆಲೂರು, ವಿಧಾನಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಅಂತೆಯೇ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆ ಸ್ ಮತ್ತು ಜೆಡಿಎಸ್ ಅಭ್ಯರ್ಥಿಯ ನಡುವೆ ನೇರ ಸ್ಪರ್ಧೆ ನಡೆದಿದೆ. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಜೆಡಿಎಸ್ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ನಡೆದಿದೆ ಅರಕಲಗೂಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಎ ಮಂಜು ಅವರಿಗೆ ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡ ಅವರು ತೀವ್ರ ಪೈಪೋಟಿ ಒಡ್ಡಿದ್ದಾರೆ ಎಂಬ ಲೆಕ್ಕಾಚಾರ ವ್ಯಾಪಕವಾಗಿದೆ.

ಬೆಟ್ಟಿಂಗ್‌ಗೂ ಹಿಂದೇಟು: ಯಾವುದೇ ಚುನಾವಣೆ ನಡೆದರು ಇಂತಹ ಅಭ್ಯರ್ಥಿ ಗೆಲುವು ಪಡೆಯಲಿದ್ದಾರೆ ಇಂತಹವರು ಸೋಲು ಪಡೆಯುವರು ಎಂಬ ಲೆಕ್ಕಾಚಾರ ನಡೆಯುತ್ತಿತ್ತು ಹಾಗೂ ಕೋಟ್ಯಾಂತರ ರೂ ಬೆಟ್ಟಿಂಗ್ ನಡೆಯುತ್ತಿತ್ತು ಆದರೆ ಈ ಬಾರಿ ಲೆಕ್ಕಾಚಾರಕ್ಕೆ ಸಿಗದಂತೆ ಪ್ರತಿ ಕ್ಷೇತ್ರದ ಚುನಾವಣೆ ಫಲಿತಾಂಶ ನಿಗೋಢವಾಗಿದೆ. ಯಾವ ಅಭ್ಯರ್ಥಿ ಗೆಲುವು ಪಡೆಯಲಿದ್ದಾರೆ ಎಂಬ ಅಂದಾಜನ್ನು ಮಾಡಲು ಸಾಧ್ಯವಾಗುತ್ತಿಲ್ಲ.

ಎಲ್ಲ ಚುನಾವಣೆಗೂ ಭಿನ್ನ: ಈ ಬಾರಿಯ ವಿಧಾನಸಭೆ ಚುನಾವಣೆ ಈ ಹಿಂದೆ ನಡೆದ ಹಲವು ವಿಧಾನಸಭೆ ಚುನಾವಣೆಗೆ ಭಿನ್ನವಾಗಿದೆ ಎಂದು ಹೇಳಬಹುದು. ಕಾರಣ ಹಣ ಬಲ ಜಾತಿಬಲ ಸೇರಿದಂತೆ ಯಾವುದೇ ಲೆಕ್ಕಾಚಾರ ಕ್ಕೂ ವಿರುದ್ದವಾಗಿ ಜನಾದೇಶ ಮಾಡಿರುವ ಮತದಾರ ಮತಪೆಟ್ಟಿಗೆ ತೆಗೆದು ಎಣಿಕೆ ಮಾಡುವ ವರಗೆ ನಿರ್ಧಿಷ್ಟ ವಾಗಿ ಫಲಿತಾಂಶ ಹೇಳಲು ಸಾಧ್ಯವಾಗುತ್ತಿಲ್ಲ.

ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಹಣದ ಹೊಳೆಯೇ ಈ ಚುನಾವಣೆಯಲ್ಲಿ ಹರಿಯಲಿದೆ ಎಂಬ ಮಾತು ಹುಸಿಯಾಗಿದೆ ಎನ್ನಲಾಗುತ್ತಿದೆ . ಕೆಲ ಪಕ್ಷದಿಂದ ಮತದಾರರಿಗೆ ಸಾವಿರಾರು ರೂ ಹಣದ ಅಮೀಷ ಒಡ್ಡುವ ಕುರಿತು ಮಾತುಗಳು ಕೇಳಿಬಂದರು ಸಾವಿರದ ಒಳಗೆ ಎಲ್ಲಾ ಪಕ್ಷದವರು ಸಮಾನವಾಗಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಕಾಣದ ಕಾಂಗ್ರೆಸ್: ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾಣದಂತಾಗಿದ್ದು ಅಂತಿಮ ಹಂತದಲ್ಲಿ ಟಿಕೆಟ್ ಪಡೆದ ಬನವಾಸೆ ರಂಗಸ್ವಾಮಿ ತಮ್ಮ ಕೈಲಾದ ಪ್ರಚಾರವನ್ನು ಕೈಗೊಂಡರು ಸಹ ಪಕ್ಷದ ಇತರೆ ಮುಖಂಡರ ಪೂರ್ಣ ಬೆಂಬಲ ಇಲ್ಲದೆ ಕ್ಷೇತ್ರದಲ್ಲಿ ಓಡಾಡಲು ಸಮಯ ಸಿಗದೇ ಕೊನೆಯ ಹಂತದ ಚುನಾವಣಾ ತಯಾರಿ ಸಮರ್ಪಕವಾಗಿ ಮಾಡದ ಹಿನ್ನೆಲೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಯಾವುದೇ ಪರಿಣಾಮ ಬೀರುವಲ್ಲಿ ವಿಫಲವಾಗಿದೆ ಎನ್ನಬಹುದು.

Ashika S

Recent Posts

ಬಸವ ಭವನದ ಜಮೀನಿಗೆ ಪೂಜೆ ಮತ್ತು ಷಟಸ್ಥಲ ಧ್ವಜಾರೋಹಣ

ನಗರದ ನಾವದಗೇರೆ ಸಮೀಪದ ಸರ್ವೇ ನಂ. 60ರಲ್ಲಿ ಜಿಲ್ಲಾಡಳಿತದಿಂದ ಮೀಸಲಿಟ್ಟಿರುವ ಒಂದು ಎಕರೆ ಹತ್ತು ಗುಂಟೆ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ…

12 mins ago

ಸಂಸ್ಕಾರದ ತೊಟ್ಟಿಲು ಸರಸ್ವತಿ ಶಾಲೆ : ಹಿರಿಯ ಶಿಕ್ಷಕಿ

ನಗರದ ಸರಸ್ವತಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮವನ್ನು ಬಹಳ…

23 mins ago

ತಮಿಳು ನಟ ಸಿಂಭು ಅವರನ್ನು ಚಿತ್ರರಂಗದಿಂದ ನಿಷೇಧಿಸುವಂತೆ ನಿರ್ದೇಶಕ ಒತ್ತಾಯ

ತಮಿಳು ಚಿತ್ರರಂಗದ ಜನಪ್ರಿಯ ನಟ ಸಿಂಭು ಅವರ ವಿರುದ್ಧ ಇದೀಗ ನಿರ್ದೇಶಕ ದೂರು ನೀಡಿದ್ದು ತಮಿಳು ಚಿತ್ರರಂಗದಿಂದ ಹೊರಗಟ್ಟಬೇಕು ಎಂದು…

43 mins ago

ಆಫೀಸ್‌ನಲ್ಲಿ ಒತ್ತಡಕ್ಕೆ ಒಳಗಾಗ್ತಿದ್ದೀರಾ : ಹಾಗಾದ್ರೆ ಇಲ್ಲಿದೆ ಟಿಪ್ಸ್‌

ಹಲವಾರು ಕಾರಣಗಳಿಗಾಗಿ ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡವುಂಟಾಗುತ್ತದೆ. ಇದರಿಂದ ಆಯಾಸ ಹಾಗೂ ವಿಶ್ರಾಂತಿಯ ಕೊರತೆ ತಲೆದೋರುತ್ತದೆ. ಇದರಿಂದ ವ್ಯಕ್ತಿ ಸಿಕ್ಕಾಪಟ್ಟೆ…

1 hour ago

ಇಂದು 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದ ಕೆಲವಡೆ ಬಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಮಾನ ಇಲಾಖೆ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ…

2 hours ago

ಇಂದು ತಾಯಂದಿರ ದಿನ : ಈ ದಿನದ ಮಹತ್ವ ,ಹಿನ್ನೆಲೆ ಏನು?

ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…

2 hours ago