News Karnataka Kannada
Wednesday, May 01 2024
ಹಾಸನ

ಹಾಸನ: ವ್ಯಕ್ತಿಯ ಸ್ವಯಂ ರಕ್ಷಣೆಗೆ ಕರಾಟೆ ಸಹಕಾರಿ- ಶಾಸಕ ಪ್ರೀತಮ್‌ಗೌಡ

Karate
Photo Credit : News Kannada

ಹಾಸನ: ವ್ಯಕ್ತಿಯ ಸ್ವಯಂ ರಕ್ಷಣೆಗೆ ಕರಾಟೆ ಸಹಕಾರಿಯಾಗಿದೆ ಎಂದು ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.
ನಗರದ ಮಲೆನಾಡು ತಾಂತ್ರಿಕ ಕಾಲೇಜು ಆವರಣದಲ್ಲಿರುವ ಆಡಿಟೋರಿಯಂನಲ್ಲಿ ನ್ಯಾಷನಲ್ ಶೋಟೋಕಾನ್ ಕರಾಟೆ ಮಲ್ಟಿಪರ್ಪಸ್ ಫೆಡರೇಷನ್ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಕಾಲ ನಾಲ್ಕನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕರಾಟೆ ಎಂಬುದು ಮುಖ್ಯವಾಗಿ ಹೆಣ್ಣು ಮಕ್ಕಳು ತಮ್ಮನ್ನು ತಾವು ಸಮಾಜದಲ್ಲಿ ಗಟ್ಟಿಯಾಗಿ ಇರಬೇಕೆಂದರೇ ಒಂದು ಆಯುಧ ಇದೆ ಎಂದ್ರೆ ಅದೆ ಕರಾಟ ಎಂಬುದು ಪ್ರಮುಖ ಪಾತ್ರವಹಿಸುತ್ತದೆ.

ಮಕ್ಕಳಲ್ಲಿ ಅನೇಕ ಕ್ರೀಡಾಸಕ್ತಿಗಳಿದ್ದು, ಅದರಲ್ಲಿ ಕರಾಟೆಯನ್ನು ಇಷ್ಟಪಡುತ್ತಾರೆ ಎಂದರು. ಪ್ರತಿ ಮಕ್ಕಳಲ್ಲೂ ತಮ್ಮದೆಯಾದ ಪ್ರತಿಭೆ ಎಂಬುದು ಇರುತ್ತದೆ ಆದರೇ ಅದಕ್ಕೆ ಪ್ರೋತ್ಸಹಿಸುವ ಕೆಲಸ ಪೋಷಕರು ಮಾಡಿದರೇ ಶಿಕ್ಷಣದ ಜೊತೆ ಜೊತೆಯಲ್ಲಿ ಒಂದು ಕ್ರೀಡೆಯಂತಹದನ್ನು ಕೂಡ ಕಲಿಯಬಹುದಾಗಿದೆ ಎಂದು ಹೇಳಿದರು.

ಮಲೆನಾಡು ತಾಂತ್ರಿಕ ವಿದ್ಯಾಲಯದ ಕಾರ್ಯದರ್ಶಿ ಆರ್.ಟಿ. ದೇವೇಗೌಡ ಅವರು ಮಾತನಾಡಿ, ಮಕ್ಕಳಲ್ಲಿ ವಿಧ್ಯೆ ಜೊತೆಯಲ್ಲಿಯೇ ಇಂತಹ ಕರಾಟೆಯನ್ನು ಕೂಡ ತುಂಬಿದ್ರೆ ಮುಂದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟಕ್ಕೆ ವಿವಿಧ ರಾಜ್ಯಗಳಾದ ಆಂಧ್ರ ಪ್ರದೇಶದಿಂದ ಒಟ್ಟು ೫ ತಂಡಗಳು, ತೆಲಂಗಾಣದಿಂದ ೨ ತಂಡಗಳು, ಮಹಾರಾಷ್ಟ್ರದಿಂದ ೨ ತಂಡಗಳು, ಪಂಜಾಬ್ನಿಂದ ೧ ತಂಡ, ಉತ್ತರ ಪ್ರದೇಶದಿಂದ ೧ ತಂಡ, ಕೇರಳದಿಂದ ೧ ತಂಡ, ತಮಿಳುನಾಡಿನಿಂದ | ತಂಡ ಹಾಗೂ ಕರ್ನಾಟಕದಿಂದ ೧೦ ತಂಡಗಳು ಭಾಗವಹಿಸಲಿದೆ ಎಂದರು.

ನಗರಸಭೆ ಅಧ್ಯಕ್ಷ ಆರ್. ಮೋಹನ್ ಎನ್.ಎಸ್.ಕೆ.ಎಂ.ಎಫ್. ಅಧ್ಯಕ್ಷರಾದ ಕೆ.ಜೆ. ಅನಂತಕುಂಆರ್, ಎಂಸಿಇ ಕಾಲೇಜು ಪ್ರಾಂಶುಪಾಲ ಡಾ. ಪ್ರದೀಪ್, ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಸಿದ್ದೇಶ್ ನಾಗೇಂದ್ರ, ನಗರಸಭೆ ಸದಸ್ಯರಾದ ದಯಾನಂದ್, ಎಂಸಿಇ ಕಾಲೇಜು ನೌಕರ ಕಲ್ಯಾಣ ಸಂಘದ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಜಂಠಿ ಕಾರ್ಯದರ್ಶಿ ಹೆಚ್.ಜಿ. ಕಾಂಚನಮಾಲ, ನಗರಸಭೆ ಸದಸ್ಯ ಹೆಚ್.ಎಂ. ರಕ್ಷಿತ್ ಕುಮಾರ್, ಬಿಜೆಪಿ ಮುಖಂಡರಾದ ಶೋಭನ್ ಬಾಬು, ಸುಜಾತ, ಎನ್.ಎಸ್.ಕೆ.ಎಂ.ಎಫ್. ತಾಂತ್ರಿಕ ತರಬೇತುದಾರರಾದ ಬಿ.ಎಸ್. ತೇಜಸ್ವಿ, ನ್ಯಾಷನಲ್ ಶೋಟೋ ಕಾನ್ ಕರಾಟೆ ಮಲ್ಟಿಪರ್ಪಸ್ ಫೆಡರೇಷನ್ ನ ತರಬೇತುದಾರ ಹೇಮಂತ್, ಅಭಿವೃದ್ಧಿ ಬೋಧಕರು ಹೆಚ್.ಕೆ. ಶಿವಕುಮಾರ್, ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಜಂಠಿ ಕಾರ್ಯ ದರ್ಶಿ ಹೆಚ್.ಜಿ. ಕಾಂಚನಮಾಲ,ಪಿ.ವಿ. ವಂದನ, ಬಾಲಕಿಯರ ತಾಂತ್ರಿಕ ಸೌಮ್ಯಶ್ರೀ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು