ಹಾಸನ

ಹಾಸನ: ಶಾಸಕ ಪ್ರೀತಂ ಗೌಡರ ಮನೆಗೆ ಮುತ್ತಿಗೆ ಹಾಕಿದ ತ್ಯಾಜ್ಯ ವಿಲೇವಾರಿ ವಾಹನ ಚಾಲಕರು

ಹಾಸನ: ಕಳೆದ ನಾಲ್ಕು ತಿಂಗಳಿನಿಂದ ಸಂಬಳ ಕೊಡದ ಕಾರಣ ನಾವು ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದ್ದು, ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸಂಬಳ ಕೊಡುವಂತೆ ಆಗ್ರಹಿಸಿ ಕಸವಿಲೇವಾರಿ ವಾಹನ ಚಾಲಕರು ಹಾಗೂ ಸಹಾಯಕರು ಬುಧವಾರದಂದು ತಮ್ಮ ಕೆಲಸವನ್ನು ಸಥಗಿತಗೊಳಿಸಿ ಬೆಳ್ಳಂಬೆಳಿಗ್ಗೆ ಹಾಸನ ಕ್ಷೇತ್ರದ ಶಾಸಕರಾದ ಪ್ರೀತಂ ಜೆ. ಗೌಡರ ಮನೆಗೆ ಮುತ್ತಿಗೆ ಹಾಕಿ ಆಗ್ರಹಿಸಿದರು.

ಅಫೆ ವಾಹನ ಚಾಲಕರ ಸಂಘದ ವಿಶ್ವ ಮಾಧ್ಯಮದೊಂದಿಗೆ ಮಾತನಾಡಿ, ಟೆಂಡರ್ ಬೇಸಿಕ್ ಮೇಲೆ ಪ್ರತಿತಿಂಗಳು ನಮಗೆ ಸಂಬಳ ಕೊಡಬೇಕಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ನಮಗೆ ಸಂಬಳ ಕೊಡುತ್ತಿಲ್ಲ. ನಾವು ಅಫೆ ವಾಹನ ಓಡಿಸಿ ಕಸವಿಲೇವಾರಿ ಮಾಡಿ ಬಂದ ಸಂಬಳದಲ್ಲಿ ಜೀವನ ಸಾಗಿಸಬೇಕು. ಬೆಳಿಗ್ಗೆ ೫ ಗಂಟೆಯಿಂದ ಮದ್ಯಾಹ್ನ ೨ ಗಂಟೆಯವರೆಗೂ ನಾವು ಕೆಲಸ ಮಾಡುತ್ತೇವೆ. ಸರಿಯಾಗಿ ಸಂಬಳ ಕೊಡದ ಕಾರಣ ನಗರಸಭೆ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಸಂಬಳ ಕೇಳಿದರೇ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ.

ನೀವು ನಮ್ಮನ್ನು ಕೇಳಿ ಕೆಲಸಕ್ಕೆ ಬಂದಿದ್ದೀರಾ ಎಂದು ನಮಗೆ ಉಢಾಪೆ ಉತ್ತರ ಕೊಡುತ್ತಾರೆ ಎಂದು ದೂರಿದರು. ನಾಲ್ಕು ತಿಂಗಳ ಕಾಲ ಸಂಬಳ ಕೊಡದಿದ್ದರೇ ನಾವು ಹೇಗೆ ಜೀವನ ಮಾಡುವುದು ಎಂಬುದು ನಮ್ಮ ಪ್ರಶ್ನೆಯಾಗಿದೆ. ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಲೆಂದು ಹಾಸನ ಕ್ಷೇತ್ರದ ಶಾಸಕರ ಮನೆ ಮುಂದೆ ಬಂದಿದ್ದೇವೆ. ನಾವು ಪ್ರತಿನಿತ್ಯ ಬೆಳಗಿನಿಂದಲೇ ಮನೆ ಮನೆಯ ಕಸವನ್ನು ಪಡೆದು ವಿಲೇವಾರಿ ಮಾಡುವ ಅಫೆ ವಾಹನದ ಚಾಲಕರು ಹಾಗೂ ಸಹಾಯಕರುಗಳಾಗಿ ಕೆಲಸ ಮಾಡುತ್ತಿದ್ದು. ಟೆಂಡರ್ ಗಳಿಗೆ ಪೋನ್ ಮಾಡಲು ಹೋದರೇ ಅವರಿಗೆ ಕರೆ ಮಾಡಬೇಡಿ ಎಂದು ಹೇಳುತ್ತಾರೆ.

ಇದುವರೆಗೂ ಗುತ್ತಿಗೆದಾರರು ಯಾರು ಎಂಬುದೇ ಗೊತ್ತಿಲ್ಲ. ವರ್ಷಕ್ಕೊಮ್ಮೆ ಬದಲಾವಣೆ ಆಗುತ್ತಾರೆ. ಇದುವರೆಗೂ ನಗರಸಭೆಯಿಂದಲೇ ಚೆಕ್ ಕೊಡಲಾಗುತ್ತಿತ್ತತು ಎಂದರು. ಹಾಸನ ನಗರಸಭೆಯ ೩೫ ವಾರ್ಡ್‌ಗಳ ಕಸ ವಿಲೇವಾರಿ ಮಾಡುವವರು ಎಲ್ಲಾ ಸೇರಿ ೨೦೦ ಜನರು ಕೆಲಸ ಮಾಡುತ್ತಿದ್ದು, ಇನ್ನು ಮುಂದೆ ನಮಗೆ ಪ್ರತಿ ತಿಂಗಳು ನಮಗೆ ಸಂಬಳ ಬರುವಾಗೆ ಮಾಡಿಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಸಂಬಳ ಬರುವವರೆಗೂ ನಾವು ಕೆಲಸ ಮಾಡುವುದಿಲ್ಲ ಎಂದು ಇದೆ ವೇಳೆ ಮಾಧ್ಯಮದ ಬಳಿ ತಮ್ಮ ಅಳಲು ತೋಡಿಕೊಂಡು ತುಂಬ ಸಮಯದವರೆಗೂ ಶಾಸಕರ ಮನೆ ಮುಂದೆ ಅಫೆ ವಾಹನ ಚಾಲಕರು ಮತ್ತು ಸಹಾಯಕರು ಕಾದು ನಿಂತರು.

Ashika S

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

1 hour ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

1 hour ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

2 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

2 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

2 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

2 hours ago