News Karnataka Kannada
Friday, May 17 2024
ಹಾಸನ

ಹಾಸನ: ಪ್ರೀತಂ ಕಮಲದ ಕಹಳೆಗೆ ಹರಿದು ಬಂತು ಜನ ಸಾಗರ

Hassan: A sea of people poured in
Photo Credit : News Kannada

ಹಾಸನ : ರಾಜಕೀಯ ಇತಿಹಾಸ ಹೊಂದಿರುವ ಹಾಸನ ಜಿಲ್ಲೆಯಲ್ಲಿ ಇಡೀ ಜಿಲ್ಲೆಯದ್ದೇ ಒಂದು ತೂಕವಾದರೆ ಹಾಸನ ವಿಧಾನಸಭಾ ಕ್ಷೇತ್ರದ್ದೇ ಮತ್ತೊಂದು ತೂಕವೆಂಬಂತೆ ಕ್ಷೇತ್ರದ ರಾಜಕೀಯ ಸಂಚಲನವನ್ನುಂಟು ಮಾಡುತ್ತಿದೆ.

ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಜೆಡಿಎಸ್‌ನೊಳಗೆ ಹಾದಿ ರಂಪ-ಬೀದಿ ರಂಪಾಟವಾಗಿ ರಾಜ್ಯದ ಗಮನ ಸೆಳೆದಿದೆ. ಹಾಲಿ ಶಾಸಕ ಪ್ರೀತಂ ಮಣಿಸಲು ಅಭ್ಯರ್ಥಿಗಾಗಿ ಪೈಪೋಟಿಗಿಳಿದಿದ್ದಾರಾದರೂ ಈವರೆಗೆ ಅದು ಯಶಸ್ಸು ಕಂಡಿಲ್ಲ. ಈ ನಡುವೆ ಹಾಸನದಲ್ಲಿದ್ದು ಶಾಸಕ ಪ್ರೀತಂ ಜೆ ಗೌಡ ನಡೆಸಿದ ನಾಮಪತ್ರ ರ್‍ಯಾಲಿ ಅಭೂತ ಪೂರ್ವ ಯಶಸ್ಸು ಕಂಡಿದೆ.

ನೂರಾರು ವಾಹನಗಳಲ್ಲಿ ನಗರಕ್ಕೆ ಆಗಮಿಸಿದ ಸಹಸ್ರಾರು ಮಂದಿ ಬಿಳಿ ಟೋಪಿ ಹಾಕಿ ಕೇಸರಿ ಶಾಲು ಹೊದ್ದು ಪ್ರೀತಂ ಜೆ ಗೌಡ ಪರ ಘೋಷಣೆ ಕೂಗುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು.

ಇಂದು ಬೆಳಗ್ಗೆ ೯.೩೦ರಿಂದ ನಗರಕ್ಕೆ ಆಗಮಿಸಿದ ಹಲವು ವಾಹನಗಳು ಸಹಸ್ರಾರು ಜನರನ್ನು ಕರೆ ತಂದಿದ್ದವು. ನಗರದ ಜಿಲ್ಲಾ ಕ್ರೀಡಾಂಗಣ ಪ್ರದೇಶ, ಹೇಮಾವತಿ ನಗರ, ರಿಂಗ್ ರಸ್ತೆ, ಸಾಲ ಗಾಮೆ ರಸ್ತೆ, ಎಂ.ಜಿ.ರಸ್ತೆ, ಆರ್.ಸಿ. ರಸ್ತೆಗಳು ಪ್ರೀತಂ ಜೆ ಗೌಡ ಅವರ ಪರವಾಗಿ ಆಗಮಿಸಿದ್ದ ಅಭಿಮಾನಿ ಗಳಿಂದ ತುಂಬಿ ತುಳುಕುತ್ತಿದ್ದವು. ಉರಿಯುವ ಬಿಸಿಲಿನಲ್ಲಿ ಕಣ್ಣು ಹಾಯಿಸಿದುದ್ದಕ್ಕೂ ಬಿಳಿ ಟೋಪಿ , ಕೇಸರಿ ಶಾಲು ಹೊದ್ದಿದ್ದ ಜನರು ದುಂಬಿಗಳ ಇಂಡು ಕಡಂತೆ ಕಂಡು ಬರುತ್ತಿದ್ದದ್ದು ಸಾಮಾನ್ಯವಾಗಿತ್ತು.
ಎಲ್ಲೆಲ್ಲೂ ಪ್ರೀತಂ ಜೆ ಗೌಡ ಪರ ಘೋಷಣೆ, ಬಿಜೆಪಿ ಪರ ಘೋಷಣೆ ಮೊಳಗುತ್ತಿತ್ತು. ಮೆರವಣಿಗೆಯ ಒಂದು ತುದಿ ಹಾಸನದ ಎನ್.ಆರ್.ವೃತ್ತದ ಲ್ಲಿದ್ದರೆ ಮತ್ತೊಂದು ತುದಿ ನಗರದ ಸಾಲಗಾಮೆ ರಸ್ತೆಯ ಎಂ.ಸಿ.ಇ ಕಾಲೇಜಿನ ವರೆಗೆ ಸಾಗಿದ್ದು ಮಾತ್ರ ನೋಡುಗರ ಹುಬ್ಬೇರಿಸಿತ್ತು. ಸಾಗರೋಪಾದಿಯಲ್ಲಿ ಬಂದ ಜನರು ಸಾಲಗಾಮೆ ರಸ್ತೆ ಮಾರ್ಗವಾಗಿ ಮಹಾವೀರ ವೃತ್ತ, ಎನ್.ಆರ್.ವೃತ್ತ ತಲುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಾಗಬೇಕಿತ್ತಾದರೂ ಜನರ ಅತಿಯಾದ ದಟ್ಟಣೆಗೆ ಮೆರವಣಿಗೆಯಲ್ಲಿ ದೊಡ್ಡ ಸಾಗರ ಹೊರಟರೆ ಮತ್ತೊಂದೆಡೆ ನಗರದ ಜಿಲ್ಲಾ ಕ್ರೀಡಾಂಗಣದಿಂದ ಸಾವಿರಾರು ಮಂದಿ ಆರ್.ಸಿ.ರಸ್ತೆ ಮಾರ್ಗವಾಗಿ ಮತ್ತೊಂದು ಮೆರವಣಿಗೆ ಸಾಗಿದಂತೆ ಎನ್.ಆರ್.ವೃತ್ತದತ್ತಾ ಸಾಗುತ್ತಿತ್ತು. ಮತ್ತಷ್ಟು ಸಹಸ್ರಾರು ಮಂದಿ ನಗರದ ಮಹಾರಾಜ ಪಾರ್ಕ್‌ನಲ್ಲಿ ಹಾದು ಎನ್.ಆರ್.ವೃತ್ತದತ್ತ ಬರುತ್ತಿತ್ತು. ಈ ಬೃಹತ್ ಜನಸ್ತೋಮವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರಾದರೂ ಬಿಜೆಪಿಯ ಸ್ವಯಂ ಸೇವಕರ ತಂಡವೇ ಜನಸ್ತೋಮವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತಾ ಸಾಗಿದ್ದು ವಿಶೇಷವಾಗಿತ್ತು.

ತೆರೆದ ವಾಹನದಲ್ಲಿ ಶಾಸಕ ಪ್ರೀತಂ ಜೆ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್, ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಸಿಮೆಂಟ್ ಮಂಜು, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ನವಿಲೇ ಅಣ್ಣಪ್ಪ, ಹಿರಿಯ ಬಿಜೆಪಿ ಮುಖಂಡರಾದ ಹೆಚ್.ಎಂ.ಸುರೇಶ್ ಕುಮಾರ್ ಮತ್ತಿತರರು ಸಹಸ್ರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ನಗರದ ಕ್ರೀಡಾಂ ಗಣದಿಂದ ಹೊರಟು ಸಾಲಗಾಮೆ ರಸ್ತೆ , ಸಹ್ಯಾದ್ರಿ ವೃತ್ತ, ಮಹಾವೀರ ವೃತ್ತ, ಬಳಿಕ ಎನ್.ಆರ್.ವೃತ್ತದ ವರೆಗೆ ಸಾಗಿ ಬಂದರು.
ಬೆಳಗ್ಗೆ ೧೦.೩೦ಕ್ಕೆ ಆರಂಭಗೊಂಡ ಮೆರವಣಿಗೆ ಎನ್.ಆರ್.ವೃತ್ತಕ್ಕೆ ಆಗಮಿಸುವ ವೇಳೆ ೧. ಗಂಟೆಯಾಗಿದ್ದು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಜನಸಂಖ್ಯೆಗೂ ಸಾಕ್ಷಿಯಾಯಿತು.

ಈ ನಡುವೆ ಸಹಸ್ರಾರು ಜನರ ಮಧ್ಯೆ ರೋಡ್ ಶೋನಲ್ಲಿ ಭಾಗವಹಿಸಿದ ಪ್ರೀತಂ ಜೆ ಗೌಡ ಪ್ರತಿಯೊಬ್ಬ ಕಾರ್ಯ ಕರ್ತರಿಗೆ ಹಾಗೂ ರಸ್ತೆಯ ಪಕ್ಕದಲ್ಲಿ ನಿಂತಿದ್ದಂತಹ ಸಾರ್ವಜನಿಕರಿಗೆ ಕೈಬೀಸಿ ಗೆಲುವಿನ ನಗೆ ಬೀರುತ್ತಾ ನಮಸ್ಕರಿಸುತ್ತ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಗರದಲ್ಲಿ ಜನ ದಟ್ಟಣೆ : ಪರದಾಡಿದ ವಾಹನ ಸವಾರರು
ನಗರದಲ್ಲಿ ನಡೆದ ಪ್ರೀತಂ ಜೆ ಗೌಡರ ನಾಮಪತ್ರ ರ್‍ಯಾಲಿಗೆ ಹಿಂದೆಂದೂ ಕಂಡು ಕೇಳರಿಯದಷ್ಟು ಸಂಖ್ಯೆಯಲ್ಲಿ ಆಗಮಿಸಿದ ಸಹಸ್ರಾರು ಸಂಖ್ಯೆಯಲ್ಲಿದ್ದ ಜನರಿಂದಾಗಿ ನಗರದಲ್ಲಿ ಎಲ್ಲೆಡೆ ವಾಹನ ದಟ್ಟಣೆ ಕಂಡು ಬಂದಿತು.ಎಲ್ಲಿ ನೋಡಿದರೂ ನೂರಾರು, ಸಾವಿರಾರು ಜನರ ಗುಂಪುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರಿಂದ ಮೂರರಿಂದ ನಾಲ್ಕು ಗಂಟೆಗಳ ಕಾಲ ನಗರದಲ್ಲಿ ದಿಗ್ಭಂಧನದ ವಾತಾವರಣ ಕಂಡು ಬಂದಿತು. ಪೊಲೀಸರು ಜನರನ್ನು ನಿಯಂತ್ರಿಸಲು ಹರ ಸಾಹಸ ಪಡುತ್ತಿದ್ದದ್ದು ಕಂಡು ಬಂದಿತು. ಜನರ ದಟ್ಟಣೆಯಿರುವ ರಸ್ತೆಗಳಲ್ಲಿ ಸಂಚರಿಸಿದ ವಾಹನ ಸವಾರರು ಒಂದು ರಸ್ತೆ ಕ್ರಮಿಸಲು ಒಂದು ಗಂಟೆಗಳ ಕಾಲ ಪರದಾಡುತ್ತಿದ್ದದ್ದು ಸಹ ಕಂಡು ಬಂದಿತು.

ಸಾಮಾನ್ಯ ಯುವಕ ಶಾಸಕನಾಗಲು ಸಂವಿಧಾನ ಕಾರಣ: ಪ್ರೀತಂಗೌಡ
ಹಾಸನ: ಬೃಹತ್ ರ್‍ಯಾಲಿಯಲ್ಲಿ ಪಾಲ್ಗೊಂಡ ಬಳಿಕ ಎನ್.ಆರ್. ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರೀತಂ ಗೌಡ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಭೂಮಿಕೆಯಾಗಿ ಓರ್ವ ಸಾಮಾನ್ಯ ಕುಟುಂಬದ ಯುವಕನಿಗೆ ಶಾಸಕ ಸ್ಥಾನವನ್ನು ನೀಡಿದೆ. ಓರ್ವ ಸಾಮಾನ್ಯ ಕಾರ್ಯಕರ್ತ ಶಾಸಕನಾಗಲು ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಕಾರಣ ಎಂದು ಹೇಳಿದರು.

ಇಂದು ಅಂಬೇಡ್ಕರ್ ಅವರ ಜನ್ಮದಿನ ಹಾಗೂ ರಂಜಾನ್ ಪ್ರಯುಕ್ತ ಉಪವಾಸ ಕೈಗೊಂಡಿರುವ ಮುಸಲ್ಮಾನ ಬಾಂಧವರ ಪವಿತ್ರ ದಿನವಾ ಗಿದ್ದು ಹಿಂದೂ ಸಂಪ್ರದಾ ಯದ ಪ್ರಕಾರ ಶುಕ್ರವಾರವು ಲಕ್ಷ್ಮಿ ದೇವತೆಯ ದಿನವಾ ಗಿದೆ ನವೆಂಬರ್ ೧೪ ನನ್ನ ಜನ್ಮದಿನ ಇಂದು ಏಪ್ರಿಲ್ ೧೪ , ೧೪ ಸಂಖ್ಯೆ ನನಗೆ ಲಕ್ಕಿ ನಂಬರ್ ಆದ್ದರಿಂದ ಇಂದು ನಾಮಪತ್ರ ರ್‍ಯಾಲಿ ಯನ್ನು ಹಮ್ಮಿಕೊಳ್ಳ ಲಾಯಿತು ಎಂದರು.

ಮೇ ೧೦ ರಂದು ನಡೆಯುವ ಚುನಾವಣೆಯಲ್ಲಿ ಮತದಾರರು ಒಂದು ಲಕ್ಷ ಮತಗಳನ್ನು ನೀಡುವ ಮೂಲಕ ತಮ್ಮ ಮನೆಯ ಮಗ ಸಾಮಾನ್ಯ ಕುಟುಂಬದ ಯುವಕ ಎರಡನೇ ಬಾರಿ ಶಾಸಕನಾಗಲು ಆಶೀರ್ವಾದ ಮಾಡಲಿದ್ದಾರೆ ಎಂದು ಪ್ರೀತಂಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ನನಗೆ ನೇರ ಎದುರಾಳಿ ಆದರೆ ಹಾಸನ ವಿಧಾನಸಭಾಕ್ಷೇತ್ರ ಟಿಕೆಟ್ ಹಂಚಿಕೆಯಲ್ಲಿ ಗೊಂದಲಕ್ಕೀಡಾಗಿದ್ದಾರೆ. ಅಭ್ಯರ್ಥಿಗಳು ಬಸ್ ಟಿಕೆಟ್ ಟ್ರೈನ್ ಟಿಕೆಟ್ ದೊರೆಯುತ್ತದೋ ಎಂಬುದನ್ನು ಮತದಾರರೇ ನಿರ್ಧಾರ ಮಾಡುತ್ತಾರೆ ಎಂದು ಟೀಕಿಸಿದರು.

ನಾಮಪತ್ರ ರ್‍ಯಾಲಿಯ ಕೊನೆಯಲ್ಲಿ ಪ್ರೀತಂ ಕಾರ್ಯಕರ್ತರು ಮತ್ತು ನೆರೆದಿದ್ದ ಜನಸ್ತೋಮಕ್ಕೆ ತಮ್ಮ ವಿಪಕ್ಷ ನಾಯಕರ ಕಿವಿ ತಟ್ಟುವಂತೆ ಜೈಕಾರ ಹಾಕಿಸಿದ್ದು ವಿಶೇಷವಾಗಿತ್ತು. ಹೊಳೆನರಸೀಪುರ ಹಾಗೂ ಹೇಮಾವತಿ ನಗರಕ್ಕೂ ಕೇಳಬೇಕು ಎಂದು ಹೇಳಿದ ಪ್ರೀತಂ ಗೌಡ ಐದು ವರ್ಷ ಉತ್ತಮ ಆಡಳಿತ ನೀಡುವ ಮೂಲಕ ನಿಮ್ಮ ಸೇವೆ ಮಾಡಿದ್ದು ನನ್ನ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ. ೨೫ ವರ್ಷ ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಆಗದಂತಹ ಅಭಿವೃದ್ಧಿಯನ್ನು ನಿಮ್ಮ ಆಶೀರ್ವಾದದಿಂದ ಐದು ವರ್ಷದಲ್ಲಿ ಪ್ರಾಮಾಣಿಕವಾಗಿ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ನಾನು ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ. ನಾನು ಮಾಡಿದ ಕೆಲಸಗಳನ್ನು ಕೂಲಿಯಾಗಿ ಮತಕೇಳಿ ಎಂದು ಕಾರ್ಯಕರ್ತರನ್ನು ಹುರುದುಂಬಿಸಿದ ಪ್ರೀತಂಗೌಡ ಈ ಬಾರಿಯ ಫಲಿತಾಂಶ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಲಿದ್ದು, ಅಂದು ನನ್ನೊಂದಿಗೆ ಬೇಲೂರು ಅರಸೀಕೆರೆ ಸಕಲೇಶಪುರ ಹಾಗೂ ಅರಕಲಗೂಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಸಹ ಗೆದ್ದು ನನ್ನೊಂದಿಗೆ ವಿಜಯೋತ್ಸವ ಆಚರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರ್‍ಯಾಲಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ನವಿಲೇ ಅಣ್ಣಪ್ಪ, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಸುರೇಶ್ ಕುಮಾರ್ ಹಾಗೂ ಮುಖಂಡರು ಭಾಗವಹಿಸಿದ್ದರು.

ವಿಪಕ್ಷದವರ ಬಗ್ಗೆ ಟೀಕೆ ಮಾಡಲ್ಲ
ಹಾಸನ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರೊಂದಿಗೆ ನಾಮಪತ್ರ ಮಾಡಿದ ಉದಾಹರಣೆ ಇಲ್ಲವೆಂದು ಹೇಳಿದ ಶಾಸಕ ಪ್ರೀತಂ ಜೆ ಗೌಡ, ತಮ್ಮ ರಾಜಕೀಯ ಎದುರಾಳಿಗಳು ಈಗಲೂ ಮಲಗಿದ್ದಾರೆ. ಟಿಕೆಟ್ ಪಡೆಯುವ ವಿಚಾರದಲ್ಲಿ ಅವರವರೆ ಪ್ರಚಾರ ಪಡೆಯುತ್ತಿದ್ದಾರೆ. ಇನ್ನು ಇಂದಿನ ರ್‍ಯಾಲಿ ನೋಡಿದ ತಮ್ಮ ಪ್ರತಿಸ್ಪರ್ಧಿಗಳು ಟಿಕೆಟ್ ಪಡೆಯಲು ನೂರು ಸಲ ಯೋಚನೆ ಮಾಡಬೇಕು ಎಂಬಂತೆ ನೀವೆಲ್ಲ ಶಕ್ತಿ ನೀಡಿದ್ದೀರಿ ಎಂದು ಹೇಳಿದರು.

ವಿಪಕ್ಷದವರ ಬಗ್ಗೆ ಟೀಕೆ ಮಾಡುವುದಿಲ್ಲವೆಂದ ಅವರು ಜೆಡಿಎಸ್‌ನಿಂದ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆದಿದೆ. ಅವರು ಟಿಕೆಟ್ ಪಡೆದು ಬಂದರೆ ಠೇವಣಿ ದೊರೆಯದಂತೆ ಮತ ನೀಡಿ ಎಂದು ಕರೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು