News Karnataka Kannada
Monday, April 29 2024
ಹಾಸನ

ಹಾಸನ: ಬೆಳಕು ಮೂಡಿದಾಗ ವೈಚಾರಿಕತೆಯುಳ್ಳ ಕೃತಿ- ವಿಮರ್ಶಕ ಡಾ.ಬಿ.ಎಂ.ಪುಟ್ಟಯ್ಯ

A book with rationality when the light rises: Critic Dr. B.M. Puttaiah
Photo Credit : News Kannada

ಹಾಸನ: ಬೆಳಕು ಮೂಡಿದಾಗ ಕೃತಿಯು ವೈಚಾರಿಕತೆಯುಳ್ಳ ಕೃತಿಯಾಗಿದ್ದು ಇದು ಹೆಣ್ಣಿನ  ಸ್ವಭಾವವನ್ನು ಕೃತಿಕಾರರಾದ ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್ ಕಾದಂಬರಿಯಲ್ಲಿ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ವಿಮರ್ಶಕ ಡಾ.ಬಿ.ಎಂ.ಪುಟ್ಟಯ್ಯ ವಿಮರ್ಶಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್ ಅವರ ಬೆಳಕು ಮೂಡಿದಾಗ ಕೃತಿ ಕುರಿತು ಮಾತನಾಡಿದ ಅವರು ಕಾದಂಬರಿಯಲ್ಲಿ ಕೃತಿಕಾರರು ಪ್ಲ್ಯಾಷ್ ಬ್ಯಾಕ್ ತಂತ್ರಗಾರಿಕೆ ಯನ್ನು ಬಳಸಿದ್ದು ಪಾತ್ರಗಳ ನಿರೂಪಣೆಯ ಭಾಷೆಯೊಳಗೆ ಪ್ರಜಾಪ್ರಭುತ್ವವನ್ನು ಕಾಣಬಹುದಾಗಿದೆ.

ಈ ಕಥನ ಸಮಾಜ ಸೇವಕ ಕುದ್ಮಲ್ ರಂಗರಾವ್ ಅವರ ಕನಸಿನ ಸಾಹಿತ್ಯ ಅವರು ತಳ-ವರ್ಗದವರು ಶಿಕ್ಷಣವಂತರಾಗಿ ಉನ್ನತ ಸ್ಥಾನಮಾನವನ್ನು ಪಡೆಯಬೇಕು ಅವರು ಓಡಾಡುವ ಕಾರಿನ ಧೂಳು ನನ್ನ ಹಣೆಗೆ ಬೀಳಬೇಕು ಎಂದು ಹೇಳಿದ ಮಹಾನ್ ವ್ಯಕ್ತಿ ಇಂತಹವರ ಆಶಯವನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ.

ಶಿಕ್ಷಣ ಎನ್ನುವುದು ಒಂದು ಪ್ರಜಾ ಸತ್ತಾತ್ಮಕ ಅಭೌತಿಕವಾದ ಚಿರಂತನವಾದ ಆಸ್ತಿ. ಶಿಕ್ಷಣ ಪಡೆದ ವಿದ್ಯಾವಂತ ರು ಸಮಾಜದ ಆಸ್ತಿ ಯಾಗಬೇಕು ಅಂದರೆ ಸ್ವಾವಲಂಬಿ ಬದುಕುಕಟ್ಟಿಕೊಳ್ಳಲು ತಮ್ಮನ್ನು ತಾವು ಸಜ್ಜುಗೊಳಿಸಿ ಕೊಳ್ಳಬೇಕು ಎಂದು ವಿವರಿಸುತ್ತಾ ಕೃತಿಯಲ್ಲಿ ಶಿಕ್ಷಣ ಪಡೆದ ಹೆಣ್ಣು ಹೇಗೆ ತನ್ನ ಸ್ವಾವಲಂಬಿ ಬದುಕುಕಟ್ಟಿಕೊಂಡು ಸಮುದಾಯದ ಆಸ್ತಿ ಯಾಗುತ್ತಾಳೆ ಎಂಬ ಚಿತ್ರಣವನ್ನು ಬಹಳಚನ್ನಾಗಿ ಕಟ್ಟಿಕೊಟ್ಟಿದ್ದಾರೆ.

ದೇವನೂರು ಮಹಾದೇವ್ ಅವರ ಡಾಂಬರು ಬಂದುದು ಪೂರ್ಣ ಚಂದ್ರತೇಜಸ್ವಿಯವರ ತಬರನಕಥೆ, ನಿರಂಜನ ಅವರ ಚಿರಸ್ಮರಣಿ ಕಾದಂಬರಿ ಮತ್ತು ಶಿವರುದ್ರ ಕಲ್ಲೋಳಿಕರ್ ಅವರ ?ಹೊಲೆಗೇರಿಯ ರಾಜಕುಮಾರ ಅವರ ಕಾದಂಬರಿಗಳನ್ನು ಹೆಸರಿಸುತ್ತಾ ಕಥೆ ಕಾದಂಬರಿಗಳು ಹೇಗೆ ಹುಟ್ಟುತ್ತದೆ ಎನ್ನುವುದನ್ನು ವಿವರಿಸುತ್ತಾ ಬೆಳಕು ಮೂಡಿದಾಗ ಕಾದಂಬರಿ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಿದ್ದು ಆಶಾವಾದದಿಂದ ಕೂಡಿದೆ ಎಂದರು.

ಕೃತಿ ಬಿಡುಗಡೆ ಮಾಡಿ ಮಾತ ನಾಡಿದ ಸಿನಿಮಾ ನಿರ್ದೆಶಕ ಎನ್. ಎಸ್.ಶಂಕರ್ ಕಥೆಗಳಲ್ಲಿ ಸಂಘರ್ಷ ಸೃಷ್ಠಿಯಾದರೆ ಉತ್ತಮ ಕಥೆಯಾಗುತ್ತದೆ ಬೆಳಕು ಮೂಡಿದಾಗ ಕಾದಂಬರಿಯಲ್ಲಿ ವೈವಿದ್ಯಮಯವಾದ ಚಿತ್ರಣವಿದ್ದು ಸಿನಿಮಾ ಮಾದರಿಯಂತೆ ಈ ಕಾದಂಬರಿಯಲ್ಲಿ ಹಲವು ಸಂಘರ್ಷ ಗಳನ್ನು ಚಿತ್ರಿಸಲಾಗಿದೆ ಎಂದು ವಿಶ್ಲೇಷಿಸಿದರು.

ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಡಾ.ಎಂ.ಎಸ್. ಶೇಖರ್ ನಕರಾತ್ಮಕ ಚಿಂತನೆಗಳಿಂದ ಈ ಜಗತ್ತಿನಲ್ಲಿ ಯಾರೂ ಶ್ರೇಷ್ಠ ರಾಗಿಲ್ಲ ಯಾವುದೇ ಬರಹಗಾರ ಕಲಾವಿದ ಚಿಂತಕ ಸಕರಾತ್ಮಕ ಆಲೋಚನೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು ಗಾಂಧಿಜೀ ಅಂಬೇಡ್ಕರ್ ಕುವೆಂಪು ಅವರು ಎಷ್ಟೇ ಸಂದಿಗ್ಥತೆ ಪರಿಸ್ಥಿತಿಗಳು ಅವಮಾನಗಳು ಎದುರಾದರು ನಕರಾತ್ಮಕ ಚಿಂತನೆ ಮಾಡಲಿಲ್ಲ ಅವರ ಸಕಾರಾತ್ಮಕ ಚಿಂತನೆಯ ಪ್ರೀತಿಯ ನಡವಳಿಕೆಯಿಂದ ಅವರು ಶ್ರೇಷ್ಠ ವ್ಯಕ್ತಿಯಾದರು ಎಂದು ಬರಹಗಾರರಿಗೆ ಯಾರು ಗುರುವಿಲ್ಲ ಬರಹಗಾರ ತನ್ನ ಬರಹವನ್ನು ತಾನೇ ನಿಕೃಷ್ಠವಿಮರ್ಶೆ ಮಾಡಿಕೊಳ್ಳುವ ಮೂಲಕ ವಿಮರ್ಶಕ ನಾಗಬೇಕು ಕುವೆಂಪು ದೇವನೂರು ಮಹದೇವ, ಪೂರ್ಣ ಚಂದ್ರತೇಜಸ್ವಿ ಬರಹ ಮತ್ತು ಚಿತ್ರಕಲೆಯಲ್ಲಿ ಕೆ.ಟಿ.ಶಿವಪ್ರಸಾದ್ ಅವರ ಚಿತ್ರಕಲೆಗಳಲ್ಲಿ ಸೂಕ್ಷ್ಮವಾದ ಶಕ್ತಿ ಇದೆ ಇವು ಯಾವುದೇ ಇಸಂಗೆ ಒಳಪಡುವುದಿಲ್ಲ .ಬಹಳ ಮೊಣಚಾದ ಹರಿತವಾದ ಬರಹ ಮತ್ತು ಕಲೆ ಎಂದು ವಿಮರ್ಶಿ ಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಹೆಚ್.ಎಲ್ .ಮಲ್ಲೇಶ್ ಗೌಡ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್, ಕವಿ ಐಚನಹಳ್ಳಿ ಕೃಷ್ಣಪ್ಪ ಸಾಹಿತಿ ಸಿ.ಸುವರ್ಣ ಕೆ.ಟಿ.ಶಿವ ಪ್ರಸಾದ್ ಉಪಸ್ಥಿತಿಯಲ್ಲಿದ್ದರು. ಸಾಹಿತಿ ಗಳಾದ ಎಂ.ಎಸ್.ಶಿವಣ್ಣ ಸ್ವಾಗತಿಸಿದರು. ವೇದಾವತಿ ಪ್ರಾರ್ಥಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು