News Karnataka Kannada
Friday, May 03 2024
ಹಾಸನ

ಹೆಚ್.ಡಿ.ದೇವೇಗೌಡರು ಬಂದು ಎದೆ ಬಡಿದುಕೊಂಡ್ರು ನನ್ನನ್ನು -ಶಿವಲಿಂಗೇಗೌಡರನ್ನು ಸೋಲಿಸಲಾಗಲಿಲ್ಲ

H.D. Deve Gowda came and beat me and Shivalinge Gowda.
Photo Credit : News Kannada

ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನನ್ನ ಕ್ಷೇತ್ರ ಮದುಗಿರಿಗೆ ಬಂದು ಎದೆ ಬಡಿಕೊಂಡರು ನನ್ನನ್ನು ಸೋಲಿ ಸಲಾಗಲಿಲ್ಲ. ಶಿವಲಿಂಗೇಗೌಡರಿಗೂ ಕೂಡ ದೇವೇಗೌಡರು ಬಂದು ಎದೆ ಬಡಿದುಕೊಂಡಿದ್ದನ್ನು ನಾನು ನೋಡಿದ್ದೆ. ದೇವೇಗೌಡರು ಮತ್ತು ಅವರು ಮಕ್ಕಳು ರಾಹು ಕೇತು ಆಗಿ ಶಿವಲಿಂಗೇಗೌಡರಿಗೆ ಕಾಡಿದರು. ನಾನು ಶಿವಲಿಂಗೇಗೌಡ ಇಬ್ಬರು ಜನರ ನಡುವೆ ಇದ್ದುದರಿಂದ ೨೦-೩೦ ಸಾವಿರ ಮತಗಳಿಂದ ನಾವಿಬ್ಬರು ಗೆದ್ದು ಬಂದಿದ್ದೇವೆ ಎಂದು ಜೆಡಿಎಸ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹರಿಹಾಯುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಭವನದ ಆವರಣದಲ್ಲಿ ನಡೆದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ೩೬ ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದೆವೆ. ಇನ್ನೂ ಜಿಲ್ಲೆಯಲ್ಲಿ ಜೆಡಿಎಸ್ ದಬ್ಬಾಳಿಕೆಗೆ ಹೆದರಿ ಮತ ನೀಡಿದ್ದಾರೆ. ಕಡಿಮೆ ಮತಗಳ ಅಂತರದಿಂದ ಕೆಲವರು ಗೆದ್ದಿರುವುದನ್ನು ನೋಡಿ ಜನ ಈಗ ಯಾರಿಗೂ ಹೆದರುವುದಿಲ್ಲ ಎನ್ನುವ ಮೂಲಕ ರೇವಣ್ಣ ಅವರ ಹೆಸರು ಹೇಳದೆ ವ್ಯಂಗ್ಯವಾಡಿದರು.

ನಾವು ದೊಡ್ಡ ಸಮಾಜದ ಕಡೆ ಗಮನಕೊಡದೆ ಮಧ್ಯಮ ವರ್ಗ ಹಾಗೂ ಸಣ್ಣ ಸಮಾಜವನ್ನು ನೋಡಬೇಕು ಎಂದು ಕುಟುಕಿದರು. ಮುಂದಿನ ದಿನಗಳಲ್ಲಿ ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ಎಲ್ಲಾ ಮುಖಂಡರ ಜೊತೆ ವೈಯಕ್ತಿಕವಾಗಿ ಮಾತನಾಡಿ ಪಕ್ಷಕ್ಕೆ ಶಕ್ತಿ ತರುವುದಾಗಿ ಕೆಲಸ ಮಾಡುತ್ತೆನೆ ಎಂದರು.

ಜಿಲ್ಲೆಯ ಕಾರ್ಯಕರ್ತರು ಹಾಗೂ ಮುಖಂಡರು ಸಹಕಾರಿ ಬ್ಯಾಂಕುಗಳಲ್ಲಿ ನಮಗೆ ನ್ಯಾಯ ಸಿಗುತ್ತಿಲ ಎಂದು ನಮಗೆ ತಿಳಿಸಿದ್ದಾರೆ. ಜಿಲ್ಲಾ ಸಹಕಾರಿ ಬ್ಯಾಂಕುಗಳು ಯಾವುದೇ ಪಕ್ಷದ ಹಾಗೂ ವ್ಯಕ್ತಿಯದಲ್ಲ ಎಂದು ಪರೋಕ್ಷವಾಗಿ ಹೆಚ್.ಡಿ. ರೇವಣ್ಣನವರ ವಿರುದ್ಧ ಕುಟುಕಿದರು,
ತಪ್ಪು ನಡೆದಿದ್ದರೆ ಸರಿಪಡಿಸುವ ಕೆಲಸ ಮಾಡಲಾಗುವುದು. ನಾನು ತುಮಕೂರು ಜಿಲ್ಲೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷನಾಗಿ ಸಾಲ ವಿತರಣೆಯಲ್ಲಿ ತಾರತಮ್ಯವನ್ನು ಎಂದು ಮಾಡಿಲ್ಲ ಮಾಡುವುದಿಲ್ಲ ಎಂದು ಹೇಳಿದ ಅವರು ಸಾಲ ಪಡೆಯಲು ಅರ್ಹತೆ ಇರುವರಿಗೆ ಸಾಲ ನೀಡಬೇಕು. ಸಹಕಾರಿ ಬ್ಯಾಂಕುಗಳು ಯಾವುದೇ ಪಕ್ಷದ ಹಾಗೂ ವ್ಯಕ್ತಿಯದಲ್ಲ ಎಂದು ಪರೋಕ್ಷವಾಗಿ ಹೆಚ್.ಡಿ. ರೇವಣ್ಣನವರ ವಿರುದ್ಧ ಕಿಡಿಕಾರಿದರು. ರಾಜ್ಯದಲ್ಲಿ ಶೇಕಡಾ ೯೯ ರಷ್ಟು ಮುಸ್ಲಿಂ ಸಮುದಾಯವರು ನಮಗೆ ಮತ ನೀಡಿದ್ದಾರೆ. ನಾವು ಅವರನ್ನು ಸುಮ್ಮನೆ ದುಡಿಸಿಕೊಳ್ಳದೇ ಅವರಿಗೂ ಕೆಲಸ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ನಾನು ಸಚಿವ ಹಾಗೂ ಉಸ್ತುವಾರಿ ಸಚಿವ ಅದು ಸರ್ಕಾರಕ್ಕೆ ಸಂಬಂದಪಟ್ಟರುವುದು. ಆದರೆ ನಾನು ಇಲ್ಲಿ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತ. ನಾನು ಕಾರ್ಯಕರ್ತರನಾಗಿ ದ್ದಾಗ ಸಚಿವರು ಹಾಗೂ ಸರ್ಕಾರದ ಬಳಿ ಎನು ನಿರೀಕ್ಷೆ ಮಾಡುತ್ತಿದ್ದೆ ಅದೆ ರೀತಿ ಕಾಂಗ್ರೆಸ್ ಕಾರ್ಯಕರ್ತರ ನಿರೀಕ್ಷೆ ಇರುತ್ತದೆ ಎಂದರು. ಕಾಂಗ್ರೆಸ್ ಪಕ್ಷದ ಮುಖಂಡರ ಭಾವನಗಳಿಗೆ ದಕ್ಕೆ ಭಾರದಂತೆ ನಾನು ಕೆಲಸ ಮಾಡುತ್ತೆನೆ.

ಹಾಸನ ಜಿಲ್ಲೆಯ ಕಾರ್ಯಕರ್ತರು ಮುಖಂಡರು ಚುನಾವಣೆಯಲ್ಲಿ ಸೋತ ಕಾರಣ ದೃತಿಗಡುವ ಅವಶ್ಯಕತೆ ಇಲ್ಲ ಧೈರ್ಯ ತುಂಬಿದರು. ಮುಂದೆ ಬರುವ ಜಿಪಂ ಮತ್ತು ತಾಪಂ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಜಯಗಳಿಸಲು ಸಂಕಲ್ಪ ಮಾಡಬೇಕು.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕನಿಷ್ಡ ೨೦ ಸೀಟುಗಳಾನ್ನಾದರು ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟು ಜಿಲ್ಲೆಯ ಕಾರ್ಯಕರ್ತರ ಮುಖಂಡರ ನಿರೀಕ್ಷೆ ಮೀರಿ ಕೆಲಸ ಮಾಡುವುದಾಗಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಉದ್ಯೋಗ ಕೊಟ್ಟಿಲ್ಲ. ಅದನ್ಯಾರು ಕೇಳಲ್ಲ. ಆದರೆ ಕೆಲಸ ಮಾಡುವವರನ್ನು ಮಾತ್ರ ಎಲ್ಲಿ ಮಾಡಲಿಲ್ಲ ಎಂದು ಕೇಳುತ್ತಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರ ಸ್ವಾಮಿ ಅವರಿಗೆ ೧೨೩ ಸೀಟು ಬರಲಿಲ್ಲ. ಅಂದರೆ ವಿಸರ್ಜನೆ ಮಾಡುತ್ತೆನೆ ಎಂದಿದ್ದರು. ಆದರೆ ಆ ರೀತಿ ಮಾಡಲಿಲ್ಲ ಎಂದು ಟೀಕ ಪ್ರಹಾರ ಮಾಡಿ ವ್ಯಂಗ್ಯವಾಡಿದರು. ಕುಮಾರಸ್ವಾಮಿ ಒಂದೊಂದು ಬಾರಿ ಒಂದೊದು ಬಣ್ಣ ಹಾಕುತ್ತಾನೆ. ಕಳೆದ ಬಾರಿ ಕಾಂಗ್ರೆಸ್ ಜೊತೆ ಬಂದು ಈ ಬಾರಿ ಬಿಜೆಪಿ ಜೊತೆ ಬರುತ್ತಾನೆ ಎಂದು ಟಾಂಗ್ ನೀಡಿದರು. ಜಿಲ್ಲೆಯಲ್ಲಿ ಸೋತಿರುವ ಮುಖಂಡರೆ ನಮ್ಮ ಕ್ಷೇತ್ರದ ಶಾಸಕರು ಅಧಿಕಾರಿಗಳ ವರ್ಗಾವಣೆಗೆ ಅವರ ಪಾತ್ರವೆ ಮುಖ್ಯ ಎಂದು ಮಾತನಾಡಿದರು.

ಸಭೆಯ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ಎದುರು ಕಾಂಗ್ರೆಸ್ ಮುಖಂಡರ ವಿರುದ್ಧವಾಗಿ ಕಾರ್ಯಕರ್ತರು ತಮ್ಮ ಆಕ್ರೋಶವ್ಯಕ್ತಪಡಿಸಿದರು. ಜೆಡಿಎಸ್ ಜೊತೆ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದವರನ್ನು ವೇದಿಕೆಯಿಂದ ಕೆಳಗೆ ಇಳಿಸುವಂತೆ ಆಗ್ರಹಿಸಿ ಕೂಗಾಟ ಮಾಡಿದಾಗ ಖುದ್ಧಾಗಿ ಸಚಿವರೇ ಸಮಧಾನ ಮಾಡಿದ ಪ್ರಸಂಗ ನಡೆಯಿತು. ಈ ಸಂದರ್ಭದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಹೆಚ್.ಕೆ. ಜವರೇಗೌಡ, ಹೆಚ್.ಕೆ. ಮಹೇಶ್, ಶ್ರೇಯಾಸ್, ದೇವರಾಜೇಗೌಡ, ಬಿ. ಶಿವರಾಂ, ಬನವಾಸೆ ರಂಗಸ್ವಾಮಿ, ಪಟೇಲ್ ಶಿವಪ್ಪ, ಅನೀಲ್ ಕುಮಾರ್, ಬಿ.ಪಿ. ಮಂಜೇಗೌಡ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು