News Karnataka Kannada
Sunday, May 05 2024
ಹಾಸನ

ಬೇಲೂರು: ಪ್ರತಿಭೆ ಹೊರತರಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿ

Science exhibition helps bring out talent
Photo Credit : By Author

ಬೇಲೂರು: ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ವಿಜ್ಞಾನ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್ ಹೇಳಿದರು.

ಪಟ್ಟಣದ ಬೇಲೂರು ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೀಪಬೆಳಗಿಸಿ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಮಕ್ಕಳಲ್ಲಿ ಇರುವ ಪ್ರತಿಭೆಯು ಅವರಿಗೆ ಗೊತ್ತಿರುವುದಿಲ್ಲ. ಅಂತಹ ಪ್ರತಿಭೆಯನ್ನು ಗುರುತಿಸಲು ಪೋಷಕರು ಇಂತಹ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರೋತ್ಸಾಹಿಸಬೇಕು. ಕೇವಲ ಪಠ್ಯಪುಸ್ತಕಗಳಿಗೆ ಮೋರೆ ಹೋಗಿ ಅಂಕಗಳಿಕೆಗೆ ಸೀಮಿತರಾಗದೆ ಇತರ ಚಟುವಟಿಕೆಗಳಲ್ಲೂ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಹೊರಹೊಮ್ಮಿಸಿ ಅದರಲ್ಲಿ ಯಶಸ್ವಿಗೊಂಡು ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡು,ಶಾಲೆಗೆ ಕೀರ್ತಿ ತರುವ ಜೊತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೇಮಂತ್ ಮಾತನಾಡಿ ಹಿಂದಿನ ವಿಜ್ಞಾನ ಪ್ರಪಂಚದಲ್ಲಿ ತಿಳಿಯುವಂತಹ ಕೆಲಸಗಳನ್ನು ಇಂದಿನ ಆಧುನಿಕ ಯುಗದಲ್ಲಿ ಸುಲಭವಾಗಿ ತಮ್ಮ ಕಲೆಗಳ ಮುಖಾಂತರ ಹೊಸ ಹೊಸ ಆವಿಷ್ಕಾರ ಗಳನ್ನು ಕಂಡು ಹಿಡಿಯುತ್ತಿದ್ದಾರೆ. ಇಂದು ಅಂಗೈಯಲ್ಲಿ ವಿಜ್ಞಾನ ಇರುವುದರಿಂದ ಮಕ್ಕಳು ವಿದ್ಯಾರ್ಥಿ ಜೀವನಕ್ಕೆ ಹಾಗೂ ತಮ್ಮ ಭವಿಷ್ಯಕ್ಕೆ ಉಪಯೋಗವಾಗುವಂತಹ ಕೆಲಸಗಳನ್ನು ಕಲಿಯುವ ಮುಖಾಂತರ ಮಾದರಿಯಾಗಬೇಕು ಎಂದರು. ಇಂದು ಶಾಲೆಗಳಲ್ಲಿ ವಿಜ್ಞಾನ ಪಠ್ಯ ಗಳಲ್ಲಿ ಶಿಕ್ಷಕರಿಗೆ ಕೆಲಸ ಇರುವುದಿಲ್ಲ ಕಾರಣ ವಿಜ್ಞಾನವನ್ನು ಅತಿ ಸುಲಭವಾಗಿ ಕಲಿತು ತಮ್ಮ ಪ್ರತಿಭೆಯನ್ನು ವಿದ್ಯಾರ್ಥಿಗಳು ತೋರಿಸುವಲ್ಲಿ ನಿಸ್ಸೀಮರಾಗಿದ್ದಾರೆ. ಅವರನ್ನು ಪ್ರೋತ್ಸಾಹಿಸುವುದೇ ಮೊದಲ ಕರ್ತವ್ಯ ಎಂದರು.

ಪಬ್ಲಿಕ್ ಸ್ಕೂಲ್ ನ ಕಾರ್ಯದರ್ಶಿ ಸಿ.ಹೆಚ್.ಮಹೇಶ್ ಮಾತನಾಡಿ ಇಂದು ಶಾಲೆಗಳಲ್ಲಿ ವಿದ್ಯಾರ್ಥಿ ಗಳು ಪರಿಪೂರ್ಣ ವಿದ್ಯಾರ್ಥಿ ಗಳಾಗುತ್ತಿದ್ದಾರೆ. ಕಾರಣ ಅವರ ಸಂಬಂಧಿಕರು ಹಾಗೂ ಪೋಷಕರು ಹಲವಾರು ಚಟುವಟಿಕೆಗಳಲ್ಲಿ ಪರಿಣಿತರಾಗಿರುತ್ತಾರೆ. ಅವರ ಹಾದಿಯಲ್ಲಿ ಮಕ್ಕಳು ತಮ್ಮ ಪ್ರತಿಭೆಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಕೇವಲ ಶಾಲೆಗೆ ಮತ್ತು ಪಠ್ಯಕ್ಕೆ ಸೀಮಿತರಾಗದೆ ಆಧುನಿಕ ಯುಗದಲ್ಲಿ ವಿಜ್ಞಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ಇರುವುದರಿಂದ ಅದರ ಕಡೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಿದ್ಧಪಡಿಸಿ ಪ್ರದರ್ಶನ ನೀಡಿ ನೋಡುಗರ ಮನ ತಣಿಸಿದರು.

ಕಾರ್ಯಕ್ರಮದಲ್ಲಿ ಬೇಲೂರು ಪಬ್ಲಿಕ್ ಶಾಲೆಯ ಅಧ್ಯಕ್ಷರಾದ ಗುರುಪಾದಸ್ವಾಮಿ, ಮುಖ್ಯೋಪದ್ಯಾಯಿನಿ ಸಂಜನಾ,ಶಿಕ್ಷಣ ಸಂಯೋಜಕರಾದ ಗೋಪಾಲ್, ಶಿವಪ್ಪ, ರವಿಕುಮಾರ್, ಪಬ್ಲಿಕ್ ಶಾಲೆಯ ಶಿಕ್ಷಕ ವೃಂದ, ಆಡಳಿತ ಮಂಡಳಿ ಸದಸ್ಯರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು