Categories: ಹಾಸನ

ಬೇಲೂರು: ನಮ್ಮ ದೇಶದ ಸಂಸ್ಕೃತಿ, ಧರ್ಮವನ್ನು ಕಾಪಾಡುವುದೇ ನಮ್ಮ ಕರ್ತವ್ಯ

ಬೇಲೂರು: ನಮ್ಮ ದೇಶದ ಸಂಸ್ಕೃತಿ, ಧರ್ಮವನ್ನು ಕಾಪಾ ಡುವುದೇ ನಮ್ಮ ಕರ್ತವ್ಯ ಎಂದು ಶಾಸಕ ಕೆ ಎಸ್ ಲಿಂಗೇಶ್ ಹೇಳಿದರು.

ತಾಲೂಕಿನ ತೊಳಲು ಗ್ರಾಮ ಪಂಚಾಯತಿಯ ಹೊಸಪೇಟೇ ವೃತ್ತದ ಬಳಿ ಡಾ ಬಿ ಆರ್, ಅಂ ಬೇಡ್ಕರ್ ಅವರ ಪುತಳಿ ನಿರ್ಮಾಣದ ಜಾಗಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಇಂದು ಕೆಲವರು ಜಾತಿ ಜಾತಿ ಮದ್ಯೆ ವಿಷ ಬೀಜ ಬಿತ್ತು ತ್ತಿದ್ದಾರೆ, ದೇಶದ ದೊಡ್ಡದಾದ ನಮ್ಮ ಸಂವಿಧಾನ ವನ್ನು ಡಾ ಬಿ ಆರ್ ಅಂಬೇಡ್ಕರ್ ಅವರು ನೀಡಿದ್ದಾರೆ, ಅದನ್ನು ಉಳಿಸಿ ಬೆಳೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ, ಸ್ವಾಭಿಮಾನದ ಸಂಕೇತ, ಸಂವಿಧಾನದ ರೀತಿಯಲ್ಲಿ ಎಲ್ಲ ರೂ ನಡೆದುಕೊಂಡು ಹೋದರೆ ಯಾವುದೇ ಸಂಘರ್ಷಕ್ಕೆ ದಾರಿಯಾಗಲ್ಲ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಇದ್ದರೆ ದೇಶವು ಸುಭಿಕ್ಷವಾಗುತ್ತದೆ, , ಯಾವುದೇ ಆಮಿಷಕ್ಕೆ ಒಳಗಾಗದೆ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ವ್ಯಕ್ತಿಗೆ ನಿಮ್ಮ ಸಹಕಾರ ಇರಲಿ ಎಂದು ಹೇಳಿದರು.

ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ ಆರ್ ವೆಂಕಟೇಶ್ ಮಾತನಾಡಿ ತಾಲ್ಲೂಕ್ಕಿನಲ್ಲಿ ಸುಮಾರು ೫೦ ವರ್ಷಗಳ ಕಾಲ ಮೀಸಲಾತಿ ಇತ್ತು ನಮ್ಮನಾಳಿದ ಯವ ನಾಯಕರು ಅಂಬೇಡ್ಕರ್ ಪುತಳಿ ನಿರ್ಮಾಣಕ್ಕೆ ಮುಂದೆ ಬರಲಿಲ್ಲ ಮೀಸಲಾತಿ ಕ್ಷೇತ್ರದಲ್ಲಿ ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಿಸಲೇ ಬೇಕೆಂದು ತೀರ್ಮಾನಿಸಲಾ ಯಿತು, ಇಂದು ತಾಲ್ಲೂಕಿನಲ್ಲಿ ದಾನಿಗಳು ಎಚ್ಚಿದ್ದು ಚುನಾವಣೆ ಅತ್ತಿರ ಸಮಿಸುತ್ತಿದ್ದು ಅವರ ಸೇವೆಯನ್ನು ಪಡೆಯುವ ಪ್ರಯತ್ನ ಪಡಬೇಕಿದೆ ಅಂಬೇಡ್ಕರ್ ಅವರು ಸ್ವಾಭಿಮಾನದ ಸಂಕೇತವಾಗಿದ್ದಾರೆ ಅವರ ನಡೆ ನುಡಿ ನೋಡಿ ಸಮಾಜ ಬದಲಾವಣೆಯಗ ಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಂ ಎಸ್ ನಾಗೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಒಂದು ಲಕ್ಷ ರೂ ಗಳನ್ನು ದೇಣಿಗೆ ನೀಡುವುದಾಗ ಹೇಳಿದರು.

ಭೂಮಿ ಪೂಜೆ ಕಾರ್ಯ ಕ್ರಮದಲ್ಲಿ ತೋಳಲು ಪಂಚಾ ಯತಿ ಅಧ್ಯಕ್ಷ ಚಂದ್ರೆಗೌಡ, ಬಿ ಎಸ್‌ಪಿ ಪಕ್ಷದ ರಾಜ್ಯ ಕಾರ್ಯ ದರ್ಶಿ ಗಂಗಾಧರ್ ಬಹುಜನ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯ ಕ್ಷೆ ಜಿ ಟಿ ಇಂದಿರಾ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮಂಜುನಾಥ್,ಜಿಲ್ಲಾ ಪಂಚಾ ಯತಿ ಮಾಜಿ ಸದಸ್ಯ ಅಮಿತ್ ಶೆಟ್ಟಿ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಶಶಿಕುಮಾರ್, ಅಂಬೇಡ್ಕರ್ ಯುವಕ ಸಂಘದ ಗಂಗರಾಜು, ಶರತ್, ಲತಾ ವಸಂ ತಕುಮಾರ್, ರಘು, ಹೊನ್ನಯ್ಯ, ಅಣ್ಣಪ್ಪ, ಇತರರು ಇದ್ದರು.

Ashika S

Recent Posts

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

14 mins ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

23 mins ago

ಜೆಪಿ ನಡ್ಡಾ, ಬಿವೈ ವಿಜಯೇಂದ್ರಗೆ ಸಮನ್ಸ್‌ ಜಾರಿ ಮಾಡಿದ ಬೆಂಗಳೂರು ಪೊಲೀಸ್

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರಿಗೆ…

39 mins ago

ಹಳ್ಳಕ್ಕೆ ತಡೆಗೋಡೆ ನಿರ್ಮಾಣ: ತೆರವಿಗೆ ಆಗ್ರಹಿಸಿ ಮನವಿ

ಕೊಪ್ಪಾ ತಾಲೂಕಿನ ಕಾಡ್ಕೆರೆಯಲ್ಲಿ ಕುಡಿಯುವ ನೀರಿನ ಹಳ್ಳಕ್ಕೆ ಪ್ರಭಾವಿಗಳು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು…

1 hour ago

ಆನೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ: ಪುಂಡಾನೆ ಪತ್ತೆಗೆ ಟ್ರ್ಯಾಪ್ ಕ್ಯಾಮೆರಾ

ಕಾಡಾನೆ ಹಾವಳಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದು ವರ್ಷದ ಅವಧಿಯಲ್ಲಿ ಐದು ಜನ ಪ್ರಾಣ ಕಳೆದುಕೊಂಡಿದ್ದಾರೆ.

1 hour ago

ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಇಬ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಜೋಡಿ ಕೊಲೆ ಮಾಡಲಾದ ಘಟನೆ ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ನಡೆದಿದೆ.

2 hours ago