News Karnataka Kannada
Sunday, May 12 2024
ಹಾಸನ

ಬೇಲೂರು: ಪ್ರತಿನಿತ್ಯ ಕತ್ತಲಲ್ಲಿ ಜೀವನ ನಡೆಸುತ್ತಿರುವ ದಲಿತ ಕುಟುಂಬಗಳು

Belur: Dalit families living in darkness every day
Photo Credit : News Kannada

ಬೇಲೂರು: ಇಂದು ನಮ್ಮನ್ನು ಆಳುತ್ತಿರುವ ಜನನಾಯಕರು ಕೇವಲ ಆಶ್ವಾಸನೆಗೆ ಮಾತ್ರಾ ಅವರ ಕೆಲಸ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ತಾಲೂಕಿನ ಕಸಬಾ ಹೋಬ ಳಿಯ ದಬ್ಬೆಗ್ರಾಪಂ ವ್ಯಾಪ್ತಿಯಲ್ಲಿ ಇರುವ ಪಚ್ಚೆ ಮನೆ ಗ್ರಾಮ.

ಈ ಗ್ರಾಮದಲ್ಲಿ ವಾಸವಾಗಿರುವ ಚಿಕ್ಕಯ್ಯ ಹಾಗೂ ಬಸವಯ್ಯ ಎಂಬ ಎರಡು ದಲಿತ ಕುಟುಂಬವಿದ್ದು ಸು ಮಾರು ೩೦ ವರ್ಷಗಳಿಂದ ಮನೆ ಯಲ್ಲಿ ಬೆಳಕನ್ನೇ ಕಾಣದೆ ಕತ್ತಲಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇಂದು ಪ್ರಪಂಚ ವಿಜ್ಞಾನ , ಆಧು ನಿಕತೆ, ತಂತ್ರಜ್ಞಾನ ಬೆಳೆದರೂ ಸಹ ಈ ಕುಟುಂಬಕ್ಕೆ ಅವುಯಾವುದೂ ಕೂಡ ಕಣ್ಣಿಗೆ ಕಾಣದ ಬದುಕಾಗಿದೆ. ಅಲ್ಲದೆ ಇವರ ಜೀವನ ಕತ್ತಲಲ್ಲಿ ಕುರುಡಾಗಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾವು ಎಲ್ಲಿ ಭೇಟಿ ನೀಡಿದ್ದೇವೆ ಎಂಬುವುದು ಮರೆತಂತಾಗಿತ್ತು.

ಇದೇ ವೇಳೆ ನಮ್ಮೊಂದಿಗೆ ತಮ್ಮ ಸಂಕಷ್ಟವನ್ನು ತೋಡಿಕೊಂಡ ಈ ಕುಟುಂಬದ ಚಿಕ್ಕಯ್ಯ ಹಾಗೂ ಬಸವಯ್ಯ ನಮ್ಮ ಪೂರ್ವಜರು ನಮಗೆ ಅಲ್ಪ ಸ್ವಲ್ಪ ಜಮೀನು ನೀಡಿದ ಹಿನ್ನಲೆಯಲ್ಲಿ ಇಲ್ಲಿ ಮನೆಕಟ್ಟಿಕೊಂಡು ಸಂಸಾರ ಸಾಗಿಸುತ್ತಿದ್ದೇವೆ. ನಾವು ಮನೆಕಟ್ಟಿದ ಸಂದರ್ಭದಲ್ಲಿ ವಿದ್ಯುತ್ ನ ಅವಶ್ಯಕತೆ ಇಲ್ಲಾ ಎಂಬುವುದನ್ನು ಅರಿತು ಸುಮಾರು ೩೫ ವರ್ಷಗಳ ಹಿಂದೆ ಮನೆ ಕಟ್ಟಿಕೊಂಡು ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ನಮ್ಮ ಜೀವನ ಸಾಗಿಸುತ್ತಿದ್ದೇವೆ. ಆದರೆ ನಮ್ಮ ಮಕ್ಕಳು ಹುಟ್ಟಿ ಬೆಳೆದ ನಂತರ ಇಲ್ಲಿ ಓದಲು ಅವರಿಗೆ ಕಷ್ಟವಾಗಿ ಹಾಸ್ಟೆಲ್ ನಲ್ಲಿ ಬಿಟ್ಟು ಓದಿಸು ತ್ತಿದ್ದೆವು. ಅದರೆ ನಮ್ಮಂತೆ ನಮ್ಮ ಮಕ್ಕಳು ಆಗದೆ ವಿದ್ಯಾವಂತರಾದ ಹಿನ್ನಲೆಯಲ್ಲಿ ಇಲ್ಲಿಗೆ ಬರಲು ಹಿಂದೇಟಾಕುತ್ತಿದ್ದರು. ಇಲ್ಲಿ ನಮ್ಮ ಕಷ್ಟ ಹೇಗಿದೆ ಎಂದರೆ ನಮ್ಮಿಬ್ಬರಿಗೂ ಒಟ್ಟು ೫ ಜನ ಮಕ್ಕಳಿದ್ದು ಇರುವಂತಹ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಲು ಸಾಧ್ಯವಾಗದೆ ಕಣ್ಣೀರಿಡುವಂತ ಪರಿಸ್ಥಿತಿ ನಮ್ಮದಾಗಿದೆ.

ದಬ್ಬೆ ಗ್ರಾಪಂ ಇಂದ ಕೇವಲ ಎರಡು ಕಿಮೀ ದೂರದಲ್ಲಿದ್ದರೂ ಸಹ ಇಲ್ಲಿಗೆ ವಿದ್ಯುತ್ ನೀಡುತ್ತಿಲ್ಲ. ಈಗಾಗಲೇ ನಮ್ಮ ಮಕ್ಕಳು ಎಲ್ಲಾ ಜನ ಪ್ರತಿನಿಧಿಗಳಿಗೆ ಅರ್ಜಿಹಾಕಿದರೂ ಪ್ರಯೋಜನವಾಗಿಲ್ಲ ನಮ್ಮ ಬಳಿ ಜನನಾಯಕರು ಮತ ಹಾಕಿಸಿ ಕೊಳ್ಳುತ್ತಾರೆ ಆದರೆ ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದರು.

ಕುಟುಂಬದ ಮಕ್ಕಳಾದ ತೇಜಪಾಲ್ ಹಾಗೂ ಸುನೀಲ್ ಮಾತನಾಡಿ ನಾವು ವಿದ್ಯುತ್ ಬೆಳಕಿನಲ್ಲಿ ಆಟವಾಡಿ ಬೆಳದೆವರಲ್ಲ ನಾವು ಹುಟ್ಟಿದಾಗಿನಿಂದ ಕತ್ತಲಲ್ಲೇ ಬದುಕುತ್ತಿದ್ದೇವೆ ಇನ್ನು ಮಿಕ್ಸಿಯಲ್ಲಿ ಯಾವ ರೀತಿ ಮಸಾಲೆ ರುಬ್ಬುತ್ತಾರೆ ಎಂಬುವುದೇ ನಮ್ಮ ತಾಯಂದಿರಗೆ ತಿಳಿದಿಲ್ಲ. ಇನ್ನು ನಮ್ಮ ಅಕ್ಕಂದಿರಗೆ ಮದುವೆ ಮಾಡಲು ಮುಂದಾಗಿದ್ದು ಯಾರೂ ಸಹ ಮುಂದೆ ಬಂದು ಮದುವೆಗೆ ಒಪ್ಪುತ್ತಿಲ್ಲ ಕಾರಣ ನಿಮ್ಮ ಮನೆಯಲ್ಲಿ ವಿದ್ಯುತ್ ಇಲ್ಲಾ ಎಂದು ಹೇಳಿ ಹೋಗುತ್ತಿದ್ದಾರೆ. ನಾವು ಗ್ರಾಪಂ ಯಲ್ಲಿ ಮನವಿ ಸಲ್ಲಿಸಿದಾಗ ಅಲ್ಲಿಯ ಅಧ್ಯಕ್ಷರಾದ ಸಂತೋಷ್ ರವರು ನಮಗೆ ಎರಡು ಸೋಲಾರ್ ದೀಪಗಳನ್ನು ಕೊಡಿಸಿದ್ದರು. ಅವರ ಅರ್ಜಿಯಲ್ಲಿಯೂ ಸಹ ಕೆಇಬಿ ಇಲಾಖೆಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದೇವೆ.

ಇಬ್ಬರು ಶಾಸಕರಿಗೂ ಸಹ ಮನವಿ ಸಲ್ಲಿಸಿದ್ದು ನಮ್ಮ ಮನವಿ ಕೇವಲ ಮನವಿಯಾಗಿಯೇ ಉಳಿದಿದೆ ಈಗ ಮತ್ತೆ ಚುನಾವಣೆ ಬಂದಿದೆ.ಯಾವ ರೀತಿ ನಮಗೆ ಪರಿಹಾರ ಮಾಡುತ್ತಾರೆ ಎಂದು ಕಾದು ನೋಡುತ್ತಿದ್ದೇವೆ .ಕೂಲಿ ಕೆಲಸ ಮಾಡಿಕೊಂಡು  ಸಾಲಸೋಲ ಮಾಡಿ ಎರಡು ಮನೆಗಳಿಗೆ ಸೋಲಾರ್ ದೀಪ ಗಳನ್ನು ಅಳವಡಿಸಿಕೊಂಡಿ ದ್ದೇವೆ.ಆದರೆ ಮಳೆಗಾಲದಲ್ಲಿ ನಮ್ಮ ಪರಿಸ್ಥಿತಿ ಏನು ನಮ್ಮ ಮನೆ ಬಿಟ್ಟು ನೆಂಟರ ಮನೆಯಲ್ಲಿ ವಾಸಿಸುವ ನಮ್ಮ ಬದುಕಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಇದೇ ವೇಳೆ ಸ್ಥಳಕ್ಕೆ ಬಂದಿದ್ದ ದಬ್ಬೆ ಗ್ರಾಪಂ ಅಧ್ಯಕ್ಷ ಸಂತೋಷ್ ಮಾತನಾಡಿ ಎಲ್ಲೋ ಕೂತು ನಾವು ಅಷ್ಟು ಸಾಧನೆ ಮಾಡಿದ್ದೇವೆ ಇಷ್ಟು ಸಾಧನೆ ಮಾಡಿದ್ದೇವೆ ಎಂದು ಹೇಳುವುದಲ್ಲ.ಮನೆಗೊಂದು ಬೆಳಕು ಎಂದು ಹೇಳಿರುವ ಸರ್ಕಾರಕ್ಕೆ ಈ ಕುಟುಂಬ ಕಾಣುತ್ತಿಲ್ಲವೇ.ಈ ಕುಟಂಬದವರು ಜಿಲ್ಲಾಕಚೇರಿ ತಾಲೂಕು ಕಚೇರಿಗೆ ಅಲೆದು ಅಲೆದು ಸಾಕಾಗಿದೆ.

ಇವರ ಜೀವನ ಆದಿವಾಸಿಗಳಿಗಿಂತ ಕಡೆಯಾಗಿದೆ. ಕೇವಲ ಬರಿ ಆಶ್ವಾಸನೆ ಕೊಟ್ಟು ಹೋದರೆ ಸಾಲದು ಇಲ್ಲಿವರೆಗೂ ಯಾವುದೇ ಅಧಿಕಾರಿಗಳು ಇಲ್ಲಿವರೆಗೂ ಬಂದು ಇವರ ಕಷ್ಟಕ್ಕೆ ನೆರವಾಗಿಲ್ಲಾ. ನಾವು ಗ್ರಾಪಂ ಇಂದ ಎರಡು ಸೋಲಾರ್ ದೀಪ ಅಳವಡಿಸಿದ್ದೇವೆ ಆದರೆ ಇದು ಅವರ ಜೀವನಕ್ಕೆ ಸಾಲುವುದಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇವ ರಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕು ಇಲ್ಲದಿದ್ದರೆ ನಮ್ಮ ಗ್ರಾಪಂ ಬಡಕೂಲಿಕಾರ್ಮಿಕರನ್ನು ಕರೆತಂದು ಇವರಿಗೆ ನ್ಯಾಯಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು