ಹಾಸನ

ಬೇಲೂರು: ಒಕ್ಕಲಿಗ ಸಮುದಾಯದ ಶತಾಯುಷಿಗಳಿಗೆ ಸನ್ಮಾನ

ಬೇಲೂರು: ಸಿನಿಕಾನ್ ಸಿಟಿ ಎಂದೇ  ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಒಕ್ಕಲಿಗರ ಪಾತ್ರ ಹಿರಿದು ಎಂದು ಅದಿಚುಂಚನಗಿರಿ ಹಾಸನ ಶಾಖಾ ಮಠದ ಪೂಜ್ಯ ಶ್ರೀ ಶಂಭುನಾಥಸ್ವಾಮೀಜಿಗಳು ಹೇಳಿದರು.

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ, ಕೆಂಪೇಗೌಡ ಸೇವಾ ಸಮಿತಿ, ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು 500 ವರ್ಷಗಳ ಹಿಂದೆ ಒಕ್ಕಲಿಗರ ಕುಲ ತಿಲಕ ಕೆಂಪೇಗೌಡರು ಇಂದಿನ ಐಟಿಬಿಟಿ ಬೆಂಗಳೂರು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಳಿಕ ಕೆಂಗಲ್ ಹನುಮಂತಯ್ಯನವರು ಸೇರಿದಂತೆ ಇತ್ತೀಚಿನ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣರವರು, ಸದಾನಂದಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿರವರು ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ಮುನ್ನುಡಿ ಬರೆದ ಇಂತಹ ಜನಾಂಗ ಇತ್ತೀಚಿನ ದಿನದಲ್ಲಿ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ ಎಂದ ಅವರು ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕುಟುಂಬದ ಹೆಣ್ಣು ಬಲಿಯಾದ ಘಟನೆಯನ್ನು ಎಂದಿಗೂ ಮರೆಯಬಾರದು. ಅವರ ಆದರ್ಶ, ರಾಜಾಡಳಿತ ಮತ್ತು ಪ್ರಜೆಗಳ ಮೇಲಿನ ಪ್ರೀತಿ ಅಭಿಮಾನಕ್ಕೆ ಮತ್ತು ಕೃಷಿಕರಾಗಿ ಅವರು 300 ಕೆರೆಗಳನ್ನು ನಿರ್ಮಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದ ರಾಷ್ಟಕವಿ ಕುವೆಂಪುರ ಅವರ ಜಯಂತಿ ಕೂಡ ಅದ್ದೂರಿಯಾಗಿ ನಡೆಸಬೇಕಿದೆ. ಸದ್ಯ ಹೊಯ್ಸಳ ನಾಡಿನಲ್ಲಿ ಇಲ್ಲಿನ ಯುವಶಕ್ತಿ ಕೆಂಪೇಗೌಡ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸಿದ್ದು ನಮಗೆ ಅತೀವ ಸಂತಸ ಉಂಟು ಮಾಡಿದೆ ಎಂದರು.

ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಆಡಳಿತ ಕನ್ನಡ ನಾಡಿನ ಬಹುತೇಕ ಕಡೆಯಲ್ಲಿ ವಿಸ್ತರಿಸಿತ್ತು. ಸಣ್ಣ-ಪುಟ್ಟ ಸಮುದಾಯಗಳನ್ನು ಗುರುತಿಸಿ ಅವರಿಗೆ ಗುಡಿಕೈಗಾರಿಕೆ ಮತ್ತು ಬೇಸಾಯಕ್ಕೆ ಅನುಕೂಲವಾದ ನೀರಾವರಿ ಕಲ್ಪಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಅವರು ನಾಡಿಗೆ ನೀಡಿದ ಹತ್ತಾರು ಜನಪರ ಕಾರ್ಯಕ್ರಮಗಳು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದು ಅಭಿಪ್ರಾಯ ಪಟ್ಟರು.ಇದೇ ಸಂದರ್ಭದಲ್ಲಿ ಒಕ್ಕಲಿಗ ಜನಾಂಗದಲ್ಲಿ ಶತಯುಷಿಗಳಾದ ಗೋವಿನಹಳ್ಳಿ ಗಂಗಮ್ಮ ಅಣ್ಣೇಗೌಡ, ಸೋಂಪುರ ಗ್ರಾಮದ ನಂಜುಂಡೇಗೌಡ, ಅಗ್ಗಂಡಲು ನಿಂಗಮ್ಮ ಮತ್ತು ನಿಂಗೇಗೌಡ, ಇಬ್ಬೀಡು ಗ್ರಾಮದ ಪುಟ್ಟೇಗೌಡ ಮತ್ತು ಗೌರಮ್ಮ ಅವರನ್ನು ಪೂಜ್ಯ ಶ್ರೀಗಳು ಮತ್ತು ಗಣ್ಯರು ವಿಶೇಷವಾಗಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ಪಿ. ಶೈಲೇಶ್, ಕೆಂಪೇಗೌಡ ಸೇವಾ ಸಮಿತಿ ಅಧ್ಯಕ್ಷ ಎಂ.ಎ.ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಕಾಫಿ ಬೆಳೆಗಾರ ವೈ.ಎನ್.ಕೃಷ್ಣೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ರಾಜ್ಯ ಒಕ್ಕಲಿಗ ನಿಗಮ ಮಂಡಳಿ ನಿರ್ದೇಶಕಿ ಸುರಭಿರಘು, ಕಾಂಗ್ರೆಸ್ ಮುಖಂಡ ವೈ.ಟಿ.ದಾಮೋಧರ್, ಜಿ.ಕೆ.ಕುಮಾರ್,ಪುನೀತ್‌ಗೌಡ, ಯುವ ಘಟಕದ ಅಧ್ಯಕ್ಷರಾದ ಪೃಥ್ವಿ ಹಾಗೂ ಮಾಳೆಗೆರೆ ಬಸವರಾಜ್, ಪುರಸಭಾ ಸದಸ್ಯ ಆಶೋಕ್ ಹಾಗೂ ಜಗದೀಶ್, ರವಿಕುಮಾರ್, ಗಣೇಶ್, ಪೈಂಟ್ ರವಿ, ವಿ.ಎಸ್.ಬೋಜೇಗೌಡ, ಬಿ.ಸಿ.ಉಮೇಶ್, ಬಾಳೆಹಣ್ಣು ರಮೇಶ್, ಲತಾದಿಲೀಪ್, ವಕೀಲ ಪುಟ್ಟಸ್ವಾಮಿಗೌಡ, ಸಿ.ಎಸ್.ಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.

Gayathri SG

Recent Posts

ಪಾಪನಕೆರೆ ಒತ್ತುವರಿ ಆರೋಪ : ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಭೀಮನಗರದ ರೈತರು ಯುವ ಮುಖಂಡ ಕೃಷ್ಣಕುಮಾರ್ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

13 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

40 mins ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

49 mins ago

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

60 mins ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

1 hour ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

1 hour ago