Categories: ಹಾಸನ

ಬೇಲೂರಿನಲ್ಲಿ 6637 ಮತದಾರರು ಹೆಚ್ಚಳ: ತಹಶೀಲ್ದಾರ್ ಎಂ.ಮಮತಾ

ಬೇಲೂರು: ತಾಲ್ಲೂಕಿನಲ್ಲಿ ಒಟ್ಟು ೧೯೭೧೦೨ ಮತದಾರರು ಇದ್ದಾರೆ. ಈ ಪೈಕಿ ಪುರುಷರು ೯೯೨೩೬ ಮಹಿಳೆಯರು ೯೭೮೬೨ ಇತರೆ ೦೪ ಇದ್ದಾರೆ. ಮಹಿಳೆಯ ರಿಗೆ ಹೋಲಿಕೆ ಮಾಡಿದರೆ ಸಂಖ್ಯೆ ೧೩೭೪ ರಷ್ಟು ಹೆಚ್ಚಿದೆ ಎಂದು ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಎಂ.ಮಮತಾ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ೨೦೧೮ರಲ್ಲಿ ವಿಧಾನಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ೧೯೦೪೬೫ ಮತದಾರರು ಇದ್ದು, ಈಗ ೧೯೭೧೦೨ ಕ್ಕೆ ಏರಿಕೆಯಾಗಿದೆ. ಅಂದರೆ, ೬೬೩೭ ರಷ್ಟು ಮತದಾರರು ಹೆಚ್ಚಳವಾಗಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು ೩೪೬೧ ವಿಕಲಚೇತರು, ೧೮ ರಿಂದ ೧೯ ವರ್ಷದೊಳಗಿನ ೩೩೮೮, ಹಾಗೂ ೮೦ ವರ್ಷ ಹಾಗೂ ಮೇಲ್ಪಟ್ಟ ವಯೋಮಾನದ ಮತದಾರರ ಸಂಖ್ಯೆ ೪೬೯೦ ರಷ್ಟಿದೆ. ಚುನಾವಣಾ ಆಯೋಗವು ೮೦ ವರ್ಷ ಮೀರಿದ ವಯೋಮಾನದ ಹಿರಿಯ ನಾಗರಿಕರಿಗೆ ಮತದಾರರ ಪಟ್ಟಿಯ ದತ್ತಾಂಶದ ಮೂಲದಲ್ಲಿ ಗುರುತು ಮಾಡಲಾದ ವಿಕಲಚೇತನರಿಗೆ ಮತ್ತು ಕೋವಿಡ್-೧೯ ಸೋಂಕಿತ ವ್ಯಕ್ತಿಗಳಿದ್ದರೆ ಅವರುಗಳಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಮತದಾರರು ನಿರ್ಭೀತಿ, ನಿರಾಂತಕವಾಗಿ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ತಪ್ಪದೆ ಮತದಾನ ಮಾಡುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಜೊತೆಗೆ ಮತದಾರರು ಯಾವುದೇ ಅಮಿಷಕ್ಕೆ ಒಳಗಾಗದೆ, ನಿರ್ಭೀತಿಯಿಂದ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲ ಪಡಿಸಬೇಕು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಪಂಚಕ್ಕೇ ಮಾದರಿಯಾಗಿದೆ.

ಚುನಾವಣೆ ಸಂದರ್ಭ ಮಾತ್ರ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶವಿರುತ್ತದೆ. ಕಡ್ಡಾಯ ಮತದಾನ ಭಾರತದ ಪ್ರತಿ ಪ್ರಜೆಯ ಹಕ್ಕು. ಆದ್ದರಿಂದ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಹಕ್ಕಿನ ಅವಕಾಶ ಕಳೆದುಕೊಳ್ಳದೇ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಮನವಿ ಮಾಡಿ ತಾಲ್ಲೂಕಿನಲ್ಲಿ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ಪ್ರತಿಯೊಬ್ಬರೂ ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.

Sneha Gowda

Recent Posts

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆಯ ಕಾಲಿಗೆ ಗಾಯ; ನಿರ್ವಹಣೆ ನಿರ್ಲಕ್ಷ್ಯ ಆರೋಪ

ರಾಜ್ಯದ ಶ್ರೀಮಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ಕಾಲಿಗೆ ಗಾಯವಾಗಿದೆ. ಆನೆ ಮಾವುತ ಶ್ರೀನಿವಾಸ್ ಮೇಲೆ ಆನೆಯ ನಿರ್ವಹಣೆಯ ನಿರ್ಲಕ್ಷ್ಯದ…

23 mins ago

ಕಾರ್ಕಳ ಜ್ಞಾನಸುಧಾ ಶಾಲೆಯ ವಿದ್ಯಾರ್ಥಿನಿ ಸಹನಾ ರಾಜ್ಯಕ್ಕೆ ತೃತೀಯ

ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು, ಕಾರ್ಕಳ ತಾಲೂಕಿನ ಗಣಿತನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸಹನಾ…

28 mins ago

ಸಲ್ಮಾನ್‌ ಖಾನ್‌ ʼಸಿಕಂದರ್‌ʼಗೆ ರಶ್ಮಿಕಾ ಮಂದಣ್ಣ ನಾಯಕಿ

ಕನ್ನಡದ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣದ ಸಿನಿಮಾಗಳ ಬಳಿಕ ಬಿಟೌನ್ ನಲ್ಲಿ ಅದೃಷ್ಟ ಖುಲಾಯಿಸಿದೆ. ರಣ್ಬೀರ್ ಕಪೂರ್ ಅವರ 'ಅನಿಮಲ್'…

40 mins ago

ಇಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 85 ವಿಮಾನ ಹಾರಾಟ ರದ್ದು

ಇಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ 85 ಫ್ಲೈಟ್​ಗಳು ರದ್ದಾಗಿವೆ.

47 mins ago

ಅಯೋಧ್ಯಾದಲ್ಲಿ ಬಾಲರಾಮನಿಗೆ ತಲೆಬಾಗಿ ನಮಿಸಿದ ರಾಜ್ಯಪಾಲ ಆರಿಫ್‌ ಮೊಹಮ್ಮದ್

ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್  ಖಾನ್‌ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.ಕೇರಳ ರಾಜಭವನದ ಎಕ್ಸ್ ನಲ್ಲಿನ…

50 mins ago

ಚಿಕನ್ ಶವರ್ಮಾ ವಿಷ ಏಕಾಗ್ತಿದೆ ಗೊತ್ತ; ಇದನ್ನೊಮ್ಮೆ ಓದಿ

ಚಿಕನ್ ಶವರ್ಮಾ ತಿಂದ 19 ವರ್ಷದ ತರುಣನೋರ್ವ ಸಾವಿಗೀಡಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕೆಟ್ಟು ಹೋದ ಕೋಳಿ ಮಾಂಸವನ್ನು ಶವರ್ಮಾ…

1 hour ago