ಮೈಸೂರು: ಹುಣಸೂರು ಶಾಸಕ ಜಿ ಡಿ ಹರೀಶ್ ಗೌಡರ ಪತ್ನಿ ವರ್ಷಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಹಾಕಿದ್ದ ಪ್ರಕರಣದ ಆರೋಪಿ ಕಡೆಗೂ ಪತ್ತೆತಾಗಿದ್ದಾನೆ. ಜಿಟಿ ದೇವೇಗೌಡರ ಅಳಿಯ ನಿಂದಲೇ ಕೃತ್ಯ ನಡೆದಿದೆ.
ಮೈಸೂರಿನ ಜೂನಿಯರ್ ಟೋಸ್ ಪ್ರೀ ಸ್ಕೂಲ್ ನ ಮಾಲೀಕ ವಿಶ್ವೇಶ್ವರಯ್ಯ ಬಿನ್ ಮುದ್ದಯ್ಯ ಆರೋಪಿ ಎಂಬ ಸಂಗತಿ ಬೆಳಕಿಗೆ ಬಂದಿದೆ.ಜಿಟಿ ದೇವೇಗೌಡರ ಮೊದಲ ಅಳಿಯ ವಿಶ್ವೇಶ್ವರಯ್ಯ ಶಾಸಕ ಹರೀಶ್ ಗೌಡ ಭಾವನಾಗಿರುವ ವಿಶ್ವೇಶ್ವರಯ್ಯ ಆರೋಪಿ.ಕೆಟ್ಟ ಕಮೆಂಟ್ ಕುರಿತು ವರ್ಷಾಗೌಡ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. FIR ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿದ ವೇಳೆ ವಿಶ್ವೇಶ್ವರಯ್ಯ ಆರೋಪಿ ಎಂಬುದು ಬೆಳಕಿಗೆ ಬಂದಿದೆ.
ಯಾರು ಕೂಡ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್ ಹಾಕಬೇಡಿ ಸ್ಪರ್ಧಾತ್ಮಕವಾದ ರೀತಿಯಲ್ಲಿ, ಆರೋಗ್ಯಕರವಾಗಿ ಕಮೆಂಟ್ ಗಳನ್ನು ಹಾಕಿದರೆ ತಪ್ಪಲ್ಲ ಯಾರೋ ಒಬ್ಬರನ್ನು ತೇಜೋವಧೆ ಮಾಡಲು, ನಿಂದಿಸಲು ಸಾಮಾಜಿಕ ಜಾಲತಾಣದ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಕುಟುಂಬಸ್ಥರ ಮೇಲೆ ಬೇಸರ ವ್ಯಕ್ತಪಡಿಸಿದ ಶಾಸಕ ಹರೀಶ್ ಗೌಡ, ಕೆಲ ವರ್ಷಗಳಿಂದ ತಂದೆ ಜಿಟಿ ದೇವೇಗೌಡರಿಂದ ದೂರವಿರುದ ಹರೀಶ್ ಗೌಡ ಕುಟುಂಬದ ನಡುವಿನ ಬಿರುಕಿನಿಂದ ಕೆಟ್ಟ ಕಮೆಂಟ್ ಮಾಡಿರುವ ಶಂಕೆ ಸದ್ಯ ಆರೋಪಿ ವಿಶ್ವೇಶ್ವರಯ್ಯ ನಾಪತ್ತೆಯಾಗಿದ್ದು ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

