ಮೈಸೂರು : ಹುಣಸೂರು ತಾಲ್ಲೂಕಿನ ಮಾಜಿ ಗುರುಪುರದಲ್ಲಿ ಅದ್ಧೂರಿ ಹನುಮ ಜಯಂತೋತ್ಸವ ನಡೆಯಿತು. ಹನುಮ ಜಯಂತಿಯ ಮೆರವಣಿಗೆಗೆ ಶಾಸಕ ಹರೀಶ್‌ಗೌಡ ಚಾಲನೆ ಕೊಟ್ಟರು.

ಗ್ರಾಮದ ಬೀದಿಗಳಲ್ಲಿ ಹನುಮ ಮೆರವಣಿಗೆ ನಡೆಸಲಾಯಿತು. ಜೈ ಶ್ರೀರಾಮ್ ಜೈ ಶ್ರೀರಾಮ್ ಎಂದು ಹರ್ಷೋದ್ಗಾರ ಮೊಳಗಿದರು. ಕೇಸರಿ ಶಾಲು ಹಾಕಿ ಹನುಮ ಭಕ್ತರು ಕುಣಿದು ಕುಪ್ಪಳಿಸಿದರು. ಗ್ರಾಮದ ಶ್ರೀರಾಮ ಭಕ್ತರ ಜೊತೆ ಹರೀಶ್‌ಗೌಡ ಹೆಜ್ಜೆ ಹಾಕಿದರು. ಹನುಮ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಯುವಕರು ಪ್ರಸಾದ ವಿತರಣೆ ಮಾಡಿದರು.