ಗುಂಡ್ಲುಪೇಟೆ: ಮಧ್ಯರಾತ್ರಿ ಗುಂಡ್ಲುಪೇಟೆಯಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ಮನೆಗೆ ನೀರು ನುಗ್ಗಿದ್ದು, ಮರ, ಕಂಬಗಳು ಧರೆಗುರುಳಿದೆ. ಚಾಮರಾಜನಗರ ಜಿಲ್ಲಾದ್ಯಂತ ಬೆಳಗಿನ ಜಾವದ ತನಕ ಜೋರು ಮಳೆಯಾಗಿದೆ.

ಜೋರು ಮಳೆಗೆ ಹಲವೆಡೆ ಅವಾಂತರ ಸೃಷ್ಟಿಸಿದೆ. ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಮನೆಗೆ ಮಳೆ ನೀರು ನುಗ್ಗಿದೆ. ದಿನಸಿ ಪದಾರ್ಥಗಳು ನೀರಿನಲ್ಲಿ ತೋಯ್ದು ನಾಶವಾಗಿದೆ. ಕೊಳ್ಳೇಗಾಲ ಪಟ್ಟಣದಲ್ಲೂ ತಡರಾತ್ರಿ ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದೆ.
ಬೃಹತ್ ಮರ, 6 ವಿದ್ಯುತ್ ಕಂಬ ಮುರಿದಿದೆ. ಒಂದೆಡೆ ವರುಣಾಗಮನಕ್ಕೆ ಸಂತಸ- ಮತ್ತೊಂದೆಡೆ ಮಳೆ ಅವಾಂತರಕ್ಕೆ ಪೀಕಲಾಟ ಉಂಟಾಗಿದೆ.

