ಮೈಸೂರು : ಹುಣಸೂರಿನಲ್ಲಿ ಅದ್ಧೂರಿ ಹನುಮ ಜಯಂತಿ ನಡೆದಿದ್ದು, ಪೊಲೀಸ್ ಸರ್ಪಗಾವಲಿನಲ್ಲಿ ಹನುಮ ಜಯಂತಿ ಮಾಡಲಾಯಿತು. ಸಂಸದ ಯದುವೀರ್, ಮಾಜಿ ಶಾಸಕ ಹೆಚ್.ಪಿ ಮಂಜುನಾಥ್, ಶಾಸಕ ಹರೀಶ್‌ಗೌಡ, ಗಾವಡಗೆರೆ ಶ್ರೀಗಳಿಂದ ಶೋಭಾಯಾತ್ರೆಗೆ ಚಾಲನೆ ನೀಡಿದರು. ರಂಗನಾಥ ಬಡಾವಣೆಯಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು.

ಶ್ರೀ ಆಂಜನೇಯಸ್ವಾಮಿ, ಭಜರಂಗಿ, ರಾಮ- ಲಕ್ಷ್ಮಣ- ಸೀತೆ, ದತ್ತಾತ್ರೇಯ ಮೂರ್ತಿಗಳ ಮೆರವಣಿಗೆ ನಡೆಯಿತು. ಟ್ರ್ಯಾಕ್ಟರ್‌ಗಳಲ್ಲಿ ಉತ್ಸವ ಮೂರ್ತಿಗಳನ್ನು ಇಟ್ಟು ಶೋಭ ಯಾತ್ರೆ‌ ನಡೆಸಲಾಯಿತು. ಕೇಸರಿ ಟೀ ಶರ್ಟ್, ಶಾಲು ತೊಟ್ಟು ಗುಂಪು ಗುಂಪಾಗಿ ಮೆರವಣಿಗೆಯಲ್ಲಿ ಭಕ್ತರು ಸಾಗುತ್ತಿದ್ದರು.

ಭಕ್ತರಿಗೆ ರಸ್ತೆಯುದ್ದಕ್ಕೂ ಉಪಹಾರದ ವ್ಯವಸ್ಥೆ ಮಾಡಲಾಯಿತು. ರೈಟ್- ಲೆಫ್ಟ್ ಬ್ಯಾಡ್ಜ್ ತೊಟ್ಟು ಪೊಲೀಸರು ಭದ್ರತೆಯಲ್ಲಿದ್ದರು. ಶಾಂತಿಯುತವಾಗಿ ಮೆರವಣಿಗೆ ಸಾಗಿತು.