ತಿ. ನರಸೀಪುರ: ತಾಂತ್ರಿಕ ದೋಷದಿಂದ ಸರ್ಕಾರಿ ಬಸ್ ಹೊತ್ತಿ ಉರಿದ ಘಟನೆ ತಿ. ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ನಡೆದಿದೆ. ಮೈಸೂರಿನಿಂದ ಬನ್ನೂರಿಗೆ ಬಸ್ ಬರುತ್ತಿತ್ತು. ಮೈಸೂರು ನಗರ ಸಾರಿಗೆ ವಿಭಾಗದ ಬಸ್ ಇದಾಗಿದ್ದು, ಅದೃಷ್ಟವಶಾತ್ ಪ್ರಾಣಪಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬಸ್ ಹೊತ್ತಿ ಉರಿಯುತ್ತಿದ್ದಂತೆ ಬಸ್ ನಿಂದ ಪ್ರಯಾಣಿಕರು ಕೆಳಗೆ ಇಳಿದಿದ್ದಾರೆ. ಉರಿಯುತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ದಳ ನಂದಿಸಿದೆ. ಸ್ಥಳಕ್ಕೆ ಬನ್ನೂರು ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

