ಟಿ. ನರಸೀಪುರ, ಬನ್ನೂರು: ಟಿ. ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ ನಡೆದ ಘಟನೆಯಲ್ಲಿ, ಶಾಲೆ ಮುಗಿಸಿಕೊಂಡು ಮನೆಗೆ ಹೊರಟಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ತರಕಾರಿ ತುಂಬಿದ ಗೂಡ್ಸ್ ವಾಹನ ಹರಿಗಿದ್ದು. ಅದೃಷ್ಟವಶಾತ್, ಯಾವುದೇ ದೊಡ್ಡ ಗಾಯಗಳಿಲ್ಲದೆ, ಇಬ್ಬರೂ ಮಕ್ಕಳು ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾರೆ.
ಘಟನೆಯು ಬುಧವಾರ ಸಂಜೆ ಸುಮಾರು 4 ಗಂಟೆಗೆ ನಡೆದಿದೆ. ಬನ್ನೂರಿನ ಲಯನ್ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ರಸ್ತೆಯ ಪಕ್ಕದಲ್ಲಿ ನಿಂತಿದ್ದರು. ಈ ವೇಳೆ, ನಿಯಂತ್ರಣ ಕಳೆದುಕೊಂಡ ತರಕಾರಿ ತುಂಬಿದ ಗೂಡ್ಸ್ ವಾಹನವೊಂದು ಅವರ ಮೇಲೆ ಹರಿದಿದೆ. ಈ ಘಟನೆಯ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವೈರಲ್ ಆಗಿದ್ದು ಎದೆ ಜೆಲ್ ಎನಿಸುವಂತಿದೆ.
ವಾಹನ ಅಪ್ಪಳಿಸಿದ ತಕ್ಷಣ ಮಕ್ಕಳು ಕೆಳಗೆ ಬಿದ್ದರೂ, ಅವರಿಗೆ ಪ್ರಾಣಾಪಾಯ ಉಂಟಾಗಿಲ್ಲ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದರೂ, ಗಂಭೀರ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯು ಸ್ಥಳೀಯರಲ್ಲಿ ಮತ್ತು ಪೋಷಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

