ಮೈಸೂರು: ರಾಜ್ಯ ಸರ್ಕಾರದಲ್ಲಿ ಒಂದೆಡೆ ನವೆಂಬರ್ ಕ್ರಾಂತಿ ಇನ್ನೊಂದೆಡೆ ಸಂಪುಟ ಪುನರ್’ರಚನೆ ಕಸರತ್ತು ಶುರುವಾಗಿದೆ.ಸಂಪುಟ ಸೇರಬಯಸುವ ಆಕಾಂಕ್ಷಿಗಳು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಮೈಸೂರಿನ ಎನ್.ಆರ್.ಕ್ಷೇತ್ರದ ಶಾಸಕ  ತನ್ವಿರ್ ಸೇಠ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಪೋಸ್ಟ್ ಕಾರ್ಡ್ ಸಹಿ ಸಂಗ್ರಹ ಶುರುವಾಗಿದೆ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೆ ಸಂಗ್ರಹಿಸಿದ ಪೋಸ್ಟ್ ಕಾರ್ಡ್ ಕಳಿಸುವ ಅಭಿಯಾನ ಆರಂಭವಾಗಿದೆ.

ಮೈಸೂರಿನ ಗಾಂಧಿ ಚೌಕದಲ್ಲಿ ಸಹಿ ಸಂಗ್ರಹಿಸಿದ್ದಾರೆ. ಆರು ಬಾರಿ ಚುನಾವಣೆಯಲ್ಲಿ ಗೆದ್ದು ಸೋಲಿಲ್ಲದ ಸರದಾರ ಆಗಿದ್ದಾರೆ.ತನ್ವಿರ್ ಸೇಠ್ ಅವರಿಗೆ ಸಚಿವ ಸ್ಥಾನವನ್ನು ನಿಭಾಯಿಸುವ ಶಕ್ತಿ ಇದೆ.ಆದ್ದರಿಂದ ಇವರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಆಗ್ರಹಿಸಿದರು.