ನಂಜನಗೂಡು: ಕುಡಿಯುವ ನೀರಿಗಾಗಿ ಮಾಡರಹಳ್ಳಿ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಕಛೇರಿಗೆ ಬಂದ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. 8 ತಿಂಗಳಿಂದ ಅಲೆದು ಅಲೆದು ಸಾಕಾಗಿ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಜೆಎಂ ಯೋಜನೆಗಾಗಿ ಪೈಪ್ ಅಳವಡಿಸುವ ಹಿನ್ನೆಲೆಯಲ್ಲಿ ನೀರು ತುಂಬುತ್ತಿಲ್ಲ. ಟ್ಯಾಂಕರ್ ಗಳಿಗೂ ನೀರು ಪೂರೈಕೆ ಆಗುತ್ತಿಲ್ಲ. ಹನಿಹನಿ ನೀರಿಗೂ ಕೆರೆಕಟ್ಟೆಗಳನ್ನ ಅವಲಂಬಿಸಬೇಕಿದೆ. ಜನ ಸಾಯುವ ಪರಿಸ್ಥಿತಿ ತಲುಪಿದ್ದಾರೆ.

ನಾವೇ ಹಣ ಕೊಡುತ್ತೇವೆ ಬೋರ್ ಹಾಕಿಸಿ ಕೊಡಿ ಎಂದು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಇದ್ಯಾವ ಸರ್ಕಾರಕ್ಕೆ ವೋಟ್ ಹಾಕಿದ್ದೀವೋ ಗೊತ್ತಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಜೀವ ಜಲಕ್ಕಾಗಿ ಗ್ರಾಮಸ್ಥರು ಅಲೆದಾಡುತ್ತಿದ್ದು, ಹೆಡತಲೆ ಗ್ರಾಮ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ತಾಲ್ಲೂಕು ಆಡಳಿತ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.