ನಂಜನಗೂಡು: ನಂಜನಗೂಡು ನಗರಸಭೆ ಕಛೇರಿಯಲ್ಲಿ ನಗರಸಭಾ ಅಧ್ಯಕ್ಷ ಶ್ರೀಕಂಠ ರವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯನ್ನು ನಡೆಸಲಾಯಿತು. ಬಜೆಟ್ ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಸುಮಾರು 46 ವಿಷಯಗಳನ್ನು ಸದಸ್ಯರುಗಳು ಸುದೀರ್ಘವಾಗಿ ಚರ್ಚೆ ನಡೆಸಿದರು.

ಬಳಿಕ ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ಮಾತನಾಡಿ, ನಗರದಲ್ಲಿರುವ 31 ವಾರ್ಡ್ ಗಳ ಅಭಿವೃದ್ದಿ ಮತ್ತು ಸಮಸ್ಯೆಗಳ ಬಗ್ಗೆ ಸದಸ್ಯರುಗಳು ತೀವ್ರವಾಗಿ ಚರ್ಚೆ ನಡೆಸಿ ಅಭಿವೃದ್ದಿ ಗಳಿಗೆ ಸಂಬಂಧ ಪಟ್ಟಂತೆ ಅನುಮೋದನೆಗಳನ್ನು ಪಡೆದುಕೊಂಡರು.

ತಕ್ಷಣದಲ್ಲೆ ವಾರ್ಡ್ ಗಳ ಮೂಲಭೂತ ಸೌಕರ್ಯಗಳಿಗಾಗಿ 10 ಲಕ್ಷ ರೂಗಳನ್ನು ಪ್ರತಿವಾರ್ಡ್ ಗಳಿಗೂ ನೀಡಲು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು. ನಂಜನಗೂಡು ನಗರವು ಅಭಿವೃದ್ದಿ ಪಥದಲ್ಲಿ ಸಾಗುವ ದೃಷ್ಟಿಯಿಂದ ನಗರಸಭಾ ನಿಧಿಯಿಂದ 7.5ಕೋಟಿ, 15ನೇ ಹಣಕಾಸು ನಿಧಿಯಿಂದ 3 ಕೋಟಿ,

ಎಸ್‌ಎಫ್‌ಸಿ ನಿಧಿಯಿಂದ 50 ಲಕ್ಷ ಹಾಗೂ ಇತರೆ ಉಳಿಕೆ ಅನುದಾನದಿಂದ 1 ಕೋಟಿಯಂತೆ ಒಟ್ಟಾರೆ ಅಂದಾಜು 12 ರಿಂದ 13 ಕೋಟಿ ರೂ.ಗಳಿಗೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ನಗರಸಭಾ ಸದಸ್ಯರುಗಳು ಅನುಮೋದನೆ ನೀಡಿದರು. ಇದು ಇಡೀ ನಗರದ ಜನತೆಗೆ ಸಂತೋಷದ ವಿಚಾರವಾಗಿದ್ದು, ಇದೊಂದು ಅಭಿವೃದ್ದಿಯ ಪರ್ವವಾಗಿದೆ ಎಂದರು.

ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರ ಮಾರ್ಗದರ್ಶನದಂತೆ ನಗರದ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಕೈಗೊಂಡಿರುವುದಾಗಿ ತಿಳಿಸಿದ ಅವರು ಬೆಂಗಳೂರು ಮಾದರಿಯಲ್ಲಿ ಸ್ಟೀಮ್‌ಪಾರ್ಕ್ ಮತ್ತು ಕ್ಯುಆರ್ ಕೋಡ್ ಮಾಡುವ ಕೆಲಸಗಳಿಗೆ ಅನುಮೋದನೆ ಸಿಕ್ಕಿದ್ದು, ಈ ಸಂದರ್ಭದಲ್ಲಿ ಶಾಸಕರಿಗೆ ಅಭಿನಂಧಿಸಿದರು.

ನಂಜನಗೂಡು ನಗರದಲ್ಲಿ ಆರ್.ಪಿ. ರಸ್ತೆಯ ಭಾಗದಲ್ಲಿ ಪ್ರಾರಂಭವಾಗಲಿರುವ ಮೇಲ್ಸೆಸೇತುವೆ ಗೆ ಸಂಬಂಧಪಟ್ಟಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮೇಲ್ಸೇತುವೆ ವಿಚಾರವು ಬಹಳ ಸೂಕ್ಷ ವಿಚಾರ ವಾಗಿದ್ದು, ಇದಕ್ಕೆ ವಿಸ್ತೃತವಾದ ಚರ್ಚೆ ನಡೆಸಿ ಇನ್ನು ಹೆಚ್ಚಿನ ಮಾಹಿತಿ ಪಡೆದು, ರೈಲ್ವೆ ಇಲಾಖೆಯವರೊಂದಿಗೆ ಸಮನ್ವಯ ಸಾಧಿಸಿಕೊಂಡು ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಆರ್.ಪಿ ಮತ್ತು ಎಂ.ಜಿ.ಎಸ್ ರಸ್ತೆಗಳಲ್ಲಿ ಫುಟ್‌ಪಾತ್ ತೆರವು ಕಾರ್ಯವನ್ನು ಕೈಗೊಂಡು ಪಾದಚಾರಿಗಳಿಗೆ ಮುಕ್ತ ಸುಗಮ ಸಂಚಾರ ಕೈಗೊಳ್ಳಲು ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ನಗರಸಭೆಯ ಎಲ್ಲಾ 31 ವಾರ್ಡ್ನ ಸದಸ್ಯರುಗಳು ಹಾಗೂ ವ್ಯವಸ್ಥಾಪಕ ಹೇಮಕುಮಾರ್, ಪರಿಸರ ಅಭಿಯಂತರರಾದ ಮೈತ್ರಾದೇವಿ, ರೆವಿನ್ಯೂ ಅಧಿಕಾರಿ ಜೆಸ್‌ಪಾಲ್‌ಸಿಂಗ್, ಎಇಇ ಶಮಂತ್, ಪ್ರೀತಂ, ಮಹೇಶ್, ನಂದಿನಿ, ಪಾಟಲಿಂಗಪ್ಪ, ಆದರ್ಶ್, ರೇಖಾ, ಶಫಿ, ರಮೇಶ್, ಮಂಜು, ಮಹೇಶ್, ರಾಜೇಶ್, ಕುಮಾರ ಸೇರಿದಂತೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.