ಮೈಸೂರು : ಗ್ಯಾಸ್ ಸೋರಿಕೆ ಅವಘಡದಿಂದ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಐದು ದಿನಗಳ ಹಿಂದೆ ಮೈಸೂರು ಜಿಲ್ಲೆ ಹುಣಸೂರು ವೀರಾಂಜನೇಯ ಬಡಾವಣೆಯಲ್ಲಿ ಅವಘಡ ಸಂಭವಿಸಿತ್ತು.
ಶೋಭಾ (42) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಕ್ಟೋಬರ್ 23 ರಂದು ಅಡುಗೆ ಮಾಡುತ್ತಿದ್ದ ವೇಳೆ ಗ್ಯಾಸ್ ಸೋರಿಕೆಯಾಗಿದೆ. ಮನೆ ತುಂಬಾ ಬೆಂಕಿ ಆವರಿಸಿಕೊಂಡಿತ್ತು.
ಶೋಭಾ ರಕ್ಷಣೆಗೆ ಪತಿ ಕುಮಾರ್ ಹೋಗಿದ್ದರು. ಕುಮಾರ್ಗೂ ಘಟನೆಯಲ್ಲಿ ಸುಟ್ಟ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶೋಭ ಸಾವನ್ನಪ್ಪಿದ್ದಾರೆ. ಪತಿ ಕುಮಾರ್ಗೆ ಚಿಕಿತ್ಸೆ ಮುಂದುವರಿದಿದೆ. ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

