ಮೈಸೂರು: ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಕಳಕೋಳ ಜಗದೀಶ್ ರವರ ಹೆತ್ತ ಪೋಷಕರ ಸ್ಮರಣಾರ್ಥ ಶವಸಂಸ್ಕಾರ ವಾಹನ ಕೊಡುಗೆಯಾಗಿ ನೀಡಿದ್ದಾರೆ.ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿದುಶೇಖರ ಭಾರತೀ ಶ್ರೀಗಳು ಲೋಕಾರ್ಪಣೆ ಮಾಡಿದ್ದಾರೆ.ಕಡಕೋಳ ಜಗದೀಶ್ ರವರು ತಂದೆ ದಿ. ಕೆ ಎಸ್ ರಾಜು ಹಾಗೂತಾಯಿ ದಿ. ಸರಸ್ವತಮ್ಮಅವರ ಸ್ಮರಣಾರ್ಥ ಅಂಗವಾಗಿ ಬಡವರ ಅನುಕೂಲಕ್ಕಾಗಿ ಶವಸಂಸ್ಕಾರ ವಾಹನವನ್ನು ಕೊಡುಗೆ ನೀಡಿದ್ದಾರೆ.
ಅಗ್ರಹಾರದಲ್ಲಿರುವ ಶಂಕರ ಮಠದಲ್ಲಿ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿದುಶೇಖರ ಭಾರತೀ ಶ್ರೀಗಳು ಅಮೃತ ಅಸ್ತದಿಂದ ಲೋಕಾರ್ಪಣೆಗೊಳಿಸಿ ನಂತರ ಆಶೀರ್ವದಿಸಿದ್ದಾರೆ. ಈ ವಾಹನ ಬಡವರಿಗೆ ಉಪಯೋಗಕರವಾಗಲಿ, ದೇವರು ಮೆಚ್ಚುವ ಕೆಲಸ ಮಾಡುತ್ತಿರುವ ಕಡಕೋಳ ಜಗದೀಶ್ ಅವರ ಪರಿವಾರಕ್ಕೂ ಶುಭವಾಗಲಿಎಂದು ಆಶೀರ್ವಾದಿಸಿದ್ದಾರೆ. ಅವಶ್ಯಕತೆ ಇದ್ದವರು ಮಾಹಿತಿಗಾಗಿ 9739674555 ಸಂಪರ್ಕಿಸಬಹುದು.
ಇದೇ ಸಂದರ್ಭದಲ್ಲಿ ಶಾಸಕರಾದ ಟಿ ಎಸ್ ಶ್ರೀವತ್ಸ,ಧಾರ್ಮಿಕ ಮುಖಂಡರಾದ ವೇದಬ್ರಹ್ಮ ಭಾನುಪ್ರಕಾಶ್ ಶರ್ಮ, ಕೆಪಿಸಿಸಿ ಸದಸ್ಯರಾದ ಎಚ್ ವಿ ರಾಜೀವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಹರೀಶ್ ಭಾರದ್ವಾಜ್, ಟಿ ಎಸ್ ಅರುಣ್, ರಂಗನಾಥ್, ಅಮಿತ್ ಹಾಗೂ ಇನ್ನಿತರರು ಹಾಜರಿದ್ದರು.

