ಮೈಸೂರು : ರಾಜ್ಯ ಕಾಂಗ್ರೆಸ್ ನಲ್ಲಿ ಡಿಸಿಎಂ ಸ್ಥಾನಕ್ಕೆ ಫುಲ್ ಡಿಮ್ಯಾಂಡ್ ಇದ್ದು, ಯತೀಂದ್ರ ಸಿದ್ದರಾಮಯ್ಯ ಅವರನ್ನು ಡಿಸಿಎಂ ಮಾಡುವಂತೆ ಹೋರಾಟ ನಡೆಯುತ್ತಿದೆ.

ನಗರದ ರಾಮಸ್ವಾಮಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ಯೂಥ್ ಕಾಂಗ್ರೆಸ್ ವತಿಯಿಂದ ಡಿಸಿಎಂ ಮಾಡುವಂತೆ ಒತ್ತಾಯ ಮಾಡಲಾಯಿತು. ಯತೀಂದ್ರ ಅವರನ್ನು ಡಿಸಿಎಂ ಮಾಡಲಿಲ್ಲ ಅಂದ್ರೆ ಅದು ಕಾಂಗ್ರೆಸ್ ಪಕ್ಷಕ್ಕೆ ನಷ್ಟ. ಸಿದ್ದರಾಮಯ್ಯನವರ ನಂತರ ಮೈಸೂರಿನಲ್ಲಿ ಯತೀಂದ್ರ ಅವರೇ ಪ್ರಬಲ ನಾಯಕರು.

ಡಿಸಿಎಂ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಮೈಸೂರಿನ 11 ಕ್ಷೇತ್ರಗಳನ್ನು ಕೂಡ ಗೆಲ್ಲುತ್ತೇವೆ. ಯತೀಂದ್ರ ಕೇವಲ ಕುರುಬ ಸಮಾಜದ ನಾಯಕ ಅಲ್ಲ. ಎಲ್ಲ ವರ್ಗಗಳ ನಾಯಕರು
ಹಾಗಾಗಿ ಡಿಸಿಎಂ ಮಾಡಿ ಎಂದು ಯೂಥ್ ಕಾಂಗ್ರೆಸ್ ಒತ್ತಾಯ ಮಾಡಿದರು.