ತಿ. ನರಸೀಪುರ: ಮಾಜಿ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯರ ಬಗ್ಗೆ ಲಘುವಾಗಿ ಹೇಳಿಕೆ ಖಂಡಿಸಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ರಮೇಶರಿಂದ ಸುದ್ದಿಗೋಷ್ಠಿ ನಡೆಸಿದರು.

ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಯಿತು. ಸುದ್ದಿಗೋಷ್ಠಿ ಕುರಿತು ಮಾತನಾಡಿದವರು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯರ ಬಗ್ಗೆ ಲಘುವಾಗಿ ಹೇಳಿಕೆ ನೀಡಿರುವ ಪ್ರತಾಪ್ ಸಿಂಹರ ಹೇಳಿಕೆ ತುಂಬಾ ಖಂಡನೀಯ. ಯತಿಂದ್ರ ಸಿದ್ದರಾಮಯ್ಯ ರ ಬಗ್ಗೆ ಲಘುವಾಗಿ ಮಾತನಾಡುವ ನೈತಿಕತೆ ನಿಮಗಿಲ್ಲ. ಪ್ರತಾಪ್ ಸಿಂಹರವರು ಕೂಡಲೇ ಕ್ಷಮೆಯಾಚಿಸಬೇಕು ಆಗ್ರಹಿಸಿದರು.

ತಲೆ ಬುಡ ಇಲ್ಲದೆ ಮಾತುಗಳಾಡುವುದನ್ನು ನಿಲ್ಲಿಸಬೇಕು ಮಾಜಿ ಸದಾ ಪ್ರತಾಪ್ ಸಿಂಹ ಬುದ್ಧಿ ಬ್ರಮಣೆಯಾಗಿರುವಂತೆ ವರ್ತಿಸುತ್ತಾರೆ ಯಾರ ಬಗ್ಗೆ ಮಾತನಾಡುತ್ತೇನೆ ಎಂಬ ಅರಿವಿರಬೇಕು ಎಂದರು.

ಈ ಸಂದರ್ಭ ನಾಮ ನಿರ್ದೇಶನ ಪುರಸಭಾ ಸದಸ್ಯರಾದ ಚೇತನ್, ಗಣೇಶ್, ಗುರುಸ್ವಾಮಿ, ಕೆಡಿಪಿ ಸದಸ್ಯ ನಿಂಗರಾಜು, ವರ್ಣ ಕಾರ್ಮಿಕ ವಿಭಾಗದ ಅಧ್ಯಕ್ಷ ಬಣ್ಣ ಬಸವರಾಜು, ಮಿಥುನ್,ತ್ರಿವೇಣಿ ನಗರ ಮಂಜು, ನಟ ಸೇರಿದಂತೆ ಇತರರು ಇದ್ದರು.