ಮೈಸೂರು: ಶಾಸಕ ಪ್ರದೀಪ್ ಈಶ್ವರ್‌ಗೆ ಅವಾಚ್ಯ ಪದಗಳಲ್ಲೇ  ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಇನ್ನೊಂದು ಬಾರಿ ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಮಗನೆ,  ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ ಬೆಳಕಲ್ಲಿ ಹೊಳೆಯಲ್ಲ. ಮುಳ್ಳಾಂದಿ ಮುಖದ ಕರ್ನಾಟಕದ ಏಕೈಕ ಕಾಮಿಡಿ ಪೀಸ್ ಪ್ರದೀಪ್ ಈಶ್ವರ್, ಮುಳ್ಳು ಹಂದಿ ಮುಖದ ಕಾಮಿಡಿ ಪೀಸ್ ಹುಟ್ಟೋದು ನಿಮ್ಮ ಅಪ್ಪನಿಗೆ ಮಾತ್ರ.

ನಮ್ಮ ತಂದೆ ವಯಸ್ಸಿನಲ್ಲಿ ಇದ್ದಾಗ ಚಿಕ್ಕಬಳ್ಳಾಪುರ ಕಡೆ ಬಂದಿದ್ದರೆ ಸುಂದರವಾಗಿಯೇ ಹುಟ್ಟುತ್ತಿದ್ದೆ ನೀನು. ಎಚ್ಚರಿಕೆ ಇರಬೇಕು ಮಗನೇ ನನ್ನ ಬಗ್ಗೆ ಮಾತಾಡುವಾಗ. ಪ್ರದೀಪ್ ಈಶ್ವರನಿಗೆ ಅವನ ಭಾಷೆಯಲ್ಲಿ ಉತ್ತರ ಹೇಳುತ್ತಿರುವ ಕರ್ನಾಟಕದ ಜನರ ಕ್ಷಮೆ ಕೇಳುತ್ತೇನೆ. ಚಿಕ್ಕಬಳ್ಳಾಪುರ ಗೌಡರ ಸಣ್ಣ ಮುನಿಸಿನ ಕಾರಣ ಪ್ರದೀಪ್ ಈಶ್ವರ ಗೆದ್ದ ಅಷ್ಟೆ.

ನನ್ನ ತಾಯಿ ಬಗ್ಗೆ ಪ್ರದೀಪ್ ಈಶ್ವರ ಅವಹೇಳನವಾಗಿ ಮಾತಾಡಿದ್ದಾನೆ. ಎಚ್ಚರಿಕೆ ಇರಬೇಕು ಮಗನೇ ನನ್ನ ಬಗ್ಗೆ ಮಾತಾಡುವಾಗ. ಮೈಸೂರಿನಲ್ಲಿ ಪ್ರದೀಪ್ ಈಶ್ವರ್ ವಿರುದ್ದ ಮತ್ತೆ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.