ಮೈಸೂರು: ಭಾರತ ಹಿಂದೂ ರಾಷ್ಟ್ರ ಆಗಬಾರದು ಎಂಬ ಯತೀಂದ್ರ ಹೇಳಿಕೆ ಮಾಜಿ ಡಿಸಿಎಂ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಮುಸ್ಲಿಂ ರಾಷ್ಟ್ರಗಳು ಇವೆ. ಕ್ರಿಶ್ಚಿಯನ್ ರಾಷ್ಟ್ರಗಳು ಇವೆ. ಹಿಂದೂ ಗಳಿಗೆ ಇರುವ ಏಕೈಕ ರಾಷ್ಟ್ರ ಭಾರತ. ಯತೀಂದ್ರ ಹೇಳಿದ ತಕ್ಷಣ ಹಿಂದೂ ರಾಷ್ಟ್ರ ತಪ್ಪಿಸಲು ಸಾಧ್ಯವಿಲ್ಲ ಎಂದರು.
ಸೂರ್ಯ ಚಂದ್ರ ಇರೋವರೆಗೂ ಇದು ಹಿಂದೂ ರಾಷ್ಟ್ರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಹಿಂದೂ ರಾಷ್ಟ್ರ ಆಗುತ್ತೆ. ಕೋಟ್ಯಂತರ ಜನ ಹಿಂದೂ ರಾಷ್ಟ್ರಕ್ಕಾಗಿ ಕಾಯ್ತಿದ್ದಾರೆ.
ಯತೀಂದ್ರ ಯಾಕೆ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ.
ಮರಳಿ ಬಿಜೆಪಿ ಸೇರುವ ವಿಚಾರವಾಗಿ ಮಾತನಾಡಿ, ಮೈಸೂರಿನಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆ ನೀಡಿದರು. ಈ ಬಗ್ಗೆ ಪಕ್ಷದ ಹಿರಿಯರು, ಅಧಿಕಾರದಲ್ಲಿ ಇರುವವರು ಮಾತುಕತೆ ನಡೆಸುತ್ತಿದ್ದಾರೆ.
ನಾನು ಅವರಿಗೆ ಹಲವು ಬೇಡಿಕೆ ಇಟ್ಟಿದ್ದೇನೆ. ರಾಜ್ಯದಲ್ಲಿ ಜಿಲ್ಲೆ ಜಿಲ್ಲೆಗಳಲ್ಲಿ ಪಕ್ಷದ ಕಟ್ಟಿರುವವರಿಗೆ ಈಗ ಪಕ್ಷ ಇರುವ ಸ್ಥಿತಿ ನೋಡಿ ಬೇಸರ ಆಗಿದೆ. ಬೇಡಿಕೆ ಎಂದರೆ ಷರತ್ತು ಅಲ್ಲ. ನಾನು ಬಿಜೆಪಿ ಬಿಟ್ಟು ಬೇರೆಲ್ಲೂ ಹೋಗಲ್ಲ ಎಂದರು.
ನನ್ನ ರಕ್ತವೆ ಬಿಜೆಪಿ ಆಗಿದೆ.ಪಾರ್ಟಿಗೆ ಸೇರಲು ಯಾವುದೇ ಷರತ್ತು ಹಾಕಿಲ್ಲ. ಪಕ್ಷದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಿದೆ. ಇದು ಪಕ್ಷದ ಸಂಘಟನೆ ದೃಷ್ಟಿಯಿಂದ ಒಳ್ಳೆಯದು ಎಂದು
ಮೈಸೂರಿನಲ್ಲಿ ಈಶ್ವರಪ್ಪ ಹೇಳಿಕೆ ನೀಡಿದರು.

