ಮೈಸೂರು: ಚಾಮುಂಡಿ ಬೆಟ್ಟಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮುಂದಿನ ತಿಂಗಳು ಮೊಮ್ಮಗನ ಮದುವೆ ಹಿನ್ನಲೆ ಯಡಿಯೂರಪ್ಪ ಚಾಮುಂಡೇಶ್ವರಿ ಆಶೀರ್ವಾದ ಪಡೆದರು.
ಮನೆಯ ಪ್ರತಿಯೊಂದು ಶುಭ ಸಮಾರಂಭಕ್ಕೂ ಮುನ್ನ ಯಡಿಯೂರಪ್ಪ ಕುಟುಂಬ ಚಾಮುಂಡಿ ದರ್ಶನ ಪಡೆಯುತ್ತಾರೆ. ಮೊಮ್ಮಗನ ವೆಡ್ಡಿಂಗ್ ಕಾರ್ಡ್ ಗೆ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದರು.
ಕನ್ನಡದ ಬಗ್ಗೆ ಕಮಲ್ ಹಾಸನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ನಾನು ಅವರ ಹೇಳಿಕೆ ಖಂಡಿಸಿದ್ದೇನೆ. ಅವರ ಹೇಳಿಕೆ ಸರಿಯಿಲ್ಲ.ರಾಜಕೀಯ ಬಗ್ಗೆ ನಾನು ತಾಯಿ ಸನ್ನಿಧಿ ಯಲ್ಲಿ ಮಾತನಾಡುವುದಿಲ್ಲ ಎಂದರು.

