ಮೈಸೂರು: ಕ್ಯಾಪ್ಟನ್ ಅರ್ಜುನನ ಸ್ಮಾರಕವನ್ನು ಹೆಚ್.ಡಿ.ಕೋಟೆ ತಾಲೂಕಿನ ಡಿ.ಬಿ. ಕುಪ್ಪೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ಡಿ.ಬಿ. ಕುಪ್ಪೆಯ ಬಳ್ಳೆ ಅರಣ್ಯ ಶಿಬಿರ ಅರ್ಜುನನ ವಾಸಸ್ಥಾನದಲ್ಲಿ ನಿರ್ಮಾಣವಾಗಿರೋ ಅರ್ಜುನನ ಸ್ಮಾರಕವಾಗಿದೆ. ಆನೆ ಸೆರೆ ಕಾರ್ಯಚರಣೆಯಲ್ಲಿ ಹಾಸನದ ಯಳಸೂರು ಅರಣ್ಯದಲ್ಲಿ ವೀರ ಅರ್ಜುನ ಮರಣವನ್ನಪ್ಪಿದ್ದಾನೆ.

2023 ಡಿಸೆಂಬರ್ 4 ರಂದು ಏಕಾಂಗಿಯಾಗಿ ಹೋರಾಡಿ ಸಾವನ್ನಪ್ಪಿದ್ದ. 8 ಬಾರಿ ವಿಶ್ವ ವಿಖ್ಯಾತ ಮೈಸೂರು ಚಿನ್ನದ ಅಂಬಾರಿ ಹೊತ್ತಿದ್ದ. ಮೊದಲಿಗೆ ಅರ್ಜುನನ ವಾಸಸ್ಥಾನ ದಲ್ಲಿ ಅರ್ಜುನನ ಪ್ರತಿಮೆಯನ್ನು ಸಚಿವ. ಉದ್ಘಾಟನೆ ನೆರವೇರಿಸಿದ ರು.

2.98 ಮೀಟರ್ ಎತ್ತರ, 3.74 ಮೀಟರ್ ಉದ್ದ 650 ಕೆ.ಜಿ. ತೂಕ ಇರೋ ಅರ್ಜುನನ ಪ್ರತಿಮೆಯಾಗಿದೆ. ಉದ್ಘಾಟನೆಯಲ್ಲಿ ಭಾಗಿಯಾದ ಶಾಸಕ ಅನಿಲ್ ಚಿಕ್ಕಮಾದು, ಸಿಸಿಎಫ್ ಮಾಲತಿ,ಡಿಸಿಎಫ್ ಸೀಮಾ. ಇದ್ದರು.