ಮೈಸೂರು: ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ, ದೇವನೂರು, ತಗಡೂರು, ಚಿಕ್ಕ ಕವಲಂದೆ ಗ್ರಾಮಗಳಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಮತ್ತು ಕವಲಂದೆ ಪೊಲೀಸ್ ಠಾಣಾ ವತಿಯಿಂದ ಸಂಚಾರ ನಿಯಮ ಅರಿವು ಕಾರ್ಯಕ್ರಮದಲ್ಲಿ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ.ಬಸವರಾಜು ನೇತೃತ್ವದಲ್ಲಿ ಪೊಲೀಸರು ಬೈಕ್ ರ್ಯಾಲಿ ನಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಬಳಿಕ ಪಿಎಸ್ಐ ಬಿ.ಬಸವರಾಜು ಮಾತನಾಡಿ, ನಮ್ಮ ದೇಶದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೆ ಒಬ್ಬರು, ವರ್ಷಕ್ಕೆ ಸುಮಾರು 1.5 ಲಕ್ಷ ಜನರು ನಿರ್ಲಕ್ಷತನದಿಂದ ವಾಹನ ಚಲಾಯಿಸಿ ಅಪಘಾತವಾಗಿ ಸಾವನ್ನಪ್ಪುತ್ತಿದ್ದಾರೆ.

ಸ್ವತಃ ವಾಹನ ಸವಾರರು ಸಾವನ್ನಪ್ಪುವುದಲ್ಲದೆ, ಮತ್ತೊಬ್ಬರ ಪ್ರಾಣಕ್ಕೆ ಕೂಡಾ ತೊಂದರೆ ಮಾಡುತ್ತಾರೆ. ನಾಗರಿಕರು ತಮಗೆ ಪೊಲೀಸ್ ಸಹಾಯ ಬೇಕಾದರೆ 112 ಸಂಖ್ಯೆಗೆ ಕರೆ ಮಾಡಬೇಕು. ರಸ್ತೆ ಸಂಚಾರ ನಿಯಮಗಳ ಬಗ್ಗೆ ಎಲ್ಲೆಡೆ ವ್ಯಾಪಕವಾದ ಜನಜಾಗೃತಿ ಅಗತ್ಯವಾಗಿದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಬಿ ರಮೇಶ್, ಎಎಸ್ಐಗಳಾದ ಲಿಂಗದೇವರು, ಬಸವರಾಜು, ನಿಂಗೇಗೌಡರು, ಧಫೇದರ್‌ ಚಂದ್ರು , ಸುರೇಶ್, ಮಹೇಶ್ , ರಾಜಶೇಖರ್, ಗಣೇಶ್, ಮಂಜು, ರವಿ, ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.