ನಂಜನಗೂಡು: ಕಡೆ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ಬಾಣ ಬಿರುಸು ಕಾರ್ಯಕ್ರಮವು ಗಮನ ಸೆಳೆಯಿತು.
ದೇವಾಲಯದಲ್ಲಿ ಶ್ರೀ ನಂಜುಂಡೇಶ್ವರನಿಗೆ ಹೂವಿನ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿ ಉತ್ಸವ ಮಾಡಲಾಯಿತು. ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಬಾಣಬಿರುಸು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ನಂಜನಗೂಡಿನ ನಯನ ಕ್ಷತ್ರಿಯ ಸಮಾಜದಿಂದ ಪುರಾತನ ಕಾಲದಿಂದಲೂ ಬಾಣ ಬಿರುಸು ನಡೆಸಿಕೊಂಡು ಬರಲಾಗುತ್ತಿದೆ. ಕೋವಿಡ್ ಬಂದ ಸಂದರ್ಭದಲ್ಲಿ ಸ್ಥಗಿತ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಪುನರ್‌ಚೇತನ ನೀಡಿ ಚಾಲನೆ ನೀಡಿದರು.

