ಮೈಸೂರು: ಆಸ್ತಿಗಾಗಿ ಸಂಬಂಧಿಕರು ಗಲಾಟೆ ಮಾಡಿಕೊಂಡ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಚ್.ಡಿ.ಕೋಟೆ ತಾಲ್ಲೂಕು ಕ್ಯಾತನಹಳ್ಳಿ ಗೇಟ್‌ನಲ್ಲಿ ಘಟನೆ ನಡೆದಿದೆ.
ಯೋಗಮಣಿ ಎಂಬುವವರ ಮೇಲೆ ಹಲ್ಲೆ ಮಾಡಿರುವ ಆರೋಪ ಮಾಡಲಾಗಿದೆ. 2.5 ಎಕರೆ ಜಮೀನು ಯೋಗಮಣಿ ಪತಿ ರಾಜೇಶ್ ಅವರಿಗೆ ಸೇರಿದ ಆಸ್ತಿ.11 ದಿನದ ಹಿಂದೆ ಅನಾರೋಗ್ಯದಿಂದ ರಾಜೇಶ್ ಮೃತಪಟ್ಟಿದ್ದಾರೆ. ರಾಜೇಶ್ ಸಂಬಂಧಿಕರಾದ ಮಹದೇವಮ್ಮ, ಸೋಮ, ಸೌಮ್ಯ ಎಂಬುವವರು ಜಮೀನು ತಮಗೆ ಸೇರಬೇಕೆಂದು ಗಲಾಟೆ ಮಾಡಿದ್ದಾರೆ.
ರಾಜೇಶ್ ಅಜ್ಜಿ ನಿಂಗಮ್ಮ ಯೋಗಮಣಿ ಹಾಗೂ ಮಗ ಚಂದು ಮಗಳು ಕೋಮಲ ವಿರುದ್ದ ಗಲಾಟೆ ಮಾಡಿದ್ದಾರೆ. ಮಾರಕಾಸ್ತ್ರಗಳನ್ನು ತಂದು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ . ಯೋಗಮಣಿ ಅವರ ಕೈ ಮುರಿದಿದ್ದು ಮಗ ಚಂದು ಸಂಬಂಧಿ ಅವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

