ಮೈಸೂರು: ಫೆಂಗಲ್ ಚಂಡ ಮಾರುತದ ಎಫೆಕ್ಟ್ ನಿಂದ ಮೈಸೂರು ಜಿಲ್ಲಾದ್ಯಂತ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಕಟಾವು ಮಾಡಿದ್ದ ಭತ್ತ ಜಲಾವೃತ್ತವಾಗಿದ್ದು, ಬೆಳೆ ನಾಶವಾಗಿ, ಸಂಕಷ್ಟದಲ್ಲಿ ಅನ್ನದಾತರಿರುವ ಘಟನೆ ಹುಣಸೂರು ತಾಲೂಕಿನ ಕಾಳೆನಹಳ್ಳಿಯಲ್ಲಿ ನಡೆದಿದೆ.

ಜಮೀನಿನಲ್ಲಿ ಕಟಾವು ಮಾಡಿದ್ದ ಭತ್ತ ಜಲಾವೃತ್ತವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಂಗಾಲಾಗಿದ್ದಾರೆ. ರೈತರು ಸೂಕ್ತ ಪರಿಹಾರಕ್ಕೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.


