ಮೈಸೂರು : ಫೆಂಗಲ್ ಚಂಡಮಾರುತ ಎಫೆಕ್ಟ್ ನಿಂದ ಚಾಮುಂಡಿ ಬೆಟ್ಟದಿಂದ ಬಂಡೆಗಳು ರಸ್ತೆಗೆ ಉರುಳಿರುವ ಘಟನೆ ನಡೆದಿದೆ. ನಿರಂತರ ಮಳೆಗೆ ಕಲ್ಲು ಬಂಡೆಗಳು ಜಾರಿದೆ. ಚಾಮುಂಡಿ ಬೆಟ್ಟದ ಮುಖ್ಯ ರಸ್ತೆಗೆ ಬಂಡೆಗಳು ಉರುಳಿದೆ. ನಿರಂತರ ಮಳೆಗೆ ಮಣ್ಣು ಸಡಿಲಗೊಂಡಿದೆ.
ಬೆಟ್ಟದ ರಸ್ತೆಗೆ ಮಗ್ಗುಲಲ್ಲಿದ್ದ ಬಂಡೆಗಳು ಉರುಳಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ರಸ್ತೆಗುರುಳಿದ ಬಂಡೆಗಳಿಂದ ಸಂಚಾರಕ್ಕೆ ಸ್ವಲ್ಪ ಸಮಯ ಅಡಚಣೆ ಉಂಟಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

