ಮೈಸೂರು: ಲೇಡಿ ಸೂಪರ್ ವೈಸರ್ ನೀಡಿದ ಕಿರುಕುಳಕ್ಕೆ ಬೇಸತ್ತ ಮಹಿಳಾ ಉದ್ಯೋಗಿ ಡೆತ್ ನೋಟ್ ಬರೆದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಹಿನಕಲ್ ನಲ್ಲಿ ನಡೆದಿದೆ.
ನಾಗೇಶ್ವರಿ ಆತ್ಮಹತ್ಯೆಗೆ ಶರಣಾದ ಮಹಿಳಾ ಉದ್ಯೋಗಿ. ಟಾಟಾ ಪ್ರಮೋಟರ್ ಆಗಿ ನಾಗೇಶ್ವರಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. 4 ತಿಂಗಳ ಹಿಂದೆ ಕಂಪನಿಗೆ ಸೂಪರ್ವೈಸರ್ ಆಗಿ ಡಾಲಿ ಎಂಬುವರು ನೇಮಕವಾದರು. ನನ್ನದಲ್ಲದ ತಪ್ಪಿಗೆ ನನ್ನ ಟಾರ್ಗೆಟ್ ಮಾಡಿ ಕಿರುಕುಳ ಕೊಟ್ಟಿದ್ದಾರೆ. ಕಳೆದ 4 ತಿಂಗಳಿನಿಂದ ಒಂದು ವೀಕ್ ಆಫ್ ಕೂಡ ಕೊಟ್ಟಿಲ್ಲ. ಎಮರ್ಜೆನ್ಸಿ ರಜೆಗಳನ್ನು ಕೂಡ ಕೊಟ್ಟಿಲ್ಲ.ಪ್ರಶ್ನೆ ಮಾಡಿದ್ರೆ ಕೆಲಸದಿಂದ ಕಿತ್ತು ಹಾಕಿದ್ರು.
ನೋಟಿಸ್ ಪಿರಿಯಡ್ ಕೂಡ ಮಾಡಿಸಿಲ್ಲ. ಡಾಲಿ ಮೇಡಂ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಡೆತ್ ನೋಟ್ ಬರೆದಿದ್ದಾರೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

