ನಂಜನಗೂಡು: ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ಖಂಡಿಸಿ ನಂಜನಗೂಡಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಜಮಾಯಿಸಿದ ರೈತರು ಅರಣ್ಯ ಸಚಿವರಿಗೆ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ಅರಣ್ಯ ಅಂಚಿನ ಗ್ರಾಮಗಳ ರೈತರು ಅರಣ್ಯದೊಳಗಿನ ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ಅರಣ್ಯಕ್ಕೆ ಬಿಡಬಾರದೆಂದು ಹೇಳಿಕೆ ನೀಡಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

ಕಾಡಂಚಿನ ರೈತರು ತಮ್ಮ ಪಶುಗಳನ್ನು ಅರಣ್ಯದೊಳಗೆ ಬಿಟ್ಟರೆ ಸಾಂಕ್ರಾಮಿಕ ರೋಗಗಳು ಬರುತ್ತವೆ ಎಂಬ ಕಾರಣ ನೀಡಿದ್ದಾರೆ. ಹಾಗೆಯೇ ಮದ್ರಾಸ್ ಹೈಕೋರ್ಟ್ ಯಾವುದೇ ಕಾರಣಕ್ಕೂ ಜಾನುವಾರುಗಳನ್ನು ಅರಣ್ಯಕ್ಕೆ ಪ್ರವೇಶ ನೀಡಬಾರದೆಂಬ ಆದೇಶ ನೀಡಿದೆ.ಆ ತೀರ್ಮಾನಕ್ಕೆ ಬದ್ಧವಾಗಿದೆ ಎಂದ್ದಿದಾರೆ.

ಇತ್ತೀಚಿಗೆ ಸಂಭವಿಸಿದ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷ ಹಾಕಿರುವ ಪರಿಣಾಮದಿಂದ ಹುಲಿಗಳು ಸಾವನಪ್ಪಿದವು.ಅದಕ್ಕೆಲ್ಲ ಅರಣ್ಯದೊಳಗೆ ರೈತರು ಜಾನುವಾರುಗಳನ್ನು ಮೇಯಿಸುವ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಅರಣ್ಯ ಮತ್ತು ನದಿ ಪ್ರದೇಶಗಳು ನಾಗರಿಕತೆಯ ಉಗಮಕ್ಕೆ ಕಾರಣವಾಗಿದೆ. ಮಾನವರು ಕಾಡಿನಿಂದ ಬಂದವರು ಕಾಡಿನೊಳಗೆ ದನಕರುಗಳನ್ನು ಮೇವನ್ನು ಮೇಯುಸುವುದರಿಂದ.ಏನು ಸಮಸ್ಯೆಯಾಗುತ್ತದೆ ಎಂಬುದು ಪ್ರಶ್ನೆಯಾಗಿದೆ.

ಇದು ವೈಜ್ಞಾನಿಕ ಕಾರಣವಾಗಿದೆ. ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆಗಳು ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ. ತಮ್ಮ ಹೇಳಿಕೆಯನ್ನು ಸಚಿವರು ವಾಪಸ್ಸು ಪಡೆದುಕೊಳ್ಳಬೇಕು .ಇವತ್ತು ದೇಶ ಉಳಿದಿದೆ ಎಂದರೆ ರೈತರಿಂದ. ಆದರಿಂದ ಅರಣ್ಯ ಸಚಿವರು ರೈತ ವಿರೋಧಿ ,ಪಸು ಪಾಲಕರ ವಿರೋಧಿ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಕೃಷ್ಣಾಪುರ ಮೋಹನ್ ಸೇರಿದಂತೆ ಹಲವರು ಭಾಗವಹಿಸಿದ್ದರು.