ಮೈಸೂರು: ವಿದ್ಯುತ್ ಸ್ಪರ್ಶದಿಂದ ರೈತ ಸಾವನ್ನಪ್ಪಿದ ದುರಂತ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಬಟ್ಟಾಳಿಗೆ ಹುಂಡಿ ಗ್ರಾಮದಲ್ಲಿ ನಡೆದಿದೆ.
ಮಂಜು (44) ಮೃತ ರೈತ. ನಿನ್ನೆ ಮಧ್ಯಾಹ್ನ ಕಬ್ಬಿನ ಗದ್ದೆಗೆ ನೀರು ಹಾಯಿಸಲು ತೆರಳಿದ್ದ ಮಂಜು ಸಂಜೆಯಾದರೂ ಮನೆಗೆ ಹಿಂದಿರುಗಿಲ್ಲ.ಕುಟುಂಬಸ್ಥರು ಗದ್ದೆಗೆ ಹೋದಾಗ ಮಂಜು ಶವವಾಗಿ ಪತ್ತೆಯಾಗಿದ್ದಾರೆ. ಮಂಜು ಮೇಲೆ ವಿದ್ಯುತ್ ವೈರು ಬಿದ್ದಿರುವುದು ಕಂಡು ಬಂದಿದೆ.
ವಿದ್ಯತ್ ಇಲಾಖೆ ನಿರ್ಲಕ್ಷ್ಯವೇ ಮಂಜು ಸಾವಿಗೆ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.ಮೃತನ ಮಗನಿಗೆ ಇಲಾಖೆಯಲ್ಲಿ ಕೆಲಸ ನೀಡಬೇಕು ಹಾಗೂ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

