ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರದ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರ 31ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮಾಜಿ ಸಂಸದರಾದ ದಿವಂಗತ ಆರ್. ಧ್ರುವನಾರಾಯಣ್ ರವರ ಪುತ್ಥಳಿಯನ್ನು ಶಾಸಕ ದರ್ಶನ್ ಧ್ರುವನಾರಾಯಣ್ ರವರಿಗೆ ನೀಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಶಾಸಕರ ನಿವಾಸದಲ್ಲಿ ವರುಣಾ ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಹಾಗೂ ಸಮಾಜಸೇವಕ ತಗಡೂರು ಗಾರ್ಡನ್ ಮಹೇಶ್ ರವರು ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ, ಮಹದೇಶ್ವರ ಗಾರ್ಡನ್ ವತಿಯಿಂದ ದಿವಂಗತ ಆರ್. ಧ್ರುವ ನಾರಾಯಣ್ ರವರ ಪುತ್ಥಳಿಯನ್ನು ಉಡುಗೋರೆಯಾಗಿ ನೀಡಿದರು.

ಬಳಿಕ ಯುವ ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕ ಗಾರ್ಡನ್ ಮಹೇಶ್ ಮಾತನಾಡಿ, ರಾಜ್ಯದಲ್ಲಿ ಅತಿ ಕಿರಿಯ ವಯಸ್ಸಿನ ಶಾಸಕರಾಗಿ ದರ್ಶನ್ ಧ್ರುವನಾರಾಯಣ್ ರವರು ಕೆಲಸ ಮಾಡುತ್ತಿದ್ದಾರೆ. ತಂದೆಯವರ ಸ್ಥಾನವನ್ನು ತುಂಬಲು ಶ್ರಮಿಸುತ್ತಿದ್ದಾರೆ. ಅವರು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ ಮಾನಸಿಕವಾಗಿ ನಮ್ಮೊಟ್ಟಿಗೆ ಯಾವಾಗಲೂ ಇದ್ದಾರೆ. ದರ್ಶನ್ ರವರಿಗೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉನ್ನತ ಸ್ಥಾನಮಾನಗಳು ಸಿಗಲಿ ಎಂದು ಶುಭ ನುಡಿಗಳನ್ನು ನುಡಿದು ಹಾರೈಸಿದರು. ಈ ಸಂದರ್ಭದಲ್ಲಿ ಜಿ.ಮರಳ್ಳಿ ಜಗದೀಶ್ವರ, ತೊರೆಮಾವು ಗಿರೀಶ್, ನಂಜನಗೂಡು ಸುದೀರ್‌ ಇದ್ದರು.